ಮೋತಿಹಾರಿ ( ಬಿಹಾರ):ಬಿಹಾರದ ಮೋತಿಹಾರಿದ ಮಜುರಹಾನ್ ಗ್ರಾಮದಲ್ಲಿ ವಿಶಿಷ್ಟ ಮದುವೆಗೆ ಜನರು ಸಾಕ್ಷಿಯಾದರು. ಅಲ್ಲಿ ನಡೆದದ್ದು ನಾಯಿಗಳ ಮದುವೆ. ಹಿಂದೂ ಸಂಪ್ರದಾಯದಂತೆ ಭರ್ಜರಿಯಾಗಿ ಮದುವೆ ನೆರವೇರಿದೆ.
ಕೊಲ್ಹು ಎಂಬ ಗಂಡು ನಾಯಿ ಮತ್ತು ವಸಂತಿ ಎಂಬ ಹೆಣ್ಣುನಾಯಿ ಪತಿ-ಪತ್ನಿಯರಾದರು. ನರೇಶ್ ಸಾಹ್ನಿ ಮತ್ತು ಸವಿತಾ ದೇವಿ ದಂಪತಿ ಸಾಕಿರುವ ನಾಯಿ ಇದಾಗಿದೆ. ಇವರು ಮಕ್ಕಳಿಗಾಗಿ ಕೆಲವೊಂದು ಹರಕೆ ಹೊತ್ತಿದ್ದರಂತೆ. ಒಂದು ವೇಳೆ, ಈ ಹರಕೆ ತೀರಿದರೆ ನಾಯಿಗಳಿಗೆ ಮದುವೆ ಮಾಡಿಸುವುದಾಗಿ ದೇವರಲ್ಲಿ ಕೇಳಿಕೊಂಡಿದ್ದರಂತೆ. ಅದರಂತೆ ಅವರ ಆಸೆ ಈಡೇರಿದ ಕಾರಣ, ನಾಯಿಗಳ ಮದುವೆ ಮಾಡಿದ್ದಾರೆ.
ಪಂಡಿತರು ಸಂಪೂರ್ಣ ಹಿಂದೂ ಸಂಪ್ರದಾಯದಂತೆ ಮಂತ್ರಪಠಣ ಬೋಧಿಸುವ ಮೂಲಕ ಮದುವೆಯನ್ನು ಮಾಡಿದ್ದಾರೆ. 500ಕ್ಕೂ ಹೆಚ್ಚು ಮಂದಿ ಇದರಲ್ಲಿ ಭಾಗಿಯಾಗಿದ್ದರು.
ಕುಲದೇವತೆಗೆ ಪೂಜೆ ಸಲ್ಲಿಸಿದ ನಂತರ ಸಾಂಪ್ರದಾಯಿಕ ಮಾಂಗ್ಲಿಕ್ ಹಾಡುಗಳೊಂದಿಗೆ ನಾಯಿಗಳ ಅರಿಶಿಣ ಕಾರ್ಯಕ್ರಮ ನಡೆದಿದೆ. ಈ ವೇಳೆ ಗ್ರಾಮದ ಮಹಿಳೆಯರು ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದ್ದಾರೆ, ದೇವರಿಗೆ ಪೂಜೆ ಸಲ್ಲಿಸಿದ್ದಾರೆ.
ಈ ಮದುವೆಗೆ ಆಕ್ಟ್ರೆಸ್ಟ್ರಾ ಕೂಡ ಏರ್ಪಡಿಸಲಾಗಿತ್ತು. ಮೊದಲಿಗೆ ಇವರ ಹಾಡಿಗೆ ಊರಿಗೆ ಊರೇ ಕುಣಿದು ಕುಪ್ಪಳಿಸಿದೆ. ಗ್ರಾಮದಲ್ಲಿ ಬೃಹತ್​ ಮೆರವಣಿಗೆ ನಡೆಯಿತು. ಬಳಿಕ ಸಂಪೂರ್ಣ ವಿಧಿ ವಿಧಾನಗಳ ಪ್ರಕಾರ ಹಿಂದೂ ಸಂಪ್ರದಾಯದಂತೆ ಪಂಡಿತರು ಸಿಂಧೂರವನ್ನು ದಾನ ಮಾಡುವ ಮೂಲಕ ಶ್ವಾನ ಜೋಡಿಗೆ ಮದುವೆ ಮಾಡಿಸಿದರು.
ಮದುವೆಗೆ ಬಂದ ಜನರ ಭೋಜನ ಕೂಟಕ್ಕೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಲು ಅಡುಗೆಯವರನ್ನೂ ನೇಮಕ ಮಾಡಲಾಗಿತ್ತು. ಈ ವಿಶಿಷ್ಟ ಮದುವೆಯ ಬಳಿಕ ರುಚಿಕರ ಖಾದ್ಯಗಳನ್ನು ಸವಿದ ಜನರು ಶ್ವಾನ ಜೋಡಿಗೆ ಆಶೀರ್ವದಿಸಿದರು.
ವಿಡಿಯೋ ಇಲ್ಲಿದೆ ನೋಡಿ:(ಕೃಪೆ ಬೋಲ್ತಾ ಬಿಹಾರ್​)

‘ಮಹಾ’ ಸರ್ಕಾರದ ಬಿಕ್ಕಟ್ಟಿನ ನಡುವೆಯೇ ಹಂಗಾಮಾ ಸೃಷ್ಟಿಸಿದ ಸಚಿವನ ‘ಪತ್ನಿ’: ಪರಪುರುಷನ ಜತೆ ಲಾಡ್ಜ್​ನಲ್ಲಿ ಅರೆಸ್ಟ್​!

ಅಗ್ನಿವೀರರಿಗೆ ಬಂಪರ್​ ಆಫರ್​: ನಾಲ್ಕು ವರ್ಷಗಳ ಸೇವೆಯಿಂದ ಮರಳಿದ ಬಳಿಕ ಸರ್ಕಾರಿ ಉದ್ಯೋಗ

ಇಬ್ಬರನ್ನು ಮದ್ವೆಯಾದ, 3ನೇಯವಳ ಜತೆ ಸಂಸಾರ ಮಾಡಿದ- ವೋಟ್​ ಯಾರಿಗೆ ಎಂದು ಪೇಚಿಗೆ ಬಿದ್ದ ಜಿಪಂ ಕಾರ್ಯದರ್ಶಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 18 =
Remember me
