ಮಲೇಷಿಯಾ:ಶಿವಮೊಗ್ಗ ಸೇರಿದಂತೆ ಮಲೆನಾಡಿನ ಕೆಲವು ಕಡೆಗಳಲ್ಲಿ ಮಂಗನಹಾವಳಿ ವಿಪರೀತ ಇದೆ. ಬೆಳೆಗಳನ್ನು ಸಂಪೂರ್ಣ ಹಾಳುಮಾಡುವ ಮಂಗಗಳನ್ನು ಓಡಿಸಲು ಮಲೆನಾಡಿಗರು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ.
ಏನೇ ಉಪಾಯ ಮಾಡಿದರೂ ಅದು ಕೆಲವು ದಿನಗಳು ಮಾತ್ರ. ನಂತರ ಮಂಗಗಳು ಹೆದರುವುದೇ ಇಲ್ಲ. ಅದೇ ಕಾರಣಕ್ಕೆ ಕಳೆದ ವರ್ಷ ಶಿವಮೊಗ್ಗದ ಕೃಷಿಕರೊಬ್ಬರು ತಮ್ಮ ಮನೆಯ ನಾಯಿಗೆ ಹುಲಿಯಂತೆ ಚಿತ್ರಬಿಡಿಸಿ ಮಂಗಗಳನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಆಗ ಬಹಳ ಸುದ್ದಿ ಕೂಡ ಆಗಿ, ಹಲವರು ಈ ಪ್ರಯತ್ನವನ್ನು ಮಾಡಿದ್ದರು.
ಕೃಷಿಕರ ಉಪಾಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು.
Shivamogga: A farmer painted his dog to make it look like a tiger at Nallur village,Thirthahalli. Farmer's daughter says,'It was my father's idea to scare monkeys away. Earlier, monkeys used to destroy all our crops. Everyone in our village is replicating his idea."#Karnatakapic.twitter.com/oBH1rUlEUZ
— ANI (@ANI)December 2, 2019

ಈ ವಿಷಯವನ್ನು ಇಲ್ಲಿ ಪ್ರಸ್ತಾಪ ಮಾಡಲು ಕಾರಣವೆಂದರೆ ಮಲೇಷಿಯಾದಲ್ಲಿ ಕೂಡ ಅಂಥದ್ದೇ ಘಟನೆ ನಡೆದಿದೆ. ಆದರೆ ಇಲ್ಲಿ ಮೆಚ್ಚುಗೆ ಬದಲು ಇಂಥದ್ದೊಂದು ಕೃತ್ಯ ಎಸಗಿದವರಿಗೆ ಶಿಕ್ಷೆ ನೀಡಲು ‘ತಪ್ಪಿತಸ್ಥ’ರ ಹುಡುಕಾಟ ನಡೆದಿದೆ.
ಅಷ್ಟಕ್ಕೂ ಆಗಿರುವುದು ಏನೆಂದರೆ ಇಲ್ಲಿಯ ಬೀದಿ ನಾಯಿಯೊಂದಕ್ಕೆ ಯಾರೋ ಕಪ್ಪು ಪಟ್ಟಿ ಬಳಿದು ಹುಲಿ ರೀತಿ ಕಾಣುವಂತೆ ಮಾಡಿದ್ದರು.
ಇವರು ಈ ರೀತಿ ಮಾಡುವ ಹಿಂದಿದ್ದ ಉದ್ದೇಶ ಜನರನ್ನು ಹೆದರಿಸುವುದಕ್ಕಾಗಿ. ಥೇಟ್‌ ಹುಲಿಯಂತೆ ಕಾಣುತ್ತಿದ್ದ ನಾಯಿಯು ಬೀದಿಬೀದಿಗಳಲ್ಲಿ ಅಲೆದಾಡಿದ ಹಿನ್ನೆಲೆಯಲ್ಲಿ ಜನರು ಬೆಚ್ಚಿಬಿದ್ದು, ಹೌಹಾರಿ ಹೋಗಿದ್ದಾರೆ.
ನಂತರ ಇದು ನಾಯಿ ಎಂದು ತಿಳಿದಿದೆ. ಜನರನ್ನು ಹೆದರಿಸಲು ಈ ರೀತಿ ಕೃತ್ಯ ಮಾಡಿದವರ ವಿರುದ್ಧ ಕಠಿಣ ಕ್ರಮಕ್ಕೆ ಮಲೇಷಿಯಾ ಸರ್ಕಾರ ಮುಂದಾಗಿದೆ.ಸಾಮಾಜಿಕ ಜಾಲತಾಣದಲ್ಲಿ ನಾಯಿಯ ಹುಲಿವೇಷದ ಚಿತ್ರ ಅಪ್‌ಲೋಡ್‌ ಮಾಡಲಾಗಿದ್ದು, ಈ ಕೃತ್ಯ ಮಾಡಿದವರನ್ನು ಹುಡುಕಿ ಕೊಟ್ಟರೆ ಸೂಕ್ತ ಬಹುಮಾನ ಕೊಡಲಾಗುವುದು ಎಂದು ಘೋಷಿಸಲಾಗಿದೆ.
ಇದಾಗಲೇ ಈ ಚಿತ್ರ ಸಾವಿರಾರು ಶೇರ್‌ಗಳನ್ನು ಕಂಡಿದ್ದು, ಹಲವರು ಕಮೆಂಟ್‌ ಮಾಡಿದ್ದಾರೆ.
ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾವಿರ ಅಡಿ ಪ್ರಪಾತಕ್ಕೆ ಬಿದ್ದರು!

ನಾಲ್ಕು ಲಕ್ಷ ರೂ. ಕೊಟ್ಟು ಒಂದು ಗಿಡ ಖರೀದಿಸಿದ- ಅಷ್ಟಕ್ಕೂ ಏನಿದರ ವಿಶೇಷತೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + 6 =
Remember me
