ವಾಷಿಂಗ್ಟನ್:ನಾಯಿಗೂ, ಮನುಷ್ಯನಿಗೂ ಬಿಡಿಸಲಾರದ ನಂಟಿದೆ. ಸಾಕು ನಾಯಿಗಳು ಎಂದರೆ ಅದೆಷ್ಟೋ ಮಂದಿಗೆ ಇನ್ನಿಲ್ಲದ ಪ್ರೀತಿ. ಅದರಲ್ಲಿಯೂ ಮಕ್ಕಳಿಲ್ಲದ ದಂಪತಿಗೆ ಸಾಕು ನಾಯಿಗಳೇ ಮಕ್ಕಳು. ನಿಷ್ಠೆಗೆ ಹೆಸರುವಾಸಿಯಾಗಿರುವ ನಾಯಿಗಳಿಗೂ ತಮ್ಮ ಮಾಲೀಕನನ್ನು ಕಂಡರೆ ಅಷ್ಟೇ ಅಕ್ಕರೆ.
ಇಂಥ ಪ್ರೀತಿಯಿಂದಲೇ ಇಲ್ಲೊಬ್ಬ ವ್ಯಕ್ತಿ ತನ್ನ ನಾಯಿಗೆ ಸುಮಾರು 4 ಲಕ್ಷ ರೂಪಾಯಿಗಳ ಭವ್ಯ ಮನೆ ಕಟ್ಟಿಸಿಕೊಟ್ಟಿದ್ದಾನೆ. ಈ ಮನೆಯೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗುತ್ತಿತ್ತು, ಸಹಸ್ರಾರು ಮಂದಿ ನಾಯಿ ಪ್ರೀತಿಗಾಗಿ ಮೆಚ್ಚುಗೆ ಸೂಸಿದ್ದರೆ, ಇನ್ನು ಕೆಲವರು ಬಡವರಿಗೆ ಈ ಹಣವನ್ನು ಕೊಟ್ಟಿದ್ದರೆ ಅವರಿಗಾದರೂ ಒಂದು ಸೂರು ಆಗುತ್ತಿತ್ತು ಎಂದಿದ್ದಾರೆ.
ಹೀಗೆ ನಾಯಿ ಟೆಡ್ಡಿಯ ಮೂಲಕ ಜನಪ್ರಿಯತೆ ಪಡೆದಿರುವ ವ್ಯಕ್ತಿ ದಕ್ಷಿಣ ಕಾಲಿಫೋರ್ನಿಯಾದ ಜೋನಾಥನ್ ಲೊವರ್ ಎಂಬಾತ. ನಾಯಿಯ ಮನೆಯ ಹೆಸರು “ಟೆಡ್ಡಿ ಹೌಸ್. ವಿಚಿತ್ರ ಎಂದರೆ ಜೀನಾಥನ್‌ ತನ್ನ ನಾಯಿಗಾಗಿ ಮನೆಯಲ್ಲಿ ದುಬಾರಿ ಟೀವಿ ಕೂಡ ಹಾಕಿಸಿದ್ದಾನೆ. ಗೋಡೆಯ ಮೇಲೆ ನಾಯಿಯ ಬೃಹದಾಕಾರದ ಫೋಟೋ ಇದ್ದು, ಮನೆಯ ಒಳಗೆ ಪಾಲಿಶ್ ಮಾಡಿದ ಮರದ ನೆಲಹಾಸು ಇದೆ. ಇದರ ಮೇಲೆ ದುಬಾರಿ ಬೆಲೆ ಬಾಳುವ ಮ್ಯಾಟ್ ಹೊದಿಸಲಾಗಿದ್ದು, ಹೊರಗಡೆ ಸುಂದರ ಉದ್ಯಾನದ ಸೊಗಸನ್ನು ನಾಯಿ ನೋಡುವುದಕ್ಕಾಗಿ ಭವ್ಯ ಕಿಟಕಿ ಮಾಡಿಸಲಾಗಿದೆ. ಮಾತ್ರವಲ್ಲದೇ ಇದಕ್ಕಾಗಿ ಜಿಮ್‌ ಕೂಡ ನಿರ್ಮಿಸಲಾಗಿದೆ.
ಎಮರ್ಜೆನ್ಸಿ ಇದೆ, ಅರ್ಜೆಂಟಾಗಿ ಸೆಕ್ಸ್‌ಗೆ ಹೋಗ್ಬೇಕು, ಇ- ಪಾಸ್‌ ಕೊಡಿ ಎಂದು ಅರ್ಜಿ: ಮುಂದಾದದ್ದೇ ರೋಚಕ…

ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!

ಮದ್ವೆಯಾದಾಗಿನಿಂದಲೂ ದೂರ ಮಲಗುತ್ತಿರೋ ಪತಿಯನ್ನು ಕಟ್ಕೊಂಡು ಏನ್‌ ಮಾಡ್ಲಿ ಮೇಡಂ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
