ನ್ಯೂಯಾರ್ಕ್​:ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಇವಾನಾ ಟ್ರಂಪ್​ ನಿಗೂಢವಾಗಿ ಮೃತಪಟ್ಟಿದ್ದಾರೆ. ಮನೆಯಲ್ಲಿಯೇ ಇವರು ಮೃತಪಟ್ಟಿರುವುದು ವರದಿಯಾಗಿದ್ದು, ಸಾವಿಗೆ ನಿಖರ ಕಾರಣ ಮಾತ್ರ ಇದುವರೆಗೆ ಬಹಿರಂಗಗೊಂಡಿಲ್ಲ. ಇವರಿಗೆ 73 ವರ್ಷ ವಯಸ್ಸಾಗಿತ್ತು.
ಮನೆಯ ಮೆಟ್ಟಿಲಿನ ಬಳಿ ಪ್ರಜ್ಞೆ ಕಳೆದುಕೊಂಡಿದ್ದ ಸ್ಥಿತಿಯಲ್ಲಿ ಅವರು ಕಾಣಿಸಿಕೊಂಡಿದ್ದು, ಬಳಿಕ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಾವಿನ ನಿಖರ ಕಾರಣಗಳನ್ನು ಆರೋಗ್ಯ ಇಲಾಖೆ ಇನ್ನಷ್ಟೇ ತಿಳಿಸಬೇಕಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಾಜಿ ಪತ್ನಿಯ ಸಾವಿನ ಕುರಿತು ಟ್ರಂಪ್​ ಸಾಮಾಜಿಕ ಜಾಲತಾಣದಲ್ಲಿ ದುಃಖ ತೋಡಿಕೊಂಡಿದ್ದಾರೆ. ಇವಾನಾ ಅವರು ಸುಂದರ ಮತ್ತು ಅದ್ಭುತ ಮಹಿಳೆ. ಅವರು ಉತ್ತಮ ಮತ್ತು ಸ್ಫೂರ್ತಿದಾಯಕ ಜೀವನವನ್ನು ನಡೆಸಿದರು ಎಂದು ಟ್ರಂಪ್ ಹೇಳಿದ್ದಾರೆ. ಜ್ಯೂನಿಯರ್ ಡೊನಾಲ್ಡ್, ಇವಾಂಕಾ ಮತ್ತು ಎರಿಕ್ ಹೆಸರಿನ ಮೂವರು ಮಕ್ಕಳು ಈ ದಂಪತಿಗೆ ಇದ್ದಾರೆ. ತನ್ನ ಮಕ್ಕಳ ಬಗ್ಗೆ ಆಕೆಗೆ ಅತ್ಯಂತ ಹೆಮ್ಮೆಯಿತ್ತು. ನಾವೂ ಈಕೆಯ ವಿಚಾರದಲ್ಲಿ ಅಷ್ಟೇ ಹೆಮ್ಮೆ ಇರಿಸಿಕೊಂಡಿದ್ದವು. ಅವಳ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ರಂಪ್ ಹೇಳಿದ್ದಾರೆ.
ಇವಾನಾ ಟ್ರಂಪ್ ತನ್ನದೇ ಆದ ಯಶಸ್ವಿ ವ್ಯಾಪಾರ ವೃತ್ತಿಜೀವನವನ್ನು ಆರಂಭಿಸಿ ಸಕ್ಸಸ್ ಆದವರು. ಬಟ್ಟೆ, ಆಭರಣಗಳು ಮತ್ತು ಸೌಂದರ್ಯ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹಲವಾರು ಪುಸ್ತಕಗಳನ್ನು ಬರೆದು ಹೆಸರುವಾಸಿಯಾದವರು. ಡೊನಾಲ್ಡ್​ ಟ್ರಂಪ್​ ಅವರು ಅಮೆರಿಕದ ಅಧ್ಯಕ್ಷ ಹುದ್ದೆಗೆ ಏರುವಲ್ಲಿ ಕಾರಣರಾಗಿದ್ದ ಮಹಿಳೆ ಇವಾನಾ ಎನ್ನಲಾಗಿದೆ.
ಇವಾನಾ, 1970ರ ದಶಕದಲ್ಲಿ ರೂಪದರ್ಶಿಯಾಗಿ ಮಿಂಚಿದವರು. ಆಗ ಇವರಿಗೆ ಫ್ಯಾಷನ್​ ಲೋಕದಲ್ಲಿ ಸಿಕ್ಕಾಪಟ್ಟೆ ಡಿಮಾಂಡ್​ ಇತ್ತು. ಆ ಸಮಯದಲ್ಲಿ ಡೊನಾಲ್ಡ್​ ಟ್ರಂಪ್​ ಅವರು ರಿಯಲ್ ಎಸ್ಟೇಟ್ ಡೆವಲಪರ್ ಆಗಿದ್ದರು. ಇವರಿಬ್ಬರ ವಿವಾಹ 1977ರಲ್ಲಿ ನಡೆಯಿತು. ಅವರ ಮೊದಲ ಮಗು, ಡೊನಾಲ್ಡ್ ಜೂನಿಯರ್ ಅದೇ ವರ್ಷ ಜನಿಸಿದರು. ಇವಾಂಕಾ 1981 ರಲ್ಲಿ ಜನಿಸಿದರು ಮತ್ತು ಎರಿಕ್ 1984 ರಲ್ಲಿ ಜನಿಸಿದರು.
80 ರ ದಶಕದ ಉದ್ದಕ್ಕೂ, ಟ್ರಂಪ್‌ ಜೋಡಿ ನ್ಯೂಯಾರ್ಕ್‌ನ ಅತ್ಯುನ್ನತ-ಪ್ರೊಫೈಲ್ ದಂಪತಿ ಎನಿಸಿತ್ತು. ಈ ಜೋಡಿ ಅತಿರಂಜಿತ ಜೀವನಶೈಲಿಗೆ ಹೆಸರಾಗಿತ್ತು. ಡೊನಾಲ್ಡ್ ಟ್ರಂಪ್ ಅವರ ಆಸ್ತಿ ವ್ಯವಹಾರವು ಗಗನಕ್ಕೇರುತ್ತಿದ್ದಂತೆ ಅವರ ಶಕ್ತಿ ಮತ್ತು ಖ್ಯಾತಿಯೂ ಬೆಳೆಯಿತು. ಇವಾನಾ ಟ್ರಂಪ್ ವ್ಯವಹಾರದಲ್ಲಿ ಪ್ರಮುಖ ಪಾತ್ರಗಳನ್ನು ವಹಿಸಿಕೊಂಡರು.
ನಟಿ ಮಾರ್ಲಾ ಮ್ಯಾಪಲ್ಸ್ ಅವರು ಟ್ರಂಪ್​ ಜೀವನದಲ್ಲಿ ಪ್ರವೇಶಿಸುತ್ತಿದ್ದಂತೆಯೇ ಇವಾನಾ ಜತೆ ಸಂಬಂಧವನ್ನು ಕಡಿತಗೊಳಿಸಲು ಇಚ್ಛಿಸಿದರು ಡೊನಾಲ್ಡ್​ ಟ್ರಂಪ್​. 90ರ ದಶಕದ ಆರಂಭದಲ್ಲಿ ಡೊನಾಲ್ಡ್ ಟ್ರಂಪ್ ಮತ್ತು ಇವಾನಾ ಟ್ರಂಪ್ ವಿಚ್ಛೇದನ ಪಡೆದರು. ಈ ಹೈ ಪ್ರೊಫೈಲ್ ಡಿವೋರ್ಸ್ ನ್ಯೂಯಾರ್ಕ್‌ನ ಟ್ಯಾಬ್ಲಾಯ್ಡ್‌ಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. 1993ರಲ್ಲಿ ಡೊನಾಲ್ಡ್​ ಮ್ಯಾಪಲ್ಸ್ ಅವರನ್ನು ವಿವಾಹವಾದರು.
ತಾಯಿಯ ಸಾವಿನ ಕುರಿತು ಮೂವರು ಮಕ್ಕಳು ಕೂಡ ಕಂಬನಿ ಮಿಡಿದಿದ್ದಾರೆ.
VIDEO: ‘ನೀನು ಸಿನಿಮಾಕ್ಕೆ ಸೆಲೆಕ್ಟ್​ ಆಗ್ಲಿಲ್ಲ, ಆದ್ರೆ ನನ್​ ಹೆಂಡ್ತಿ ಥರ ಇದ್ರೆ ತಿಂಗಳಿಗೆ 25 ಲಕ್ಷ ಕೊಡುವೆ ಅಂದಿದ್ದ ಉದ್ಯಮಿ!’

ಮಾಡೆಲ್​ನಂತಾಗಲು 4.5 ಕೋಟಿ ರೂ. ಖರ್ಚು ಮಾಡಿದಳು- ಮೊದಲಿನಂತಾಗಲು ಮತ್ತೆ ಸರ್ಜರಿ ಮಾಡಿಸಿದಳು!

ಉನ್ನತ ಶಿಕ್ಷಣ ಪಡೆದ ಸಿರಿವಂತ ಮಹಿಳೆಯರೇ ಈತನ ಟಾರ್ಗೆಟ್​: 11 ಮಂದಿಯನ್ನು ಮದ್ವೆಯಾದ ಸಚಿವರ ಸಂಬಂಧಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 19 =
Remember me
