ಲಖನೌ:ರೋಗಿಗಳಿಗೇ ಬೆಡ್​ ಇಲ್ಲ ಎಂದು ಎಷ್ಟೋ ಬಾರಿ ಪರದಾಡುವುದು ಇದೆ. ಅಂಥದ್ದರಲ್ಲಿ ಉತ್ತರ ಪ್ರದೇಶದ ಆಸ್ಪತ್ರೆಯೊಂದರಲ್ಲಿ ಬೀದಿನಾಯಿ ಹಾಯಾಗಿ ಮಲಗಿಕೊಂಡಿದೆ. ಯಾವುದೇ ಟೆನ್ಷನ್​ ಇಲ್ಲದೇ, ಮೆತ್ತನೆಯ ಹಾಸಿಗೆಯ ಮೇಲೆ ಹಾಯಾಗಿ ನಾಯಿ ಮಲಗಿಕೊಂಡಿದ್ದು, ಅದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಉತ್ತ ಪ್ರದೇಶದ ಸಿವಿಲ್​ ಲೈನ್ಸ್​ ಪ್ರದೇಶದಲ್ಲಿರುವ ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಆಸ್ಪತ್ರೆಗಳ ಕುರಿತು ಅಲ್ಲಿಯ ಸಿಬ್ಬಂದಿ ಎಷ್ಟು ಕಾಳಜಿ ವಹಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಹಿಡಿದ ಕನ್ನಡಿಯಾಗಿದ್ದು, ಸಾರ್ವಜನಿಕರಿಂದ ವಿಪರೀತ ಆಕ್ಷೇಪ ವ್ಯಕ್ತವಾಗುತ್ತಿದೆ.
ಆಸ್ಪತ್ರೆಯ ಎರಡನೆಯ ವಾರ್ಡ್​ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿರುವ ಶಸ್ತ್ರಚಿಕಿತ್ಸಾ ವಾರ್ಡ್​ನಲ್ಲಿ ಇರುವ ಹಾಸಿಗೆಯ ಮೇಲೆ ನಾಯಿ ಮಲಗಿದೆ. ಬೀದಿನಾಯಿಯೊಂದು ಎರಡನೆಯ ಮಹಡಿ ಹತ್ತಿ ಅಲ್ಲಿರುವ ವಾರ್ಡ್​ ಒಳಕ್ಕೆ ಹೋಗಿ, ಬೆಡ್​ ಏರಿ ಮಲಗುವವರೆಗೂ ಆಸ್ಪತ್ರೆಯ ಸಿಬ್ಬಂದಿ ಏನು ಮಾಡುತ್ತಿದ್ದರು? ಒಂದು ವೇಳೆ ಯಾರ ಗಮನಕ್ಕೂ ಬಾರದೇ ಅದು ಒಳಗೆ ಹೋಗಿದ್ದೇ ಆಗಿದ್ದರೆ, ಒಳಗೆ ಹೋದ ಮೇಲಾದರೂ ಯಾರೂ ಗಮನಿಸಿಲ್ಲವೆ ಎನ್ನುವುದು ಇದೀಗ ಪ್ರಶ್ನಾರ್ಥವಾಗಿದೆ.
ಈ ಹಿಂದೆ ಮಂಡ್ಯದ ಸರ್ಕಾರ ಆಸ್ಪತ್ರೆಯಲ್ಲಿಯೂ ಇಂಥದ್ದೊಂದು ಘಟನೆ ನಡೆದು ಅದು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿತ್ತು.
ಶಸ್ತ್ರಸಜ್ಜಿತರಾಗಿ ಬಂದು ಬಂದೂಕು ತೋರಿದರೂ ಕಾದಾಡಿದ ಯುವಕರು: ವಿಡಿಯೋ ವೈರಲ್​

ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!

ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 3 =
Remember me
