ನವದೆಹಲಿ:ಹಸು, ಎಮ್ಮೆ, ಮೇಕೆ ಹಾಲಿನ ಡೈರಿ ಈಗ ಎಲ್ಲೆಲ್ಲೂ ಇದೆ. ಆದರೆ ಇದೀಗ ಕತ್ತೆ ಹಾಲಿನ ಡೈರಿಯೂ ಇದೇ ಮೊದಲ ಬಾರಿಗೆ ದೇಶದಲ್ಲಿ ಶುರು ಮಾಡಲಾಗುತ್ತಿದೆ.
ರಾಷ್ಟ್ರೀಯ ಸಂಶೋಧನಾ ಕೇಂದ್ರ (ಎನ್‌ಆರ್‌ಸಿಇ) ಶೀಘ್ರದಲ್ಲೇ ಹರಿಯಾಣದ ಹಿಸಾರ್‌ನಲ್ಲಿ ಕತ್ತೆ ಹಾಲಿನ ಡೈರಿಯನ್ನು ಪ್ರಾರಂಭಿಸಲಿದೆ. ಹಲಾರಿ ತಳಿ ಕತ್ತೆ ಸೇರಿದಂತೆ ವಿವಿಧ ತಳಿಗಳ ಕತ್ತೆಗಳ ಹಾಲನ್ನು ಇಲ್ಲಿ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.
ಕತ್ತೆ ಹಾಲಾ? ಎಂದು ಮೂಗು ಮುರಿಯಬೇಡಿ. ಏಕೆಂದರೆ ಇದರ ಪ್ರಯೋಜನ ಕೇಳಿದರೆ, ಎಷ್ಟು ದೂರವಾದರೂ ಸರಿ, ಖರೀದಿಸಲು ಮುಂದಾಗುವಿರಿ. ಅಷ್ಟೇ ಏಕೆ. ಕತ್ತೆ ಹಾಲು ಸಿಗದೇ ಪರದಾಡುತ್ತಿರುವವರೂ ಎಷ್ಟೋ ಮಂದಿ. ಹಸು, ಎಮ್ಮೆಯ ಹಾಲುಗಳಲ್ಲಿ ಒಂದೆರಡು ರೂಪಾಯಿ ಹೆಚ್ಚಾದರೂ ಕ್ಯಾತೆ ತೆಗೆಯುವವರೇ ಬಹುತೇಕರು. ಆದರೆ ಕತ್ತೆಯ ಒಂದು ಲೀಟರ್‌ ಹಾಲಿನ ಬೆಲೆ ಎಷ್ಟು ಗೊತ್ತಾ? ಬರೋಬ್ಬರಿ 7000 ರೂಪಾಯಿಗಳು!
ಹೌದು. ನೀವು ಓದುತ್ತಿರುವುದು ನಿಜ. ನೂರು ಇನ್ನೂರು, ಸಾವಿರ ಅಲ್ಲ… ಏಳು ಸಾವಿರ ರೂಪಾಯಿಗಳವರೆಗೂ ಪ್ರತಿ ಲೀಟರ್‌ಗೆ ಹಾಲಿನ ಬೆಲೆ ಇದೆ. ಸಾಮಾನ್ಯ ಕತ್ತೆಯ ಹಾಲಿಗಾದರೆ ಆರಂಭವಾಗುವುದೇ 2 ಸಾವಿರ ರೂಪಾಯಿ ಲೀಟರ್‌ನಿಂದ. ಕತ್ತೆಯ ತಳಿಗಳ ಆಧಾರದ ಮೇಲೆ ಹಾಲಿನ ದರವು ಏಳು ಸಾವಿರ ರೂಪಾಯಿವರೆಗೂ ಇದೆ.
ಅಬ್ಬಬ್ಬಾ! ಇದ್ಯಾಕೆ ಇಷ್ಟು ರೇಟು ಎಂದುಕೊಳ್ಳುವಿರಾ? ಹುಟ್ಟಿದ ಮಗುವಿನಿಂದ ಹಿಡಿದು ವಯೋವೃದ್ಧರವರೆಗೂ ಬಹುತೇಕ ಆರೋಗ್ಯ ಸಮಸ್ಯೆಗಳನ್ನು, ಬಗೆಬಗೆ ರೋಗಗಳನ್ನು ದೂರ ಮಾಡುವ ಶಕ್ತಿ ಕತ್ತೆ ಹಾಲಿನಲ್ಲಿದೆ.
ಇದನ್ನೂ ಓದಿ:ಮದುವೆ ಮಾಡಿಸು ಎಂದ ವಿಧುರ ಅಳಿಯನ ಶಿರಚ್ಛೇದನ ಮಾಡಿದ ಮಾವ!
ಹಲಾರಿ ತಳಿಯ ಕತ್ತೆಯ ಹಾಲು ಕ್ಯಾನ್ಸರ್, ಬೊಜ್ಜು, ಅಲರ್ಜಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಬೇರೆ ಹಾಲುಗಳಿಂದ ಶಿಶುಗಳಿಗೆ ಅಲರ್ಜಿಯಾಗುವುದು ಉಂಟು. ಆದರೆ ಕತ್ತೆಯ ಹಲಾರಿ ತಳಿಯ ಹಾಲು ಮಕ್ಕಳಿಗೆ ಅಮೃತ. ಆ್ಯಂಟಿಆಕ್ಸಿಡೆಂಟ್, ಆಂಟಿಜೇಜಿಂಗ್ ಅಂಶಗಳು ಕತ್ತೆ ಹಾಲಿನಲ್ಲಿ ಕಂಡುಬರುತ್ತವೆ.
ಇನ್ನು ಹಲಾರಿ ತಳಿಯ ಕತ್ತೆಯ ಬಗ್ಗೆ ಹೇಳುವುದಾದರೆ ಇವು ಗುಜರಾತ್‌ನಲ್ಲಿ ಕಂಡುಬರುತ್ತದೆ. ಇವುಗಳ ಹಾಲನ್ನು .ಔಷಧಿಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಕತ್ತೆ ಹಾಲಿನಿಂದ ತಯಾರಿಸಿದ ಸೌಂದರ್ಯ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿದೆ. ಸಾಬೂನು, ಲಿಪ್ ಬಾಮ್, ಬಾಡಿ ಲೋಷನ್ ಇತ್ಯಾದಿಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸಲಾಗುತ್ತದೆ.
ಇಂಥ ಕತ್ತೆಯ ಹಾಲಿನ ಡೈರಿ ಶುರು ಮಾಡಲಾಗುತ್ತಿದ್ದು, ಈಗಾಗಲೇ 10 ಹಲಾರಿ ತಳಿ ಕತ್ತೆಗಳಿಗೆ ಈ ಉದ್ದೇಶಕ್ಕಾಗಿ ಆದೇಶಿಸಲಾಗಿದೆ. ಈ ಕತ್ತೆಗಳು ಪ್ರಸ್ತುತ ಎನ್‌ಆರ್‌ಸಿಇ ಹಿಸಾರ್‌ನಲ್ಲಿ ಸಂತಾನೋತ್ಪತ್ತಿಗೆ ಒಳಗಾಗುತ್ತಿವೆ.(ಏಜೆನ್ಸೀಸ್‌)
ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + 10 =
Remember me
