ಔರಂಗಾಬಾದ್‌ (ಬಿಹಾರ):ಮಹಿಳೆಯೊಬ್ಬರು ಪೊಲೀಸ್‌ ಠಾಣೆಯಲ್ಲಿ ಬಲು ಕುತೂಹಲ ಎನ್ನುವ ಹೇಳಿಕೆ ನೀಡಿದ್ದು, ಇದನ್ನು ಕೇಳಿ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಅದೇನೆಂದರೆ ಮಾಟಗಾರನೊಬ್ಬ ದಿನವೂ ನನಗೆ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ ಎಂದು ಆಕೆ ಹೇಳಿಕೆ ನೀಡಿದ್ದಾಳೆ.
ಇಂಥದ್ದೊಂದು ಕೇಸ್‌ ದಾಖಲಾಗಿರುವುದು ಬಿಹಾರ ಔರಂಗಾಬಾದ್ ಜಿಲ್ಲೆಯ ಕುದ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಇಲ್ಲಿಯ ಗಾಂಧಿ ಮೈದಾನದ ನಿವಾಸಿಯಾದ ಮಹಿಳೆ ಇಂಥದ್ದೊಂದು ದೂರು ದಾಖಲು ಮಾಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈಕೆಯ ಮಗುವಿಗೆ ತೀವ್ರವಾಗಿ ಅನಾರೋಗ್ಯ ಬಾಧಿಸಿತ್ತು. ಯಾರೋ ನೀಡಿದ ಸಲಹೆಯಂತೆ ಈಕೆ ಪ್ರಶಾಂತ್‌ ಚತುರ್ವೇದಿ ಎಂಬ ಮಾಟಗಾರರನ್ನು ಸಂಪರ್ಕಿಸಿದ್ದರೆ. ಆ ವೇಳೆ ಆತ ಏನೋ ಒಂದು ಮಂತ್ರ ಹೇಳಿಕೊಟ್ಟು ಇದನ್ನು ಜಪಿಸು ಎಂದು ಹೇಳಿ ಕಳುಹಿಸಿದ್ದಾನೆ. 15 ದಿನ ಸತತವಾಗಿ ಇದೇ ಮಂತ್ರ ಹೇಳುತ್ತಾ ಬಂದ ನಂತರ ಆಕೆಯ ಮಗ ಪ್ರಾಣ ಕಳೆದುಕೊಂಡಿದ್ದಾನೆ.
ಇದನ್ನು ಮಂತ್ರವಾದಿಗೆ ಹೇಳಿದಾಗ ತನ್ನನ್ನು ಕಾಳಿ ದೇವಸ್ಥಾನಕ್ಕೆ ಬಂದು ಭೇಟಿಯಾಗಲು ಹೇಳಿದ. ಆ ಸಮಯದಲ್ಲಿ ನಾನು ಹೋದಾಗ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದ. ನಾನು ಪಾರಾಗಿದ್ದೆ. ಆದರೆ ಆ ದಿನದಿಂದ ನಿತ್ಯವೂ ನನ್ನ ಕನಸಿನಲ್ಲಿ ಬಂದು ಅತ್ಯಾಚಾರ ಮಾಡುತ್ತಿದ್ದಾನೆ. ಜೀವನವೇ ಬೇಸರವಾಗಿ ಹೋಗಿದೆ, ಮಲಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆ ದೂರಿದ್ದಾರೆ. ಈ ದೂರಿನ ಆಧಾರದ ಮೇಲೆ ಮಂತ್ರವಾದಿಯನ್ನು ಪೊಲೀಸರು ಕರೆಸಿದ್ದಾರೆ. ಆದರೆ ಈಕೆಯನ್ನು ಭೇಟಿಯಾಗಿರುವ ಬಗ್ಗೆ ಯಾವುದೇ ದಾಖಲೆಗಳು ಸಿಗಲಿಲ್ಲ. ಮಾತ್ರವಲ್ಲದೇ ಕನಸಿನಲ್ಲಿ ಬಂದು ರೇಪ್‌ ಮಾಡುತ್ತಾನೆ ಎಂದರೆ ಅದಕ್ಕೆ ಸಾಕ್ಷ್ಯಾಧಾರವೂ ಇಲ್ಲದ ಕಾರಣ ಆತನನ್ನು ಎಚ್ಚರಿಸಿ ಕಳುಹಿಸಲಾಗಿದೆ. ಆದರೆ ಮಹಿಳೆ ಮಾತ್ರ ಏನೂ ಮಾಡಲಾಗದೇ ಅಸಹಾಯಕಳಾಗಿದ್ದಾಳೆ.
ಮಂ‍‍ಟಪದಲ್ಲೇ ಮದುಮಗಳ ಮೇಲೆ ಕೈಹಾಕಿದ ವರ- ತಗೀ ಕೈ ಎಂದ ಪುರೋಹಿತರು: ವಿಡಿಯೋ ವೈರಲ್‌

ಗಂಡನ ಬಿಟ್ಟು ತವರು ಸೇರಿ ವಿವಾಹಿತನ ಸ್ನೇಹಕ್ಕೆ ಬಿದ್ದು ಒದ್ದಾಡುತ್ತಿರುವೆ- ಪ್ಲೀಸ್‌ ನನಗೆ ದಾರಿತೋರಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + eighteen =
Remember me
