ನವದೆಹಲಿ:ಸ್ಕಾಚ್ ಗ್ರೂಪ್ ಮತ್ತು CAII -CEO’S ಅಸೋಸಿಯೇಷನ್ ​​​​ಇನ್‌ಕ್ಯೂಸಿವ್‌ ಇಂಡಿಯಾ ಸಂಸ್ಥೆಯ ಪ್ರತಿಷ್ಠಿತ ಸ್ಕಾಚ್ ಸಾರ್ವಜನಿಕ ಸೇವಾ ಪ್ರಶಸ್ತಿಗೆ (SKOCH PUBLIC SERVICE AWARD) ಭಾರತದ ಗೃಹ ಸಚಿವಾಲಯದ ಮುಖ್ಯ ತಂತ್ರಜ್ಞಾನ ಅಧಿಕಾರಿ ಡಾ. ಬಿ.ಎನ್.ಶೆಟ್ಟಿ ಭಾಜನರಾಗಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ. ಇವರು ಉಡುಪಿ ಜಿಲ್ಲೆಯ ಬೈಂದೂರಿನ ಬಿಜ್ರಿಯವರು.
ಭಾರತದ ಪ್ರಜೆಗಳಿಗಾಗಿ ಗಣನೀಯ ಸೇವೆ ಸಲ್ಲಿಸುವವರಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ದೀರ್ಘ ಅವಧಿಯವರೆಗೆ ಸಮಾಜದ ಒಳಿತಿಗಾಗಿ ತಮ್ಮನ್ನು ತೊಡಗಿಸಿಕೊಂಡಿರುವವರು ಈ ಪ್ರಶಸ್ತಿಗೆ ಭಾಜನರಾಗಿದ್ದು, ಇದನ್ನೀಗ ಡಾ.ಬಿ.ಎನ್‌.ಶೆಟ್ಟಿ ಅವರಿಗೆ ನೀಡಲಾಗಿದೆ ಎಂದು ಸಂಸ್ಥೆ ಹೇಳಿದೆ.

ಡಾ.ಬಿ.ಎನ್.ಶೆಟ್ಟಿ ಅವರು ಐಐಟಿ ಕಾನ್ಪುರ್‌ನ ವಿದ್ಯಾರ್ಥಿಯಾಗಿದ್ದಾರೆ. ಈ ಹಿಂದೆ ಇವರು ಭಾರತ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರದಲ್ಲಿ (ಎನ್‌ಐಸಿ) ಡೆಪ್ಯುಟಿ ಡೈರೆಕ್ಟರ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಸ್‌ಪೋರ್ಟ್, ವೀಸಾ ಮತ್ತು ಭಾರತದ ಸಾಗರೋತ್ತರ ಪೌರತ್ವವನ್ನು ಸುವ್ಯವಸ್ಥಿತಗೊಳಿಸಿದ ಮತ್ತು ಅನೇಕ ನಾಗರಿಕರ ಕೇಂದ್ರಿತ ಇ-ಆಡಳಿತ ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಇವರಿಗೆ ಸಲ್ಲುತ್ತದೆ.
ಇಂದು ಸುಲಭದಲ್ಲಿ ಪಾಸ್‌ಪೋರ್ಟ್ ಪಡೆಯಲು ಸಾಧ್ಯವಾಗಿದ್ದರೆ ಅಥವಾ ಪಾಸ್‌ಪೋರ್ಟ್ ಸೇವಾ ಕೇಂದ್ರದಲ್ಲಿ ಅತ್ಯಂತ ಸರಳವಾಗಿ ಜನಸಾಮಾನ್ಯರಿಗೆ ಕೆಲಸ ಸಾಧ್ಯವಾಗಿದ್ದರೆ ಅದಕ್ಕೆ ಕಾರಣ ಶೆಟ್ಟಿಯವರ ಕಠಿಣ ಪರಿಶ್ರಮ. ಅವರು ಅಭಿವೃದ್ಧಿಪಡಿಸಿದ ವಲಸೆ ವೀಸಾ, ವಿದೇಶಿಯರ ನೋಂದಣಿ ಟ್ರ್ಯಾಕಿಂಗ್ (IVFRT) ವ್ಯವಸ್ಥೆಯನ್ನು ಸುಗಮವಾಗಿಸಿದೆ. ಈ ಮೂಲಕ ವಿದೇಶಿ ಪ್ರಯಾಣಿಕರನ್ನು ಪತ್ತೆಹಚ್ಚಲು ಸುಲಭವಾಗಿದೆ. ಇಂಟರ್‌ಆಪರೇಬಲ್ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ (ICJS), ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (NCRP) ಅವರು ನೀಡಿದ ಇನ್ನೂ ಕೆಲವು ಕೊಡುಗೆಗಳಾಗಿವೆ.ನಿವೃತ್ತಿಯ ಹೊರತಾಗಿಯೂ, ಸರ್ಕಾರವು ಇವರ ಅಧಿಕಾರಾವಧಿಯನ್ನು ವಿಸ್ತರಿಸಿರುವುದು ಇವರ ಸೇವೆಗೆ ಸ್ಪಷ್ಟ ನಿದರ್ಶನವಾಗಿದೆ ಎಂದು ಸಂಸ್ಥೆ ಹೇಳಿದೆ.
VIDEO: ಆಗಸದಲ್ಲಿ ಖುಷಿಯಿಂದ ಹಾರುತ್ತಿದ್ದ ಮಹಿಳೆಯರು ಧೊಪ್‌ ಎಂದು ಬಿದ್ದರು- ಭಯಾನಕ ವಿಡಿಯೋ ವೈರಲ್‌
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
