ಪ್ರಯಾಗರಾಜ್:ಮಹಿಳೆಯರ ಪರವಾಗಿ ಇರುವ ಕಾನೂನುಗಳು ಹಲವು. ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಹಿಂಸೆಯ ಹಿನ್ನೆಲೆಯಲ್ಲಿ ಮಹಿಳಾ ಪರವಾಗಿರುವಂಥ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅವುಗಳ ಪೈಕಿ ವರದಕ್ಷಿಣೆ ಕಿರುಕುಳದ ಕುರಿತು ಹೇಳುವ ಐಪಿಸಿ 498ಎ ಸೆಕ್ಷನ್​. ವರದಕ್ಷಿಣೆ ಹಿಂಸೆ, ಕೊಲೆ ಪ್ರಕರಣಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಇದನ್ನು ಜಾರಿಗೆ ತರಲಾಗಿತ್ತು. ಆದರೆ ಕೊನೆಗೆ ಆಗಿದ್ದೇ ಬೇರೆ.
ತಮ್ಮ ಪರವಾಗಿರುವ ಕಾನೂನನ್ನು ಕೆಲವು ಹೆಂಗಸರು ಹಾಗೂ ಆಕೆಯ ಕುಟುಂಬಸ್ಥರು ದುರುಪಯೋಗಪಡಿಸಿಕೊಳ್ಳಲು ಶುರು ಮಾಡಿದರು. ಗಂಡ ಹಾಗೂ ಆತನ ಕುಟುಂಬದವರ ಮೇಲೆ ವಿನಾಕಾರಣ ಇಲ್ಲಸಲ್ಲದ ಆರೋಪ ಹೊರಿಸುವ ಘಟನೆಗಳು ನಡೆದವು. ಇದರಿಂದಾಗಿ ಕಾನೂನಿನ ಅನ್ವಯ ಹಿಂದೆ ಮುಂದೆ ನೋಡದೇ ಅಮಾಯಕ ಗಂಡ ಹಾಗೂ ಆತನ ಪಾಲಕರು ಜೈಲು ಸೇರುವಂತಾಗಿದೆ, ಪೊಲೀಸರ ದೌರ್ಜನ್ಯಕ್ಕೆ ಒಳಗಾಗಬೇಕಾಗಿ ಬಂದಿದೆ. ನಿಜ ಯಾವುದು, ಸುಳ್ಳು ಯಾವುದು ಎಂದು ತಿಳಿಯದೇ ಪೊಲೀಸರು ಕೂಡ ಆರೋಪಿಗಳ ಮೇಲೆ ಕೇಸು ಹಾಕುವಂತಾಯಿತು.
ಇದೇ ಕಾರಣಕ್ಕೆ, ಕಾನೂನು ದುರುಪಯೋಗದ ಕುರಿತು ಪುರುಷ ವರ್ಗದಿಂದ ಮಾತ್ರವಲ್ಲದೇ ಹಲವು ಮಹಿಳೆಯರಿಂದಲೂ ಭಾರಿ ಪ್ರತಿಭಟನೆ ಶುರುವಾಗಿದ್ದಿದೆ. ಇಂಥವರ ನೋವನ್ನು ಕಂಡಿರುವ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಗಂಡಿನ ಮನೆಯವರಿಗೆ ಭಾರಿ ಖುಷಿಯಾಗುವಂಥ ತೀರ್ಪೊಂದನ್ನು ನೀಡಿದೆ.
ಅದೇನೆಂದರೆ, ಐಪಿಸಿ 498ಎ ಅಡಿ ದಾಖಲಾದ ಯಾವುದೇ ಪ್ರಕರಣಗಳಲ್ಲಿ ಎರಡು ತಿಂಗಳುಗಳವರೆಗೆ ಯಾರನ್ನೂ ಬಂಧಿಸುವಂತಿಲ್ಲ. ಈ ಅವಧಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ನ್ಯಾಯಮೂರ್ತಿ ರಾಹುಲ್ ಚತುರ್ವೇದಿ ಅವರು ಹೇಳಿದ್ದಾರೆ. ದೂರು ದಾಖಲಾಗುತ್ತಲೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಮಿತಿಯನ್ನು ಕುಟುಂಬದ ಬಳಿಗೆ ಕಳುಹಿಸಬೇಕು. ಈ ಸಮಿತಿಯು ಸಮಗ್ರ ವರದಿಯನ್ನು ತಯಾರಿಸಿ ಅದನ್ನು ಕೋರ್ಟ್ ಹಾಗೂ ಪೊಲೀಸರಿಗೆ ಸಲ್ಲಿಸಬೇಕು. ಸಮಿತಿಯು ವರದಿ ಸಲ್ಲಿಸಿದರೂ ಸಮಿತಿಯ ಯಾವುದೇ ಸದಸ್ಯರನ್ನು ಪ್ರಕರಣದ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಕರೆಯುವಂತಿಲ್ಲ ಎಂದು ಅವರು ಹೇಳಿದ್ದಾರೆ.
ವರದಕ್ಷಿಣೆ ಕೇಸ್​ ದಾಖಲು ಮಾಡಿದ ನಂತರ ಎರಡು ತಿಂಗಳವರೆಗೆ ಪೊಲೀಸರು ಯಾವುದೇ ಕಠೋರ ಕ್ರಮಗಳನ್ನು ಕೈಗೊಳ್ಳುವಂತಿಲ್ಲ. ಈ ಎರಡು ತಿಂಗಳನ್ನು ‘ಕೂಲಿಂಗ್ ಪಿರಿಯೆಡ್​’ ಎಂದು ಪರಿಗಣಿಸಬೇಕು. ಕೌಟುಂಬಿಕ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನಗಳು ನಡೆಸಬೇಕು ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ಏನಿದು ಘಟನೆ?ಮಹಿಳೆಯೊಬ್ಬಳು ಗಂಡ, ಅತ್ತೆ-ಮಾವ ಸೇರಿದಂತೆ ಗಂಡನ ಕುಟುಂಬಸ್ಥರ ವಿರುದ್ಧ ಕೇಸ್​ ಹಾಕಿದ್ದಳು. ಮಾವ ಮತ್ತು ಗಂಡನ ಸಹೋದರರು ಲೈಂಗಿಕವಾಗಿ ಬಳಸಿಕೊಳ್ಳಲು ನೋಡುತ್ತಿದ್ದಾರೆ, ಇದರಿಂದ ತನಗೆ ಹಿಂಸೆ ಆಗಿದೆ. ಅಷ್ಟೇ ಅಲ್ಲದೇ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದಾರೆ, ದೌರ್ಜನ್ಯ ಎಸಗುತ್ತಿದ್ದಾರೆ ಎಂದೆಲ್ಲಾ ಅದರಲ್ಲಿ ಉಲ್ಲೇಖಿಸಿದ್ದಳು.
ಪೊಲೀಸರು ತನಿಖೆ ಕೈಗೊಂಡಾಗ ಇವೆಲ್ಲಾ ಸುಳ್ಳು ಎಂದು ತಿಳಿದಿತ್ತು. ಆದರೆ ಅದಕ್ಕೂ ಮುನ್ನ ಪೊಲೀಸರು ಗಂಡ ಮತ್ತು ಆತನ ಕುಟುಂಬದವರ ವಿರುದ್ಧ ಕೇಸ್​ ದಾಖಲಿಸಿ ವಿಚಾರಣೆಗೆ ಕರೆಸಿದ್ದರು. ಇದರಿಂದ ನೊಂದುಕೊಂಡಿದ್ದ ಗಂಡ ಕೋರ್ಟ್​ ಮೊರೆ ಹೋಗಿದ್ದರು. ವರದಕ್ಷಿಣೆ ಕಿರುಕುಳ ಕೇಸ್​ ಹೇಗೆಲ್ಲಾ ದುರುಪಯೋಗ ಆಗುತ್ತಿದೆ ಎಂದು ಅವರು ಹೇಳಿದ್ದರು. ಪತ್ನಿ ಮಾಡಿರುವ ತೀರಾ ಕಳಪೆ ಮಟ್ಟದ ಆರೋಪಗಳನ್ನು ಪರಿಗಣಿಸಿದ ನ್ಯಾಯಮೂರ್ತಿಗಳು ತೀವ್ರ ಅಸಮಾಧಾನಗೊಂಡು ಈ ರೀತಿ ಆದೇಶ ಹೊರಡಿಸಿದ್ದಾರೆ. ಈ ಕೇಸ್​ನಿಂದಾಗಿ ಹಲವಾರು ಕುಟುಂಬಗಳು ನಿಟ್ಟುಸಿರು ಬಿಡುವಂತಾಗಿದೆ.
ಮಕ್ಕಳನ್ನು ಆಯಾ ಕೈಗೆ ಕೊಟ್ಟು ಹೋಗುತ್ತೀರಾ? ಈ ಭಯಾನಕ ಘಟನೆಯನ್ನೊಮ್ಮೆ ಕೇಳಿ!

ಇಂಜಿನಿಯರ್​ನ ಹಣದ ದಾಹಕ್ಕೆ ಅಮ್ಮ-ಮಗು ಬಲಿ! ಕಂದನಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣು

ಗ್ಯಾಂಗ್​ರೇಪ್​ ಆರೋಪಿಗಳಿಗೆ ಫೈವ್​ಸ್ಟಾರ್​ ಬಿರಿಯಾನಿ? ಕಾಂಡೋಮ್​ ಬಳಸಿದ್ದವರಿಗೆ ವಿಐಪಿ ಟ್ರೀಟ್​ಮೆಂಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − four =
Remember me
