ನಾಗ್ಪುರ:ಸರ್ಕಾರಿ ಆಸ್ಪತ್ರೆ ಎಂದರೆ ಮೂಗುಮುರಿಯುವವರೇ ಹೆಚ್ಚು. ಅಲ್ಲಿ ಸೌಲಭ್ಯಗಳು ಸರಿ ಇರುವುದಿಲ್ಲ ಎಂದುಕೊಂಡು ದುಡ್ಡು ಖರ್ಚಾದರೂ ಪರವಾಗಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗುತ್ತೇವೆ ಎನ್ನುವವರೆಲ್ಲಾ ಬಹುತೇಕ ಮಂದಿ. ಅವುಗಳ ನಡುವೆ ಎಷ್ಟೋ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿವೆ, ಈ ನಿಟ್ಟಿನಲ್ಲಿ ಪ್ರಯತ್ನಗಳೂ ಸಾಗಿವೆ.
ಆದರೆ ಬೀದಿನಾಯಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಕಾರುಬಾರು ನಡೆಸುವ ದೃಶ್ಯ ಇತ್ತೀಚಿನ ದಿನಗಳಲ್ಲಿ ಕೆಲವು ಕಡೆಗಳಿಂದ ವರದಿಯಾಗುತ್ತಿವೆ.
ಈಗ ಮಹಾರಾಷ್ಟ್ರದ ನಾಗ್ಪುರ ಸರ್ಕಾರ ಆಸ್ಪತ್ರೆಯ ಸರದಿ. ನಾಗ್ಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ (ಜಿಎಂಸಿ) ರೋಗಿಗಳ ವಾರ್ಡ್ ಒಳಗೆ ಬೀದಿನಾಯಿಯೊಂದು ಅಡ್ಡಾದಿಡ್ಡಿಯಾಗಿ ಓಡಾಟ ನಡೆಸಿದೆ. ರೋಗಿಗಳು ಹಾಗೂ ಅವರ ಸಂಬಂಧಿಕರು ಮಲಗಿಕೊಂಡಿರುವ ಜಾಗದಲ್ಲಿಯೇ ನಿರಾತಂಕವಾಗಿ ಓಡಾಡಿಕೊಂಡಿರುವ ನಾಯಿ, ಅಲ್ಲಿ ಇಟ್ಟಿರುವ ವಸ್ತುಗಳನ್ನು ಮೂಸಿ ನೋಡುತ್ತಿವೆ.
Maharashtra: Video of stray dogs inside patient ward at Government Medical College(GMC) Nagpur goes viral
"We're investigating the incident to verify facts which surfaced in the purported video. We will take action against the people responsible," says Superintendent, GMC Nagpurpic.twitter.com/6SGqWlXqVI
— ANI (@ANI)February 3, 2021

ಸ್ಥಳದಲ್ಲಿಯೇ ಇರುವವರು ಅದರ ವಿಡಿಯೋ ಮಾಡಿಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಮಹಾರಾಷ್ಟ್ರ ಸರ್ಕಾರವನ್ನು ಕಮೆಂಟಿಗರು ಛೀಮಾರಿ ಹಾಕಲು ಶುರು ಮಾಡಿದ್ದಾರೆ ಇವುಗಳ ಸಾಕಷ್ಟು ಫೋಟೋಗಳೂ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಲೇ ಮಹಾರಾಷ್ಟ್ರ ಸರ್ಕಾರ ಎಚ್ಚೆತ್ತುಕೊಂಡಿದೆ.
ಈ ಫೋಟೋ ಹಾಗೂ ವಿಡಿಯೋದಲ್ಲಿ ಇರುವ ಸಂಗತಿಗಳನ್ನು ಆಧರಿಸಿ ಕೂಡಲೆ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಜಿಎಂಸಿ ನಾಗ್ಪುರದ ಅಧೀಕ್ಷಕರು ಹೇಳಿದ್ದಾರೆ.
ಮೊದಲ ರಾತ್ರಿಯಿಂದಲೂ ಗಂಡ ತಿರುಗಿ ನೋಡಿಲ್ಲ- ಅವರ ಜತೆ ಹೇಗೆ ಬಾಳಲಿ?

ಪ್ರಿಯತಮೆ ಹೇಳಿದಂತೆ ಮನೆಯಲ್ಲಿ ಯಾರೂ ಇಲ್ಲದಾಗ ರಾತ್ರಿ ಗುಟ್ಟಾಗಿ ಮನೆಗೆ ಬಂದ… ಆಮೇಲೆ?

ಶಿರೋಮಣಿ ಅಕಾಲಿ ದಳದ ಮುಖ್ಯಸ್ಥನ ಮೇಲೆ ಗುಂಡಿನ ದಾಳಿ- ವಿಡಿಯೋದಲ್ಲಿ ಕೃತ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 16 =
Remember me
