ಕೊಟ್ಟಾಯಂ (ಕೇರಳ):ಕೇರಳ ರಾಜ್ಯದ ಆಲಪ್ಪುಳ ಜಿಲ್ಲೆಯ ಆರ್ಯಡ್‌ನಿಂದ ನಾಪತ್ತೆಯಾಗಿದ್ದ ಬಿಜೆಪಿ ಕಾರ್ಯಕರ್ತ ಬಿಂದು ಕುಮಾರ್ ಅಲಿಯಾಸ್ ಬಿಂದನ್ (44) ಶವವನ್ನು ಪತ್ತೆ ಹಚ್ಚುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.
ನಿಗೂಢವಾಗಿ ನಾಪತ್ತೆಯಾಗಿದ್ದ ಬಿಂದು ಕುಮಾರ್ ಅವರ ಎಷ್ಟು ಹುಡುಕಿದರೂ ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ಗಂಡ ನಾಪತ್ತೆಯಾಗಿರುವುದಾಗಿ ಅವರ ಪತ್ನಿ ದೂರು ದಾಖಲಿಸಿ ಹಲವು ದಿನ ಕಳೆದರೂ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆದರೆ ಇದೀಗ ಅವರ ಸ್ನೇಹಿತನ ಮನೆಯ ಅಡುಗೆಕೋಣೆಯ ನೆಲದ ಅಡಿಯಲ್ಲಿ ಮೃತದೇಹ ದೊರೆತಿದೆ!
ಮಲಯಾಳಂನ ಸೂಪರ್ ಹಿಟ್ ಸಿನಿಮಾ ‘ದೃಶ್ಯಂ’ನಂತೆ ಈ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಇದೇ ಚಿತ್ರದ ಉತ್ತೇಜನ ಪಡೆದುಕೊಂಡೇ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಬಿಂದು ಕುಮಾರ್ ಅವರು ಸೆ. 26ರಂದು ನಾಪತ್ತೆಯಾಗಿದ್ದರು. ಅವರು ಕಾಣೆಯಾಗಿದ್ದಾರೆ ಎಂದು ಸೆ. 28ರಂದು ಕುಟುಂಬದ ಸದಸ್ಯರು ದೂರು ದಾಖಲಿಸಿದ್ದರು. ಆದರೆ ಅವರ ಸುಳಿವು ಪೊಲೀಸರಿಗೂ ಸಿಕ್ಕಿರಲಿಲ್ಲ. ಇದರ ಬೆನ್ನತ್ತಿ ಹೋದಾಗ ಕೊಟ್ಟಾಯಂ ಜಿಲ್ಲೆಯ ಚಂಗನಸ್ಸೆರಿ ಪಟ್ಟಣದ ಕಾಲೋನಿಯೊಂದರ ಸಮೀಪದ ಟವರ್ ಲೊಕೇಷನ್‌ನಲ್ಲಿ ಬಿಂದು ಕುಮಾರ್ ಅವರ ಮೊಬೈಲ್ ಫೋನ್ ಇರುವುದು ತಿಳಿಯಿತು.
ಅಲ್ಲಿಯೇ ಸಮೀಪವೆಲ್ಲಾ ಶೋಧ ಕಾರ್ಯ ನಡೆಸಿದಾಗ ಅವರ ಬೈಕ್ ಸಿಕ್ಕಿತ್ತು. ಅವುಗಳ ಆಧಾರದಲ್ಲಿ ಪೊಲೀಸರು ಕಾಲೋನಿಯಲ್ಲಿನ ಎಂಸಿ ರಸ್ತೆಯ ರಾಂಡಮ್ ಮಾಲಂ ಸಮೀಪದಲ್ಲಿರುವ ಮುತ್ತುಕುಮಾರ್ ಎಂಬಾತ ಬಾಡಿಗೆಗೆ ಪಡೆದ ಮನೆಗೆ ತೆರಳಿದ್ದರು. ಮುತ್ತುಕುಮಾರ ಮತ್ತು ಬಿಂದು ಕುಮಾರ್ ಇಬ್ಬರೂ ಸ್ನೇಹಿತರು ಎನ್ನಲಾಗಿದೆ.
ಮುತ್ತುಕುಮಾರನ ಮನೆಯನ್ನು ಸೂಕ್ಷ್ಮವಾಗಿ ಪೊಲೀಸರು ಅವಲೋಕಿಸಿದಾಗ ಅಲ್ಲಿ ಹೊಸದಾಗಿ ಗಾರೆ ಹಾಕಿದ ಜಾಗ ಕಂಡ ಪೊಲೀಸರಿಗೆ ಅದರ ಬಗ್ಗೆ ಅನುಮಾನ ಮೂಡಿತ್ತು. ಆ ಕಾಂಕ್ರೀಟ್ ಅನ್ನು ಒಡೆದು, ಸುಮಾರು ಆರು ಗಂಟೆಗಳ ಹುಡುಕಾಟದ ಬಳಿಕ ನೆಲದೊಳಗೆ ಬಿಂದು ಕುಮಾರ್ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆಗೆ ಶವ ಕಳುಹಿಸಲಾಗಿದ್ದು, ಇದು ಬಿಂದು ಕುಮಾರ್​ ಅವರದ್ದೇ ಎಂದು ಸಾಬೀತಾಗಿದೆ. ಆದರೆ ಕೊಲೆ ಏಕೆ ನಡೆದಿದೆ ಎಂಬ ಬಗ್ಗೆ ಇನ್ನಷ್ಟೇ ತನಿಖೆಯಿಂದ ಸತ್ಯ ಹೊರಬರಬೇಕಿದೆ.(ಏಜೆನ್ಸೀಸ್​)
ಡಿಜಿಪಿಯ ಆದೇಶವನ್ನೇ ಉಲ್ಲಂಘಿಸಿ ಪಿಎಫ್​ಐ ಮೇಲಿನ 1600 ಕೇಸ್​ ವಾಪಸ್​ ಮಾಡಿದ್ದ ಸಿದ್ದರಾಮಯ್ಯ?
ಪತ್ನಿಯ ದೌರ್ಜನ್ಯ ಎಳೆಎಳೆಯಾಗಿ ಬಿಚ್ಚಿಟ್ಟ ಪತಿಯಂದಿರು: ಪುರುಷ ಆಯೋಗ ರಚನೆಗೆ ಕೋರಿ ಭಾರಿ ಪ್ರತಿಭಟನೆ
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen + seven =
Remember me
