ಮುಂಬೈ:ಕಳೆದೊಂದು ವರ್ಷದಿಂದ ಡ್ರಗ್ಸ್‌ ಪ್ರಕರಣ ಸಿನಿರಂಗದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಕಳೆದ ವರ್ಷ ನಟ ಸುಶಾಂತ್‌ ಸಿಂಗ್‌ ಮೃತಪಟ್ಟ ನಂತರ ಶುರುವಾಗಿರುವ ಡ್ರಗ್ಸ್‌ ತನಿಖೆ ಇದಾಗಲೇ ಹಲವಾರು ನಟ-ನಟಿಯರಿಗೆ ಭಾರಿ ಆಘಾತವನ್ನೇ ನೀಡಿದೆ.
ಇದೀಗ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ಬಾಲಿವುಡ್ ನಟ ಅರ್ಮಾನ್ ಕೊಹ್ಲಿ ಅವರ ಮುಂಬೈ ನಿವಾಸದ ಮೇಲೆ ದಾಳಿ ನಡೆಸಿದೆ.
ವಿವಾದಿತ ನಟ ಎಂದೇ ಗುರುತಿಸಿಕೊಂಡಿರುವ ಬಿಗ್ ಬಾಸ್‌ನ ಮಾಜಿ ಸ್ಪರ್ಧಿಯೂ ಆಗಿರುವ ಅರ್ಮಾನ್‌ನನ್ನು 2018ರಲ್ಲಿಯೂ ಒಮ್ಮೆ ಬಂಧಿಸಲಾಗಿತ್ತು. ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಮದ್ಯದ ಬಾಟಲಿಗಳನ್ನು ಇಟ್ಟುಕೊಂಡಿರುವುದಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿತ್ತು. ಈಗ ಡ್ರಗ್ಸ್‌ ಕೇಸ್‌ನಲ್ಲಿ ಪುನಃ ಇವರನ್ನು ಅರೆಸ್ಟ್‌ ಮಾಡಲಾಗಿದೆ.
ಕಿರುತೆರೆ ನಟ ಗೌರವ್ ದೀಕ್ಷಿತ್ ಅವರನ್ನು ಕೇಂದ್ರ ಮಾದಕ ವಸ್ತು ನಿಯಂತ್ರಣ ದಳ ಶುಕ್ರವಾರ ಬಂಧಿಸಿತ್ತು. ಅವರ ವಿಚಾರಣೆ ವೇಳೆ ಅರ್ಮಾನ್ ಕೊಹ್ಲಿಯ ಬಗ್ಗೆಯೂ ತಿಳಿದುಬಂದಿತ್ತು. ಈ ಹಿಂದಿನ ಇತಿಹಾಸವನ್ನು ಪರಿಗಣನೆಗೆ ತೆಗೆದುಕೊಂಡ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದಾರೆ. ಏತನ್ಮಧ್ಯೆ, ಗೌರವ್ ದೀಕ್ಷಿತ್ ಅವರ ನಿವಾಸದಿಂದ ತನಿಖಾ ಸಂಸ್ಥೆ ‘ಎಂಡಿ’ ಮತ್ತು ‘ಚರಸ್’ ಅನ್ನು ವಶಪಡಿಸಿಕೊಂಡಿದೆ. ಸದ್ಯ ಅರ್ಮಾನ್ ಅವರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಆಗಸ್ಟ್ 30 ರವರೆಗೆ ಎನ್‌ಸಿಬಿ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ವಾಯುಭಾರ ಕುಸಿತ: ಇಂದಿನಿಂದ ಭಾರಿ ಮಳೆ ಸಾಧ್ಯತೆ- 12 ಜಿಲ್ಲೆಗಳಲ್ಲಿ ಹೈ ಅಲರ್ಟ್‌

ಫೇಸ್‌ಬುಕ್‌ನಲ್ಲಿ ವಿವಾಹಿತೆಯ ರಿಕ್ವೆಸ್ಟ್‌ ಅಕ್ಸೆಪ್ಟ್‌ ಮಾಡಿದ್ದೇ ಬದುಕು ಮೂರಾಬಟ್ಟೆಯಾಗಿದೆ, ಪ್ಲೀಸ್‌ ದಾರಿ ತೋರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 5 =
Remember me
