ಗ್ರಾಹಕರಿಗೆ ಆಹಾರ ಪೂರೈಕೆ ಮಾಡಲು ಬೈಕ್‌ಗಳ ಮೇಲೆ ನಮ್ಮಲ್ಲಿ ಡೆಲಿವರಿ ಬಾಯ್‌ಗಳು ಬಂದರೆ ಕೆಲವು ದೇಶಗಳಲ್ಲಿ ಆಹಾರಗಳನ್ನು ಡ್ರೋನ್ ಮೂಲಕ ಸಾಗಿಸಲಾಗುತ್ತದೆ. ಅದೇ ರೀತಿ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಕೂಡ ಡ್ರೋನ್‌ ಮೂಲಕ ಆಹಾರ ತೆಗೆದುಕೊಂಡು ಹೋಗಲಾಗುತ್ತಿದೆ. ಆದರೆ ಇದೀಗ ಅದರ ವಿಡಿಯೋ ಒಂದು ವೈರಲ್‌ ಆಗಿದೆ.ಅದೇನೆಂದರೆ ಹೀಗೆ ಆಹಾರ ತೆಗೆದುಕೊಂಡು ಹೋಗುತ್ತಿರುವ ಡ್ರೋನ್‌ ಮತ್ತು ಕಾಗೆಯ ಜತೆಗೆ ಜಗಳವಾಗಿರುವ ವಿಡಿಯೋ ಇದಾಗಿದೆ. ಆಹಾರ ತೆಗೆದಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಅದರಲ್ಲಿ ಆಹಾರ ಇದೆ ಎಂದು ತಿಳಿದ ಕಾಗೆಯೊಂದು ಹಾರಿಬಂದು ಡ್ರೋನ್ ಅನ್ನು ಮೂತಿಯಿಂದ ಕುಕ್ಕಿ ಎಳೆದಾಡಿದೆ.ಈ ಸಂದರ್ಭದಲ್ಲಿ ಅದೃಷ್ಟವಶಾತ್‌ ಡ್ರೋನ್‌ಗೆ ಏನೂ ಆಗಲಿಲ್ಲ. ಕಾಗೆ ಕುಕ್ಕಿದ ರಭಸಕ್ಕೆ ಡ್ರೋನ್‌ ಅತ್ತಿತ್ತ ಅಲುಗಾಡಿದರೂ ಅದಕ್ಕೆ ಹಾನಿಯಾಗಲಿಲ್ಲ. ಆದರೆ ಅದರಲ್ಲಿದ್ದ ಆಹಾರ ಕೆಳಕ್ಕೆ ಬಿದ್ದಿದೆ. ಆಹಾರ ಕೆಳಗೆ ಬೀಳುತ್ತಿದ್ದಂತೆಯೇ ಕಾಗೆ ಹಾರಿ ಹೋಗಿದೆ. ಇದರ ವಿಡಿಯೋ ಇದೀಗ ನೋಡುಗರನ್ನು ಅಚ್ಚರಿಗೊಳಿಸುತ್ತಿದೆ.ಇಲ್ಲಿದೆ ನೋಡಿ ವಿಡಿಯೋ:
https://www.youtube.com/watch?v=SAshKROIjtQ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × one =
Remember me
