ನ್ಯೂಯಾರ್ಕ್:ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಮ್ಮ ರಾಬರ್ಟ್ ಟ್ರಂಪ್ (71) ನಿನ್ನೆ ರಾತ್ರಿ ನಿಧನರಾಗಿದ್ದಾರೆ.
ಕೆಲ ಕಾಲಗಳಿಂದ ರಾಬರ್ಟ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಇವರು ಅಮೆರಿಕದ ಬಹುದೊಡ್ಡ ಉದ್ಯಮಿಯಾಗಿದ್ದರು.
ಇತ್ತೀಚೆಗೆ ರಾಬರ್ಟ್‌ ಅವರು ಭಾರಿ ಸುದ್ದಿಯಾಗಿದ್ದರು, ಇದಕ್ಕೆ ಕಾರಣ, ಇವರ ಸಹೋದರಿ ಮೇರಿ ಅವರು ಡೊನಾಲ್ಡ್‌ ಟ್ರಂಪ್‌ ಅವರ ಕುರಿತಾಗಿ ಬರೆದಿದ್ದ ಟೂ ಮಚ್ ಆ್ಯಂಡ್‌ ನೆವರ್ ಇನಫ್’ ಕೃತಿ. ಈ ಕೃತಿಯಲ್ಲಿ ಡೊನಾಲ್ಡ್ ಟ್ರಂಪ್ ಬಗ್ಗೆ ವಿವಾದಾತ್ಮಕ ವಿಷಯಗಳನ್ನು ಉಲ್ಲೇಖಿಸಲಾಗಿದೆಯೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ:VIDEO| ಆಕಾಶದಿಂದ ವ್ಯಕ್ತಿಯ ತಲೆಯ ಮೇಲೆ ಬಿದ್ದ ಬೆಕ್ಕು: ಮುಂದೇನಾಯ್ತು ನೀವೇ ನೋಡಿ…!
ಆದ್ದರಿಂದ ರಾಬರ್ಟ್‌ ಅವರು, ಈ ಕೃತಿಯ ಬಿಡುಗಡೆಗೆ ತಡೆ ನೀಡುವಂತೆ ಕೋರ್ಟ್‌ ಮೊರೆ ಹೋಗಿದ್ದು, ಭಾರಿ ಸುದ್ದಿಯಾಗಿತ್ತು. ಡೊನಾಲ್ಡ್‌ ಟ್ರಂಪ್ ಹಾಗೂ ರಾಬರ್ಟ್ ಇಬ್ಬರೂ ಸಹೋದರರಾಗಿದ್ದು, ಇಬ್ಬರೂ ಉದ್ಯಮಿಗಳಾಗಿದ್ದರೂ, ಇಬ್ಬರದ್ದು ವಿಭಿನ್ನ ವ್ಯಕ್ತಿತ್ವವಾಗಿತ್ತು ಎಂದೇ ಹೇಳಲಾಗುತ್ತಿದೆ.
ಎರಡು ದಿನಗಳ ಹಿಂದೆ ಇವರ ಸ್ಥಿತಿ ಗಂಭೀರವಾಗಿದ್ದರಿಂದ ಡೊನಾಲ್ಡ್‌ ಟ್ರಂಪ್‌ ಅವರು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು. ತಮ್ಮನ ಸಾವಿನ ಸುದ್ದಿ ತಿಳಿಯುತ್ತಲೇ ಡೊನಾಲ್ಡ್‌ ಟ್ರಂಪ್ ಭಾರಿ ಆಘಾತಕ್ಕೆ ಒಳಗಾಗಿದ್ದಾರೆ, ‘ಒಂದು ಅಮೂಲ್ಯ ರತ್ನವನ್ನು ನಾನು ಕಳೆದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.
ತುಂಬಾ ಮೃದು ಸ್ವಭಾವದ ನನ್ನ ತಮ್ಮ ತಮಗಿಂದ ತುಂಬಾ ವಿಭಿನ್ನ ಎಂದು ಈ ಹಿಂದೆಯೇ ಡೊನಾಲ್ಡ್‌ ಟ್ರಂಪ್‌ ವಿವರಿಸಿದ್ದರು.
ಲ್ಯಾಂಡಿಂಗ್‌ ಆಗದೇ ಆಕಾಶದಲ್ಲೇ ಗಂಟೆಗಟ್ಟಲೆ ಹಾರಿದ ಸಂಸದ ಅನಂತ್‌ಕುಮಾರ್‌ ಇದ್ದ ವಿಮಾನ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಹೋಟೆಲ್‌ನಲ್ಲಿ ರಾತ್ರಿ ಕಳೆದ ಪ್ರೇಮಿಗಳು ಮಾರನೆಯ ದಿನ ಶವವಾದರು!

ಅತ್ಯಂತ ಕ್ರೂರವಾಗಿ ಲಾಕಪ್‌ ಡೆತ್‌ ಮಾಡಿದ್ದ ಆರೋಪಿ ಪೊಲೀಸ್‌ ಕರೊನಾಕ್ಕೆ ಬಲಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
