ತೈವಾನ್​:ಅದೃಷ್ಟ ಚೆನ್ನಾಗಿದ್ದರೆ ಏನು ಬೇಕಾದರೂ ಆಗುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಹೆಚ್ಚಿನ ಸ್ಮಾರ್ಟ್​ಫೋನ್​ಗಳು ನೀರಿನಲ್ಲಿ ಬಿದ್ದರೆ ಮುಗೀತು, ಅದು ಹಾಳಾಗುವುದೇ ಹೆಚ್ಚು. ಇನ್ನು ಕೆರೆಯಲ್ಲಿ ಮೊಬೈಲ್​ಫೋನ್​ ಬಿದ್ದರೆ? ಮುಗಿದೇಹೋಯ್ತು ಕಥೆ. ಕೆರೆಯಲ್ಲಿ ಬಿದ್ದರೆ ಮೊಬೈಲ್​ ಹಾಳಾಗುವುದು ದೂರದ ಮಾತು, ಅದು ಸಿಕ್ಕರೇ ಪುಣ್ಯ.
ಆದರೆ ಇಲ್ಲೊಬ್ಬ ತೈವಾನ್​ ವಾಸಿಯ ಅದೃಷ್ಟ ಚೆನ್ನಾಗಿತ್ತು. ಕೆರೆಯಲ್ಲಿ ಬಿದ್ದ ಮೊಬೈಲ್​ ಫೋನ್​ ಸಿಕ್ಕಿದೆ, ಅಷ್ಟೇ ಅಲ್ಲದೇ ಅದು ಚಾಲ್ತಿಯಲ್ಲೂ ಇದೆ. ಅದೂ ಯಾವಾಗ ಅಂತೀರಾ? ಬರೋಬ್ಬರಿ ಒಂದು ವರ್ಷದ ನಂತರ! ಅದು ಚಾಲ್ತಿಯಲ್ಲಿ ಇರುವುದನ್ನು ಕಂಡು ಅದರ ಮಾಲೀಕ ಚೆನ್​ ಖುದ್ದು ದಂಗಾಗಿ ಹೋಗಿದ್ದಾನೆ.
ಅಷ್ಟಕ್ಕೂ ಆಗಿದ್ದೇನೆಂದರೆ ತೈವಾನ್​ನ ಬಹುಭಾಗ ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಬರಗಾಲವನ್ನು ಎದುರಿಸುತ್ತಿದೆ. ಕೆಲವು ಕಡೆಗಳಲ್ಲಿ ಮಾತ್ರ ಅಲ್ಪಸ್ವಲ್ಪ ನೀರು ಕಾಣಬಹುದು. ನೀರು ಹೊಂದಿದ್ದ ಕೆರೆಯಲ್ಲಿ ಚೆನ್​ನ ಐಫೋನ್​ ಕಳೆದ ವರ್ಷ ಬಿದ್ದುಹೋಗಿತ್ತು. ಎಷ್ಟು ಹುಡುಕಾಡಿದರೂ ಸಿಕ್ಕಿರಲಿಲ್ಲ. ಅದು ಕೆರೆಯ ತಳಭಾಗಕ್ಕೆ ಹೋಗಿದ್ದರಿಂದ ಅದರ ಆಸೆಯನ್ನು ಚೆನ್​ ಬಿಟ್ಟಿದ್ದ.
ಆದರೆ ಮೊನ್ನೆ ಆತ ಅದೇ ಕೆರೆಯ ಸಮೀಪ ಹೋದಾಗ ಬರಗಾಲದಿಂದ ಕೆರೆ ಸಂಪೂರ್ಣ ಬತ್ತಿರುವುದು ಕಾಣಿಸಿತು. ಆದರೆ ಅಚ್ಚರಿ ಎಂದರೆ ಮೇಲ್ಭಾಗದಲ್ಲಿ ಆತನ ಐಫೋನ್​ ಕಾಣಿಸಿತು. ಅದರ ಕವರ್​ ಎಲ್ಲವನ್ನೂ ನೋಡಿದ ಚೆನ್​ಗೆ ಇದು ತನ್ನದೇ ಫೋನ್​ ಎಂದು ಗೊತ್ತಾಯಿತು.
ಕೆರೆಯಲ್ಲಿನ ಹೂಳಿನಿಂದಾಗಿ ಕೆಸರು ತುಂಬಿಕೊಂಡಿದ್ದ ಮೊಬೈಲ್​ಫೋನ್​ ಅನ್ನುನಿಧಾನವಾಗಿ ಒರೆಸಿ ನೋಡಿದಾಗ ಅದಿನ್ನೂ ಚಾಲ್ತಿಯಲ್ಲಿ ಇದ್ದುದು ಕಂಡು ಚೆನ್​ ಖುಷಿ ತಡೆಯಲಾಗಲಿಲ್ಲ. ಕೂಡಲೇ ಅದರ ಪಾರ್ಟ್​ಗಳನ್ನು ಬೇರ್ಪಡಿಸಿ ನೀರಿನ ಪಸೆಯನ್ನು ಒರೆಸಿ ಫೋನ್​ ಅನ್ನು ಜೋಪಾನ ಮಾಡಿಟ್ಟುಕೊಂಡಿದ್ದಾನೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಈತ ಪೋಸ್ಟ್​ ಮಾಡಿದ್ದು, ಇದೀಗ ಭಾರಿ ವೈರಲ್​ ಆಗಿದೆ.
ಆತ ಕೈಲಾಗದ ಗಂಡನಮ್ಮಾ… ಡಿವೋರ್ಸ್​ ಕೊಡ್ತೇನೆಂದದ್ದಕ್ಕೆ ಇಷ್ಟು ಓದಿರೋ ನೀನು ಹೆದರಿಬಿಟ್ಯಾ? ಛೇ…

ಇದು ಕಿಚನ್ ಕಿವಿಮಾತು: ಅಯ್ಯೋ ಹೀಗಾಯ್ತಲ್ಲ ಎನ್ನೋ ಮಾತು ಬಿಡಿ… ಈ ಟಿಪ್ಸ್​ ಅನುಸರಿಸಿ…

ಮೊದಲ ರಾತ್ರಿ ರಕ್ತ ಕಾಣಿಸಿಲ್ಲ ಎಂದು ಡಿವೋರ್ಸ್​ ನೀಡಿದ ಪತಿ ಮಹಾಶಯ ₹10 ಲಕ್ಷ ಬೇಡಿಕೆ ಇಟ್ಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − eleven =
Remember me
