ನವದೆಹಲಿ:ನಾಯಿಗಳು ನಿಯತ್ತಿಗೆ ಹೆಸರಾದಂತೆಯೇ ಪೊಲೀಸ್‌ ಇಲಾಖೆ, ಸೇನೆ ಸೇರಿದಂತೆ ಹಲವು ಇಲಾಖೆಗಳಿಗೆ ಅತ್ಯಾಪ್ತವಾಗಿರುವ ಪ್ರಾಣಿಯೂ ಹೌದು. ಮನುಷ್ಯರು ಭೇದಿಸಲಾಗದ ಎಷ್ಟೋ ಪ್ರಕರಣಗಳನ್ನು ಈ ನಾಯಿ ಭೇದಿಸುವ ಕಾರಣ, ತನಿಖಾ ಇಲಾಖೆಗಳಲ್ಲಿ ಇದರದ್ದೇ ಕಾರುಬಾರು.
ಆದರೆ ಅಷ್ಟು ಅದು ಪಳಗಬೇಕಾದರೆ ಅದಕ್ಕೆ ಅಷ್ಟೇ ತರಬೇತಿಯೂ ಬೇಕಲ್ವಾ? ಇದು ಪೊಲೀಸ್‌ ಇಲಾಖೆ ಮಾತಾದರೆ ಇನ್ನು ಕೆಲವರು ತಮ್ಮ ಮನೆಯ ನಾಯಿಗಳಿಗೂ ಸಾಕಷ್ಟು ತರಬೇತಿಗಳನ್ನು ನೀಡುತ್ತಾರೆ. ಹಾಗೆಂದು ಪಾಪ ಹಗಲೂ ರಾತ್ರಿ ತರಬೇತಿ ಕೊಟ್ರೆ ಏನಾಗಬೇಡ?
ಸಾಮಾಜಿಕ ಜಾಲತಾಣಗಳಲ್ಲಿ ಇಂಥದ್ದೇ ಒಂದು ನಾಯಿಯ ಫೋಟೋ ವೈರಲ್‌ ಆಗಿದೆ. ಅಮೆರಿಕದ ವೃತ್ತಿಪರ ಬಾಸ್ಕೆಟ್‌ಬಾಲ್​ ಆಟಗಾರ ರೆಕ್ಸ್ ಚಾಪ್ಮನ್ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ.
ನಾಯಿಗೆ ರೆಕ್ಸ್‌ ತರಬೇತಿ ನೀಡುತ್ತಿದ್ದಾರೆ. ಆದರೆ ಪಾಪ ಅದಕ್ಕೆ ಸುಸ್ತಾಗಿ ಹೋಗಿದೆ. ಆದ್ದರಿಂದ ಸ್ವಲ್ಪ ದೂರದವರೆಗೆ ತನ್ನ ಮಾಲೀಕನನ್ನು ಹಿಂಬಾಲಿಸುವ ಈ ನಾಯಿ, ಇದ್ದಕ್ಕಿದ್ದಂತೆಯೇ ಎಡವಿ ಬಿದ್ದಂತೆ ಮಾಡಿದೆ. ಅಸಲಿಗೆ ಇದು ನಾಟಕ, ತನಗೆ ಏಳಲು ಸಾಧ್ಯವೇ ಇಲ್ಲ ಎಂದು ಮಾಲೀಕನತ್ತ ನೋಡುವಂತೆ ನಾಟಕ ಮಾಡಿದ ನಾಯಿ ಆತನ ಸಹಾಯ ನಿರೀಕ್ಷಿಸುತ್ತಿದೆ. ಆದರೆ, ಚಾಪ್ಮನ್​ ಸ್ವತಃ ನಾಯಿಯೇ ಮೇಲೇಳಲಿ ಎಂದು ಸುಮ್ಮನಾಗುತ್ತಾರೆ.
ಸಕತ್‌ ವೈರಲ್‌ ಆಗಿರುವ ಈ ವಿಡಿಯೋ ನಗು ತರಿಸುತ್ತಿದ್ದು, ನೀವೂ ನೋಡಿ ಎಂಜಾಯ್‌ ಮಾಡಿ.
Some doggos aren’t built for the obstacle course. Wait for it…https://t.co/M50Y3jOBFc
— Rex Chapman🏇🏼 (@RexChapman)July 21, 2021

ಗನ್‌ ಜತೆ ಸೆಲ್ಫಿ ಆಸೆಪಟ್ಟು ಹೆಣವಾದ ನವವಿವಾಹಿತೆ: ಫೋನ್‌ ಬಟನ್‌ ಬದ್ಲು ಟ್ರಿಗರ್‌ ಒತ್ತಿ ಅನಾಹುತ!

ಚುನಾವಣೆಯಲ್ಲಿ ಹಣ ಹಂಚಿಕೆ: ಸಂಸದೆಗೆ ಜೈಲು ಶಿಕ್ಷೆ ವಿಧಿಸಿದ ಕೋರ್ಟ್‌

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:3 × 4 =
Remember me
