ನವದೆಹಲಿ:ಸಹಸ್ರ ಕೋಟಿ ರೂಪಾಯಿ ತೆರಿಗೆ ವಂಚನೆ ಮತ್ತು ಹಣದ ಅಕ್ರಮ ವರ್ಗಾವಣೆ ಆರೋಪ ಹೊತ್ತ ಚೀನಾ ಮೂಲದ ವಿವೋ ಕಂಪೆನಿಯ ಮೇಲೆ ಕಳೆದ ವಾರವಷ್ಟೇ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿತ್ತು. ವಿವೋ ಮುಖ್ಯ ಕಚೇರಿ ಮತ್ತು ಅದಕ್ಕೆ ಸಂಬಂಧಿಸಿದ 44 ಸ್ಥಳಗಳ ಮೇಲೆ ದಾಳಿ ನಡೆದಿತ್ತು. ಇದರ ಬೆನ್ನಲ್ಲಿಯೇ ಕಂಪೆನಿಯ ಇಬ್ಬರು ಪ್ರಮುಖ ನಿರ್ದೇಶಕರು ಭಾರತದಿಂದ ಪಲಾಯನ ಮಾಡಿದ್ದರು. ಇದೀಗ ಚೀನಾದ ಕಂಪೆನಿಯೇ ಆಗಿರುವ ಒಪ್ಪೋ ಇಂಡಿಯಾ 4,389 ಕೋಟಿ ರೂಪಾಯಿ ತೆರಿಗೆ ವಂಚಿಸಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಮಾಹಿತಿ ನೀಡಿದೆ. ಕಳೆದ ಮೇ ತಿಂಗಳಲ್ಲಿ ಒಪ್ಪೋ ಸಂಸ್ಥೆಯ ಹಲವು ಕಚೇರಿಗಳ ಮೇಲೆ ಇ.ಡಿ ದಾಳಿ ನಡೆಸಿತ್ತು. ಇದೀಗ ತನಿಖೆಯಿಂದಾಗಿ ಕಂಪೆನಿ ಬೃಹತ್​ ಪ್ರಮಾಣದ ಹಣವನ್ನು ವಂಚಿಸಿರುವುದು ತಿಳಿದುಬಂದಿದೆ.
ಒಪ್ಪೋ ಇಂಡಿಯಾದ ಹೆಸರಿನಲ್ಲಿ ಇರುವ ಚೀನಾದ ಭಾರತದ ಸ್ಮಾರ್ಟ್​ಫೋನ್​ ಶಾಖೆಯು ತೆರಿಗೆ ಹೊಣೆಗಾರಿಕೆಯನ್ನು ತಪ್ಪಿಸಲು ತನ್ನ ಒಟ್ಟೂ ವ್ಯವಹಾರದ 50 ಪ್ರತಿಶತ (62,476 ಕೋಟಿ ರೂಪಾಯಿಗಳನ್ನು) ವಿದೇಶಕ್ಕೆ ರವಾನಿಸಿರುವುದು ಬೆಳಕಿಗೆ ಬಂದಿದೆ. ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ಒಪ್ಪೋ ಇಂಡಿಯಾ ತನ್ನ ಆದಾಯದ ಹೆಚ್ಚಿನ ಭಾಗವನ್ನು ಚೀನಾ ಮತ್ತು ಇತರ ಕೆಲವು ದೇಶಗಳಿಗೆ ಕಳುಹಿಸಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ.
“ಒಪ್ಪೋ ಇಂಡಿಯಾದ ಹಿರಿಯ ನಿರ್ವಹಣಾ ಉದ್ಯೋಗಿಗಳು ಮತ್ತು ದೇಶೀಯ ಪೂರೈಕೆದಾರರನ್ನು ಪ್ರಶ್ನಿಸಲಾಗಿದೆ. ತೆರಿಗೆ ವಿಚಾರದಲ್ಲಿ ಕಂಪೆನಿ ತಪ್ಪು ಮಾಹಿತಿ ನೀಡಿರುವುದನ್ನು ವಿಚಾರಣೆ ವೇಳೆ ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಪ್ಪೋ ಇಂಡಿಯಾ ಪಾವತಿಸಿದ ರಾಯಧನ ಮತ್ತು ಪರವಾನಗಿ ಶುಲ್ಕ ಅವರು ಆಮದು ಮಾಡಿಕೊಂಡ ಸರಕುಗಳ ವಹಿವಾಟು ಮೌಲ್ಯಕ್ಕೆ ಸರಿಹೊಂದುತ್ತಿಲ್ಲ. ಅಷ್ಟೇ ಅಲ್ಲದೇ, ಒಪ್ಪೋ, ವಿವೋ ಒನ್​ ಪ್ಲಸ್​ ಮತ್ತು ರೀಲ್​ಮೀ ಸ್ಮಾರ್ಟ್‌ಫೋನ್‌ಗಳನ್ನು ಒಂದೇ ಕಂಪೆನಿಯು ವಿಭಿನ್ನ ಬ್ರಾಂಡ್ ಹೆಸರುಗಳಲ್ಲಿ ತಯಾರಿಸುತ್ತದೆ. ಈ ಕಂಪೆನಿಯು ಚೀನಾದ ಬಹುರಾಷ್ಟ್ರೀಯ ಕಂಪೆನಿ ಬಿಬಿಕೆ ಎಲೆಕ್ಟ್ರಾನಿಕ್ಸ್ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಟಿ ಕೋಟಿ ವಂಚನೆ: ವಿವೋ ಮೊಬೈಲ್​ ಫೋನ್​ ಕಂಪೆನಿ ನಿರ್ದೇಶಕರು ಭಾರತದಿಂದ ಎಸ್ಕೇಪ್​!

ಯಾರಿಗುಂಟು, ಯಾರಿಗಿಲ್ಲ 25 ಕೋಟಿ ರೂಪಾಯಿ ಗೆಲ್ಲುವ ಅದೃಷ್ಟ: ಓಣಂ ನಿಮಿತ್ತ ಹಣದ ಹೊಳೆ

VIDEO: ‘ನಾಚಿಗೆ ಆಗಲ್ವಾ? ರಾಜಕಾರಣಿ ಥರ ಕಾಣಿಸ್ತೀರಿ’ ಎಂದು ಹೆಡ್​ಮಾಸ್ಟರ್​ ಸಂಬಳ ಕಟ್​ ಮಾಡಿದ ಮ್ಯಾಜಿಸ್ಟ್ರೇಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 3 =
Remember me
