ಬಾಲಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ಹಲವೆಡೆ ವಿಪರೀತವಾಗಿ ಸುರಿಯುತ್ತಿರುವ ಮಳೆಯಿಂದ ವಿದ್ಯುತ್​ ವ್ಯತ್ಯಯವಾದ ಹಿನ್ನೆಲೆಯಲ್ಲಿ ಬಾಲಿಯ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು ಮೊಬೈಲ್ ಲೈಟ್ ಮೊರೆ ಹೋದ ಘಟನೆ ನಡೆದಿದೆ.
ಶನಿವಾರ ರಾತ್ರಿ ಏಕಾಏಕಿ ವಿದ್ಯುತ್ ಕಡಿತಗೊಂಡ ಹಿನ್ನೆಲೆಯಲ್ಲಿ ರೋಗಿಗಳು, ವೈದ್ಯರು ಪರದಾಡಬೇಕಾಯಿತು. ಬೇರೆ ದಾರಿ ಇಲ್ಲದೇ ವೈದ್ಯರು ರೋಗಿಗಳನ್ನು ತಪಾಸಣೆ ನಡೆಸಲು ಮೊಬೈಲ್ ಲೈಟ್ ಮೊರೆ ಹೋದರು.
ಆಸ್ಪತ್ರೆಯಲ್ಲಿ ಜನರೇಟರ್​ ಇದ್ದರೂ ಅದು ಪದೇ ಪದೇ ಕಳುವಾಗುತ್ತದೆ ಎನ್ನುವ ಕಾರಣಕ್ಕೆ ಬ್ಯಾಟರಿಗಳನ್ನು ತೆಗೆದು ಇಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅದಕ್ಕೆ ಬ್ಯಾಟರಿ ಅಳವಡಿಸಲು ಕನಿಷ್ಠ 15-20 ನಿಮಿಷ ಬೇಕಾಗುತ್ತದೆ ಎನ್ನುವ ಕಾರಣಕ್ಕೆ ರೋಗಿಯ ಜೀವಕ್ಕೆ ಅಪಾಯ ಎದುರಾಗಬಹುದು ಎಂದು ವೈದ್ಯರು ಮೊಬೈಲ್​ ಟಾರ್ಚ್​ ಮೊರೆ ಹೋಗಿದ್ದಾರೆ.
ಮಹಿಳೆಯೊಬ್ಬರನ್ನು ಮಲಗಿಸಿ ವೈದ್ಯರು ತಪಾಸಣೆ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಕುರಿತು ಜಿಲ್ಲಾ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಮತ್ತು ಪ್ರಭಾರ ಮುಖ್ಯಾಧಿಕಾರಿ ಡಾ.ಆರ್.ಡಿ.ರಾಮ್ ಕೂಡ ಸ್ಪಷ್ಟನೆ ನೀಡಿದ್ದಾರೆ. ಜನರೇಟರ್​ ಇದ್ದರೂ ಅದನ್ನು ಕೂಡಲೇ ಅಳವಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅದನ್ನು ಅಳವಡಿಸುವ ವೇಳೆ ಮೊಬೈಲ್​ ಟಾರ್ಚ್​ ಮೊರೆ ಹೋಗಿದ್ದೇವೆ ಎಂದಿದ್ದಾರೆ. ಆದರೆ ಸದಾ ಚರ್ಚೆಯಲ್ಲಿ ಇರುವ ಉತ್ತರ ಪ್ರದೇಶದಲ್ಲಿ ಇಂಥದ್ದೊಂದು ಘಟನೆ ನಡೆದಿರುವ ಕಾರಣ, ಬಿಜೆಪಿ ವಿರೋಧಿಗಳು ಸಿಎಂ ಯೋಗಿ ಆದಿತ್ಯನಾಥ ಅವರ ಸರ್ಕಾರವನ್ನು ಟೀಕಿಸಲು ಅಸ್ತ್ರವಾಗಿಸಿಕೊಂಡಿದ್ದಾರೆ. (ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ: (ಕೃಪೆ ಬಲ್ಲಿಯಾ ನ್ಯೂಸ್​)

ಬಿಜೆಪಿ ನಾಯಕಿ, ನಟಿ ಸೋನಾಲಿ ನಿಗೂಢ ಸಾವು: ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಗೋವಾ ಸಿಎಂ

ನಿಂತಿದ್ದ ಟ್ರಕ್​ಗೆ ಬಸ್​ ಡಿಕ್ಕಿ: ಬೆಳ್ಳಂಬೆಳಗ್ಗೆ ಭೀಕರ ಅಪಘಾತಕ್ಕೆ ಏಳು ಮಂದಿ ಬಲಿ- ಹಲವರಿಗೆ ಗಾಯ

BREAKING: ಜ್ಞಾನವಾಪಿ ಮಸೀದಿಯಲ್ಲಿನ ಶೃಂಗಾರ ಗೌರಿ, ಶಿವಲಿಂಗದ ಪೂಜೆ: ವಿಚಾರಣೆಗೆ ಸಿಕ್ಕಿತು ಅನುಮತಿ- ಕೋರ್ಟ್​ನಿಂದ ಮಹತ್ವದ ತೀರ್ಪು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − seven =
Remember me
