ರಾಜಮಂಡ್ರಿ (ಆಂಧ್ರ ಪ್ರದೇಶ):ಹೆಚ್ಚಿನ ಸಂದರ್ಭದಲ್ಲಿ ಬಯ್ಯುವ ವೇಳೆ ಕತ್ತೆ ಎಂದು ಬಳಸುವುದು ಮಾಮೂಲು. ಏನೂ ಪ್ರಯೋಜನಕ್ಕೆ ಬಾರದ ವ್ಯಕ್ತಿಯನ್ನು ಕತ್ತೆ ಕಾಯ್​ ಹೋಗು ಎಂದು ಬೈಯುತ್ತಾರೆ. ಆದರೆ ಇದೇ ಕತ್ತೆಯನ್ನು ಕಾಯುವ ಮೂಲಕ ಲಕ್ಷ ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ ಆಂಧ್ರಪ್ರದೇಶದ ರಾಜಮಂಡ್ರಿಯ ಇಂಜಿನಿಯರ್​.
ವಿದೇಶದಲ್ಲಿ ಕೆಲಸ ಮಾಡಿ, ಈಗ ಭಾರತಕ್ಕೆ ವಾಪಸಾಗಿರುವ ಪೂರ್ವ ಗೋದಾವರಿ ಜಿಲ್ಲೆಯ ರಾಜನಗರಂ ಮಂಡಲದ ತೋಕಡದಲ್ಲಿರುವ ಮಲ್ಲಂಪುಡಿಯ ಕಿರಣ್ ಕತ್ತೆಯನ್ನು ಸಾಕುತ್ತಾ ಈಗ ಸಾಫ್ಟ್​ವೇರ್​ ಇಂಜಿನಿಯರ್​ಗಿಂತಲೂ ಹೆಚ್ಚಿನ ಸಂಪಾದನೆ ಮಾಡುತ್ತಿದ್ದಾರೆ!
ವಿದೇಶದಲ್ಲಿ ವ್ಯಾಸಂಗ ಮಾಡಿ, ಅಲ್ಲಿಯೇ ನೌಕರಿಯಲ್ಲಿದ್ದು ನಂತರ ಬೆಂಗಳೂರಿನಲ್ಲ ಕೆಲಸಕ್ಕಿದ್ದ ಕಿರಣ್​ ಅವರಿಗೆ ಕೋವಿಡ್​ ಹೊಡೆತ ನೀಡಿತು. ಉದ್ಯೋಗದಲ್ಲಿ ಸಮಸ್ಯೆ ಉಂಟಾಗಿ ತವರಿಗೆ ವಾಪಸಾದರು. ಈ ಸಂದರ್ಭದಲ್ಲಿ ತಾವು ಏನು ಮಾಡಬಹುದು ಎಂದು ತುಂಬಾ ಯೋಚನೆ ಮಾಡಿದಾಗ ಅವರಿಗೆ ಹೊಳೆದದ್ದು ಕತ್ತೆ ಸಾಕುವುದು.
ಅದಕ್ಕೂ ಒಂದು ಕಾರಣವಿದೆ. ಕಿರಣ್​ ಅವರಿಗೆ ನಿಶ್ಯಕ್ತಿ ಸಮಸ್ಯೆ ಕಾಡುತ್ತಿತ್ತು. ಇದರಿಂದ ಹೊರ ಬರಲು ಕತ್ತೆ ಹಾಲು ಕುಡಿಯುವಂತೆ ವೈದ್ಯರು ಸಲಹೆ ನೀಡಿದರು. ಎಷ್ಟು ಹುಡುಕಾಡಿದರೂ ಕತ್ತೆ ಹಾಲು ಇವರಿಗೆ ಸಿಗಲಿಲ್ಲ. ಅದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಅಷ್ಟು ಸುಲಭದಲ್ಲಿ ಅದು ಸಿಗುವುದಿಲ್ಲ ಎನ್ನುವ ಮನವರಿಕೆ ಕಿರಣ್​ ಅವರಿಗೆ ಆಯಿತು. ಕೊನೆಗೆ 200 ಎಂಎಲ್ ಹಾಲಿಗೆ ಸಾವಿರ ರೂಪಾಯಿ ಖರ್ಚು ಮಾಡಿ ಖರೀದಿಸಿದರು. ಅದೇ ಇವರ ಜೀವನದ ಟರ್ನಿಂಗ್​ ಪಾಯಿಂಟ್​ ಆಯಿತು.
=ಮಲ್ಲಂಪುಡಿ ಗ್ರಾಮದಲ್ಲಿ 10 ಎಕರೆ ಜಾಗ ಖರೀದಿ ಮಾಡಿ ಅಲ್ಲಿಯೇ ಕತ್ತೆಯನ್ನು ಸಲಹುತ್ತಿದ್ದಾರೆ. ದೇಶಾದ್ಯಂತ ವಿವಿಧ ತಳಿಗಳ ಕತ್ತೆಗಳನ್ನು ಖರೀದಿಸಿದರು. ಕತ್ತೆಗಳ ಕುರಿತು ಸಾಕಷ್ಟು ಅಧ್ಯಯನ ಮಾಡಿದರು. ಕತ್ತೆ ಹಾಲು ಅಮೃತ ಎನ್ನುವುದನ್ನು ಅವರು ತಿಳಿದುಕೊಂಡರು. ಇದೇ ಕಾರಣಕ್ಕೆ ಅವುಗಳ ಮೇಲೆ ಸಾಕಷ್ಟು ಅಧ್ಯಯನ ನಡೆಸಿ ಕತ್ತೆ ನೋಡಿಕೊಳ್ಳಲು ಕೆಲಸದವರನ್ನೂ ನೇಮಿಸಿಕೊಂಡರು.
ಇದೀಗ ಕತ್ತೆಗಳ ಆರೋಗ್ಯ ಮತ್ತು ಅವುಗಳಲ್ಲಿನ ಬದಲಾವಣೆಗಳಿಗಾಗಿ ಕೇರ್ ಶೀಟ್ ಅನ್ನು ಸಹ ನಿರ್ವಹಿಸಲಾಗುತ್ತದೆ. ಕತ್ತೆಗಳ ಸಂತಾನೋತ್ಪತ್ತಿಗಾಗಿ ಪ್ರತಿ 5 ಹೆಣ್ಣು ಕತ್ತೆಗಳಿಗೆ ಒಂದು ಗಂಡು ಕತ್ತೆಯನ್ನು ಅಲ್ಲಿ ಇರಿಸಲಾಗುತ್ತದೆ. ಗರ್ಭಿಣಿ ಕತ್ತೆಯನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗುತ್ತದೆ. ಹುಟ್ಟುವ ಕತ್ತೆ ಮರಿಗಳಿಗೆ ಹೆಚ್ಚಿನ ಕಾಳಜಿ ನೀಡಲು ಡಾಂಕಿ ಡೈರಿಯನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಇದೀಗ ಕತ್ತೆಗಳ ಆರೋಗ್ಯ, ಸಿಬ್ಬಂದಿಗೆ ವೇತನ ಎಲ್ಲವನ್ನು ಕಳೆದರೂ ಲಕ್ಷ ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿರುವುದಾಗಿ ಕಿರಣ್​ ಹೇಳುತ್ತಿದ್ದಾರೆ.
ಅಂದಹಾಗೆ ಹಲಾರಿ ಸೇರಿದಂತೆ ಕೆಲವು ತಳಿಗಳ ಕತ್ತೆಯ ಹಾಲು ಕ್ಯಾನ್ಸರ್, ಬೊಜ್ಜು, ಅಲರ್ಜಿ ಮುಂತಾದ ಕಾಯಿಲೆಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿವೆ. ಬೇರೆ ಹಾಲುಗಳಿಂದ ಶಿಶುಗಳಿಗೆ ಅಲರ್ಜಿಯಾಗುವುದು ಉಂಟು. ಆದರೆ ಕತ್ತೆಯ ಹಲಾರಿ ತಳಿಯ ಹಾಲು ಮಕ್ಕಳಿಗೆ ಅಮೃತ. ಆ್ಯಂಟಿಆಕ್ಸಿಡೆಂಟ್, ಆಂಟಿಜೇಜಿಂಗ್ ಅಂಶಗಳು ಕತ್ತೆ ಹಾಲಿನಲ್ಲಿ ಕಂಡುಬರುತ್ತವೆ. ಇವುಗಳ ಹಾಲನ್ನು .ಔಷಧಿಗಳ ನಿಧಿ ಎಂದು ಪರಿಗಣಿಸಲಾಗುತ್ತದೆ. ಕತ್ತೆ ಹಾಲಿನಿಂದ ತಯಾರಿಸಿದ ಸೌಂದರ್ಯ ಉತ್ಪನ್ನಗಳು ಸಾಕಷ್ಟು ದುಬಾರಿಯಾಗಿದೆ. ಸಾಬೂನು, ಲಿಪ್ ಬಾಮ್, ಬಾಡಿ ಲೋಷನ್ ಇತ್ಯಾದಿಗಳನ್ನು ತಯಾರಿಸಲು ಕತ್ತೆ ಹಾಲನ್ನು ಬಳಸಲಾಗುತ್ತದೆ.(ಏಜೆನ್ಸೀಸ್​)
VIDEO: ನಾಲ್ಕಂತಸ್ತಿನ ಕಟ್ಟಡ ಕುಸಿತ- ಹಲವರು ಸಿಲುಕಿರುವ ಶಂಕೆ- ಭಯಾನಕ ವಿಡಿಯೋ ಇಲ್ಲಿದೆ ನೋಡಿ…

VIDEO: ಶಿವಮೊಗ್ಗದ ಚಾಕು ಇರಿತದ ಆರೋಪಿಗಳಿಗೆ ಎಸ್​ಡಿಪಿಐ ಲಿಂಕ್​- ಕೋಮು ಗಲಭೆಯೇ ಟಾರ್ಗೆಟ್​? ವಿಡಿಯೋ ನೀಡಿದೆ ಸಾಕ್ಷ್ಯ

VIDEO: ಡ್ರಗ್ಸ್​ ಸೇವಿಸಿ ಕುಣಿದು ಕುಪ್ಪಳಿಸಿದ ಪ್ರಧಾನಿ? ವೈರಲ್​ ವಿಡಿಯೋದಿಂದ ಪೇಚಿಗೆ ಸಿಲುಕಿದ ಲೇಡಿ ಪಿಎಂ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:6 − 2 =
Remember me
