ನವದೆಹಲಿ:ಬಾಲಿವುಡ್‌ ತಾರೆ ಸುಶಾಂತ್​ ಆತ್ಮಹತ್ಯೆಯ ಪ್ರಕರಣದ ತನಿಖೆಯ ವೇಳೆ ಸಶಾಂತ್‌ ಹಾಗೂ ರಿಯಾಗೆ ಮಾದಕ ವಸ್ತು ಸರಬರಾಜು ಮಾಡಲಾಗುತ್ತಿತ್ತು ಎಂಬ ಮಾಹಿತಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ದೊರೆತಿರುವ ಬೆನ್ನಲ್ಲೇ ಇದೀಗ, ಸ್ಯಾಂಡಲ್‌ವುಡ್‌ಗೂ, ಡ್ರಗ್ಸ್‌ ನಂಟು ಇದೆ ಎಂಬ ಭಾರಿ ಸುದ್ದಿ ಕೇಳಿಬಂದಿದೆ.
ಕರ್ನಾಟಕದ ಕೆಲ ಪ್ರಮುಖ ಸಂಗೀತ ನಿರ್ದೇಶಕರು ಮತ್ತು ನಟರಿಗೆ ಡ್ರಗ್ ಡೀಲರ್ ಜತೆ ಸಮೀಪದ ನಂಟಿದ್ದು, ಅವರ ಮೇಲೆ ನಿಗಾ ವಹಿಸಲಾಗಿದೆ ಎಂದು ಮಾದಕವಸ್ತು ನಿಯಂತ್ರಣ ಮಂಡಳಿ (ಎನ್‌ಸಿಬಿ) ಮಾಹಿತಿ ನೀಡಿದೆ.
ಎನ್‍ಸಿಬಿ ಕೆಲ ವಾರಗಳ ಹಿಂದೆ ಮಾದಕದ್ರವ್ಯಗಳ ಸರಬರಾಜು ಮಾಡುತ್ತಿದ್ದ ಆರೋಪದ ಮೇಲೆ ಡೀಲರ್ ರೆಹಮಾನ್‌ನನ್ನು ಬಂಧಿಸಿತ್ತು. ಈತ ತನ್ನ ಕಾಲೇಜಿನ ವಿದ್ಯಾರ್ಥಿಗಳಿಗೆ ಮತ್ತು ನೆರೆಹೊರೆಯವರಿಗೆ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆನ್‍ಲೈನ್‍ನಲ್ಲಿ ಬಿಟ್‍ಕಾಯಿನ್‍ಗಳ ವಿನಿಮಯದಿಂದ ಎಂಡಿಎಂಎ (ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್) ಮಾತ್ರೆಗಳ ಖರೀದಿ ಮಾಡುತ್ತಿದ್ದು, ತನಿಖೆ ವೇಳೆ ತಿಳಿದು ಬಂದಿತ್ತು.
‘ಇದೇ ತಿಂಗಳ 21ರಂದು ಬೆಂಗಳೂರಿನ ಕಲ್ಯಾಣನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‍ಮೆಂಟ್‍ನಿಂದ 145 ಎಂಡಿಎಂಎ ಮಾತ್ರೆಗಳು ಮತ್ತು ಎರಡೂವರೆ ಲಕ್ಷಕ್ಕೂ ಹೆಚ್ಚಿನ ನಗದು ಹಣವನ್ನು ವಶಪಡಿಸಿಕೊಂಡಿದ್ದೇವೆ. ಬೆಂಗಳೂರಿನ ನಿಕೂ ಹೌಸ್‍ನಲ್ಲಿ 96 ಎಂಡಿಎಂಎ ಮಾತ್ರೆಗಳು ಮತ್ತು 180 ಎಲ್‍ಎಸ್ಡಿ ಬ್ಲಾಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಮಾದಕವಸ್ತು ನಿಯಂತ್ರಣ ಮಂಡಳಿ ಉಪನಿರ್ದೇಶಕ ಕೆ.ಪಿ ಎಸ್. ಮಲ್ಹೋತ್ರಾ ತಿಳಿಸಿದ್ದಾರೆ.
ಇದನ್ನೂ ಓದಿ:ಇಲ್ಲಿದ್ದಾರೆ ಸ್ನಾತಕೋತ್ತರ ಹಾಗೂ ಪದವೀಧರ ಭಿಕ್ಷುಕರು!
ಈ ವಿವಾದಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ, ಮಾದಕ ದ್ರವ್ಯ ಸರಬರಾಜಿನ ಕಿಂಗ್‍ಪಿನ್ ಆಗಿದ್ದ ಲೇಡಿ ಡ್ರಗ್ ಡೀಲರ್ ಬಂಧನವಾಗಿದೆ. ಇಷ್ಟೇ ಅಲ್ಲದೇ, ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿರುವ ಆಕೆಯ ಮನೆಯಿಂದ ಎಂಡಿಎಂಎಯ 270 ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ವೇಳೆ ಎಂ ಅನೂಪ್, ಆರ್ ರವೀಂದ್ರನ್ ಮತ್ತು ಅನಿಖಾ ಡಿ ಎಂಬ ಮೂವರು ಡ್ರಗ್ ಪೆಡ್ಲರ್‌ಗಳನ್ನೂ ಬಂಧಿಸಿರುವ ಬಗ್ಗೆ ಕೆ.ಪಿ ಎಸ್. ಮಲ್ಹೋತ್ರಾ ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ಬಂಧಿತ ಆರೋಪಿಗಳು ಕನ್ನಡದ ಪ್ರಮುಖ ಸಂಗೀತ ನಿರ್ದೇಶಕರು, ನಟರು ಮತ್ತು ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರು ಸೇರಿದಂತೆ ಸಮಾಜದ ಶ್ರೀಮಂತ ವರ್ಗಗಳಿಗೆ ಡ್ರಗ್ಸ್ ಸರಬರಾಜು ಮಾಡುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಸಂಬಂಧ ಬೆಂಗಳೂರು ಎನ್‍ಸಿಬಿ ಘಟಕದಿಂದ ಹೆಚ್ಚಿನ ಜನರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಬಾಲಿವುಡ್‌ ನಟಿಯರಿಂದ ದೂರವಾಗಿದ್ದ ದಾವೂದ್‌ಗೆ ಸಿಕ್ಕಿದೆ ಪಾಕ್‌ ಸುಂದರಿಯರ ಸಂಗ!

ಅರ್ಚಕ ನಾರಾಯಣಾಚಾರ್‌ ಪುತ್ರಿಯರು ಹಿಂದೂಗಳಲ್ಲ: ಪರಿಹಾರದ ಚೆಕ್‌ನಿಂದ ಸತ್ಯ ಬಯಲು…!

ಪ್ರಿಯತಮನ ಕಣ್ಣುತಪ್ಪಿಸಿ ಚಾಟಿಂಗ್‌: ಪಾಸ್‌ವರ್ಡ್‌ಗಾಗಿ ಕೊಲೆಯಾದಳು ಮಹಿಳೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 9 =
Remember me
