ಲಂಡನ್​:ಇಲ್ಲೊಂದು ವಿಚಿತ್ರ ಕೇಸ್​ನಲ್ಲಿ ಯುವಕನೊಬ್ಬ ಸಿಲುಕಿ ಇದೀಗ ಒದ್ದಾಡುತ್ತಿದ್ದಾನೆ. ತನ್ನ ಅಪ್ಪನಿಗೆ ತಾನೊಬ್ಬನೇ ಮಗ ಎಂದುಕೊಂಡಿದ್ದ ಈತನಿಗೆ ಯಾರೂ ನಂಬಲು ಸಾಧ್ಯವಾಗದಂಥ ಭಯಾನಕ ಸತ್ಯ ಗೊತ್ತಾಗಿದೆ.
ಅದೇನೆಂದರೆ ತಮಗೆ ಇನ್ನೂ ಒಂದು, ಎರಡು, ಮೂರು ಅಲ್ಲ… ಬರೋಬ್ಬರಿ 30 ಸಹೋದರ, ಸಹೋದರಿಯರು ಇರುವ ಸತ್ಯ ಇದೀಗ ತಿಳಿದು ಬಂದಿದ್ದು, ಇನ್ನೂ ಎಷ್ಟು ಮಂದಿ ಇರಬಹುದು ಎಂದು ಹುಡುಕಾಟ ನಡೆಸಿದ್ದಾನಂತೆ! ಇಷ್ಟೇ ಆಗಿದ್ದರೆ ಪರವಾಗಿರಲಿಲ್ಲ.
ವಿಚಿತ್ರ ಎಂದರೆ ಇವನು ಯಾರು ತನ್ನ ತಂದೆ ತಿಳಿದುಕೊಂಡಿದ್ದನೋ ಅವನು ಇವನ ತಂದೆಯಲ್ಲವಂತೆ. ಬೇರೆಯೊಬ್ಬನು ಇವರ ತಂದೆಯಂತೆ. ಆ ತಂದೆಗೆ ಇವನೂ ಸೇರಿ 31 ಮಂದಿ ಮಕ್ಕಳಂತೆ. ಇನ್ನೂ ವಿಚಿತ್ರ ಎಂದರೆ ಈತನೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದು, ಆಮೇಲೆ ನೋಡಿದರೆ ಆಕೆಯ ಡಿಎನ್​ಎ ಗೂ ಈತನ ಡಿಎನ್​ಎಗೂ ಮ್ಯಾಚ್​ ಆಗುತ್ತಿದೆ. ಇದರ ಅರ್ಥ, ಆ ಯುವತಿ ಕೂಡ ತಂದೆಯ ಮಗಳು ಅರ್ಥಾತ್​ ಈತನ ತಂಗಿ!
ಇಂಥದ್ದೊಂದು ವಿಚಿತ್ರ ನಡೆದಿರುವುದು ಲಂಡನ್​ನಲ್ಲಿ. ಆ್ಯಂಡಿ ನಾಬಿಲ್​ ಎಂಬ ಯುವಕ ಇದೀಗ ತನಗಾಗಿರುವ ಅನ್ಯಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ತೋಡಿಕೊಳ್ಳುತ್ತಿದ್ದಾನೆ.
ಫುಲ್​ ಕನ್​ಫ್ಯೂಷನ್​ ಇದೆಯಲ್ಲವೆ? ಅಸಲಿಗೆ ಆಗಿದ್ದೇನೆಂದರೆ, ಆ್ಯಂಡಿಯ ದಾಖಲೆಯಲ್ಲಿ ತಂದೆಯ ಹೆಸರಿನಲ್ಲಿ ಒಬ್ಬ ವ್ಯಕ್ತಿಯ ಹೆಸರು ಇದ್ದು, ಅವನೇ ತಂದೆಯೆಂದುಕೊಂಡಿದ್ದ ಆ್ಯಂಡಿ. ಅವರೆಲ್ಲರೂ ಒಟ್ಟಿಗೇ ಇದ್ದರು. ಆದರೆ ಅದೊಂದು ದಿನ ಆ್ಯಂಡಿಗೆ ಏನೋ ಸಂದೇಹ ಬಂದು ಡಿಎನ್​ಎ ಪರೀಕ್ಷೆ ಮಾಡಿಸಿಕೊಂಡಿದ್ದಾನೆ. ಆಗಲೇ ಅಸಲಿಯತ್ತು ಗೊತ್ತಾಗಿ ಈತ ತನ್ನ ತಂದೆಯಲ್ಲ ಎಂದು ತಿಳಿದಿದೆ. ನಂತರ ವಿಚಾರಣೆ ಮಾಡಿದಾಗ ಯಾವುದೋ ವ್ಯಕ್ತಿ ತನ್ನ ವೀರ್ಯವನ್ನು ನೀಡಿದ್ದರಿಂದ ಆ ವೀರ್ಯದಿಂದ ತಾನು ಹುಟ್ಟಿದ್ದು ಎಂದು ತಿಳಿದಿದೆ.
ತನ್ನ ಅಸಲಿ ತಂದೆಯನ್ನು ಹುಡುಕಿ ಹೊರಟ ಆ್ಯಂಡಿ ನಂತರ ಈ ಬಗ್ಗೆ ಇನ್ನಷ್ಟು ವಿಚಾರಣೆ ಮಾಡಿದಾಗ ವೀರ್ಯ ನೀಡಿದ ವ್ಯಕ್ತಿ ಇನ್ನೂ ಅನೇಕ ಬಾರಿ ಅನೇಕ ಮಹಿಳೆಯರಿಗೆ ವೀರ್ಯದಾನ ಮಾಡಿದ್ದು, ಆ ವೀರ್ಯದಿಂದ ಇನ್ನೂ 30 ಮಕ್ಕಳು ಬೇರೆ ಬೇರೆಯವರಿಗೆ ಹುಟ್ಟಿರುವುದು ತಿಳಿದಿದೆ. ಅಂದರೆ ಅಸಲಿಗೆ ಎಲ್ಲರೂ ಇವನ ಸಹೋದರ, ಸಹೋದರಿಯರು! ಅವರಲ್ಲಿ ಕೆಲವರು ಇವನಿಗೆ ಸಿಕ್ಕಿದ್ದು ಫೋಟೋ ಕ್ಲಿಕ್ಕಿಸಿಕೊಂಡಿದ್ದಾನೆ. ಆದರೆ ತನ್ನ ಪ್ರೇಮಿ ಕೂಡ ಅದರಲ್ಲಿ ಒಬ್ಬಳು ಎಂದು ತಿಳಿದಿದೆ. ಇದೀಗ ತಾನು ಏನು ಮಾಡಲಿ ಎಂದು ಯುವಕ ಗೋಳಾಡುತ್ತಿದ್ದಾನೆ.
ಅತ್ತೆ- ಸೊಸೆ ಜಗಳದಲ್ಲಿ ಹೈರಾಣಾಗಿದ್ದೇನೆ, ಯಾರ ಪರ ವಹಿಸಲೂ ಆಗ್ತಿಲ್ಲ- ಪ್ಲೀಸ್​ ದಾರಿ ತೋರಿ…

ಅತ್ತೆಗೆ ಟಿವಿ ಹುಚ್ಚು, ಸೊಸೆಗೆ ಮೊಬೈಲ್​ ಹುಚ್ಚು… ಇಬ್ಬರ ಹುಚ್ಚಿನಲ್ಲಿ ಪೊಲೀಸರು ಸುಸ್ತೋ ಸುಸ್ತು!

ಏಲಿಯನ್‌ ಥರ ಕಾಣಿಸಲು ಮೂಗು, ತುಟಿ, ಕಿವಿ, ನಾಲಿಗೆ ಕತ್ತರಿಸಿಕೊಂಡ- ಎಲ್ಲವೂ ಅಮ್ಮನಿಗಾಗಿಯಂತೆ!

ವೀರ್ಯಾಣು ಉತ್ಪತ್ತಿಯೇ ಆಗುತ್ತಿಲ್ಲವೆಂದಾದರೆ ಈ ಕಾರಣಗಳೂ ಇರಬಹುದು… ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − five =
Remember me
