ವಾಷಿಂಗ್ಟನ್​:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ಅಮೆರಿಕದ ಸಂಸತ್ತನ್ನು ಧ್ವಂಸಗೊಳಿಸಿ ಹಲ್ಲೆ ನಡೆಸುತ್ತಿರುವಾಗ ಟ್ರಂಪ್ ಅವರ ಇಡೀ ಕುಟುಂಬ ಟಿವಿಯಲ್ಲಿ ಈ ಪ್ರಕರಣದ ನೇರಪ್ರಸಾರ ವೀಕ್ಷಣೆ ಮಾಡುತ್ತಿತ್ತು.
ಇದರ ವಿಡಿಯೋ ಇದೀಗ ಭಾರಿ ಸುದ್ದಿಯಾಗಿದೆ. ಧ್ವಂಸ ಪ್ರಕರಣವನ್ನು ಖುಷಿಯಿಂದ ಹಂಚಿಕೊಂಡವರಂತೆ ಟ್ರಂಪ್​ ಅವರ ಮಗನೇ ಈ ವಿಡಿಯೋ ವೈರಲ್​ ಮಾಡಿದ್ದಾನೆ! ಟ್ರಂಪ್​ ಕುಟುಂಬ ಟಿ.ವಿಯಲ್ಲಿ ಧ್ವಂಸ ಪ್ರಕರಣವನ್ನು ವೀಕ್ಷಣೆ ಮಾಡುತ್ತಿರುವುದನ್ನು ರೆಕಾರ್ಡ್​ ಮಾಡಿಕೊಂಡಿರುವ ಅವರ ಪುತ್ರ, ಅದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಇದೀಗ ಭಾರಿ ವಿವಾದ ಹುಟ್ಟುಹಾಕಿದೆ.
ಇದಕ್ಕೆ ಕಾರಣ, ಇದರ ವಿಡಿಯೋ ಮಾಡಿರುವ ಡೊನಾಲ್ಡ್​ ಟ್ರಂಪ್ ಜೂನಿಯರ್, ಆತನ ಸ್ನೇಹಿತೆ ಕಿಂಬರ್ಲಿ ಮತ್ತು ಟ್ರಂಪ್ ಅವರ ಮುಖ್ಯಸ್ಥ ಮಾರ್ಕ್ ಮೆಡೋಸ್ ಹಿಂಸಾಚಾರವನ್ನು ನೋಡಿ ವಿಡಿಯೋಗೆ ಪೋಸ್​ ಕೊಟ್ಟು ಕುಣಿದು ಕುಪ್ಪಳಿಸಿದ್ದಾರೆ.
ಡೊನಾಲ್ಡ್​ ಟ್ರಂಪ್ ಮತ್ತು ಅವರ ಮಗಳು ಇವಾಂಕಾ ಟಿ.ವಿ ಪರದೆಗಳಲ್ಲಿ ಯುಎಸ್ ಕ್ಯಾಪಿಟಲ್‌ನಲ್ಲಿ ಹಿಂಸಾಚಾರವನ್ನು ವೀಕ್ಷಿಸುತ್ತಿದ್ದಾರೆ. ಹಿನ್ನೆಲೆಯಲ್ಲಿ ವೇಗದ ಸಂಗೀತ ನುಡಿಸುವಿಕೆಯೂ ಇದೆ. ಟ್ರಂಪ್ ಮತ್ತು ಇವಾಂಕಾ ಈ ವಿಷಯದಲ್ಲಿ ಗಂಭೀರವಾಗಿ ನೋಡುತ್ತಿದ್ದರೆ, ಅವರ ಮಗ ಡೊನಾಲ್ಡ್​ ಟ್ರಂಪ್ ಜೂನಿಯರ್, ಅವರ ಗೆಳತಿ ಕಿಂಬರ್ಲಿ ಮತ್ತು ಟ್ರಂಪ್ ಅವರ ಮುಖ್ಯಸ್ಥ ಮಾರ್ಕ್ ಮೆಡೋಸ್ ಸಂತೋಷದಿಂದ ಕುಣಿದಾಡಿದ್ದಾರೆ.
ಗುರುವಾರ, ಯುಎಸ್ ಸಂಸತ್ತಿನ ಒಳಗೆ ಮತ್ತು ಹೊರಗೆ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಇವರಲ್ಲಿ ಪೊಲೀಸ್ ಅಧಿಕಾರಿ ಮತ್ತು ಮಹಿಳೆ ಸೇರಿದ್ದಾರೆ. ಪೊಲೀಸ್ ಅಧಿಕಾರಿ ಶುಕ್ರವಾರ ನಿಧನರಾದರು.
ಟ್ರಂಪ್ ಕುಟುಂಬದ ಈ ವಿಡಿಯೋವನ್ನು ಆಸ್ಟ್ರೇಲಿಯಾದ ವೆಬ್‌ಸೈಟ್ ನ್ಯೂಸ್ ಡಾಟ್​ ಕಾಮ್ ಬಿಡುಗಡೆ ಮಾಡಿದೆ. ಟ್ರಂಪ್ ಕುಟುಂಬದ ಹೊರತಾಗಿ, ಕೆಲವರು ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಗೆಳತಿ ಕಿಂಬರ್ಲಿ ಕೆಲವು ಘೋಷಣೆಗಳನ್ನೂ ಕೂಗಿದ್ದಾರೆ.
ಈ ವಿಡಿಯೋದಲ್ಲಿದೆ ನೋಡಿ ಹಕೀಕತ್ತು: ಕೃಪೆ ದೈನಿಕ್​ ಭಾಸ್ಕರ್​
https://www.bhaskar.com/international/video/donald-trump-melania-trump-and-ivanka-trump-watch-us-capitol-violence-on-tv-video-goes-viral-128101232.html?i=1
ಆ ಜಾಗದಲ್ಲಿ ಕೆಟ್ಟ ವಾಸನೆಯಿಂದ ನನ್ನ ಮೇಲೇ ನನಗೆ ಅಸಹ್ಯ ಹುಟ್ಟಿದೆ- ಪರಿಹಾರ ಹೇಳಿ

ಕೊನೆಗೂ ಹೆಚ್ಚಾಯ್ತು ಬಿಬಿಎಂಪಿ ವಾರ್ಡ್​ಗಳ ಸಂಖ್ಯೆ: ಬಿತ್ತು ರಾಜ್ಯಪಾಲರ ಮುದ್ರೆ

ಮುಂಬೈ ದಾಳಿ ರೂವಾರಿ ಲಖ್ವಿಗೆ 15 ವರ್ಷ ಜೈಲುಶಿಕ್ಷೆ ನೀಡಿದ ಪಾಕ್​ ಕೋರ್ಟ್​

4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್​ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + seventeen =
Remember me
