ಮುಂಬೈ:ಮೂವರು  ಮಹಿಳೆಯರು ಫುಲ್​ ಟೈಟ್​ ಆಗಿ ಮಧ್ಯರಾತ್ರಿ ರಸ್ತೆಯ ಮಧ್ಯೆ ಭಾರಿ ಗಲಾಟೆ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ.
ಕಳೆದ ತಿಂಗಳು ಮುಂಬೈನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದರ ವಿಡಿಯೋ ಈಗ ವೈರಲ್​ ಆಗಿದೆ. ಮೂವರು ಮಹಿಳೆಯರು ಕುಡಿದು ಓಲಾ ಕ್ಯಾಬ್​ನ ಚಾಲಕ, ಅಲ್ಲಿಗೆ ಬಂದ ಪೊಲೀಸ್​ ಎಲ್ಲರನ್ನೂ ಸುಸ್ತು ಮಾಡಿರುವ ಘಟನೆ ಇದಾಗಿದೆ.
ಮುಂಬೈನಲ್ಲಿ ಪಾರ್ಟಿ ಮುಗಿಸಿ ತಡರಾತ್ರಿ ವಾಪಾಸಾಗುತ್ತಿದ್ದ ವೇಳೆ ಮೂವರು ಯುವತಿಯರು ಈ ಹಂಗಾಮಾ ಸೃಷ್ಟಿಸಿದ್ದಾರೆ. ಓಲಾ ಕ್ಯಾಬ್‌ ಏರಿದ್ದ ಒಬ್ಬಾಕೆ, ನಂತರ ಕ್ಯಾಬ್​ ಚಾಲಕನನ್ನು ನಿಂದಿಸಿ ತಾನೇ ಡ್ರೈವ್​ ಮಾಡಲು ಮುಂದಾಗಿದ್ದಾಳೆ. ಗಲಾಟೆ ಆಗುತ್ತಿದ್ದಂತೆಯೇ ಪೊಲೀಸರು ಘಟನಾ ಸ್ಥಳಕ್ಕೆ ಬಂದಿದ್ದಾರೆ. ಈ ಸಮಯದಲ್ಲಿ ಇನ್ನೊಬ್ಬ ಯುವತಿ ಪೊಲೀಸ್​ ಅಧಿಕಾರಿಯ ಕಾಲರ್ ಹಿಡಿದುಕೊಂಡು ಬೆದರಿಕೆ ಹಾಕಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
“ಹಲೋ, ನನ್ನ ಹೆಸರು ಅರ್ಚಿತಾ..” ಎಂದು ಒಬ್ಬಾಕೆ ಕಿರುಚಿಕೊಂಡಿದ್ದಾಳೆ. ನೀವು ಪೊಲೀಸರನ್ನಾದರೂ ಕರೆಯಿರಿ, ಮೀಡಿಯಾದವರನ್ನಾದರೂ ಕರೆಯಿರಿ ಯಾರಿಗೂ ನಾವು ಡೋಂಟ್​ ಕೇರ್​ ಎಂದಿದ್ದಾಳೆ. ಒಬ್ಬಾಕೆಯ ಪ್ಯಾಂಟ್​ ಕೂಡ ಒದ್ದೆಯಾಗಿದ್ದು, ಈಕೆ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಾಳೆ ಎಂದು ಸಾಕಷ್ಟು ಕಮೆಂಟಿಗರು ಕಮೆಂಟ್​ ಮಾಡಿದ್ದನ್ನು ಕಾಣಬಹುದು!
ಅದರಲ್ಲಿ ಒಬ್ಬಾಕೆಯನ್ನು ನಿಯಂತ್ರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ. ಆಕೆ ಕುಡಿದು ರಸ್ತೆಯ ಮೇಲೆ ಬಿದ್ದುಕೊಂಡಿದ್ದಾಳೆ.
ಕುಂಗಫೂ ಪಾಂಡೆ ಎನ್ನುವವರು ಶೇರ್​ ಮಾಡಿರುವ ವಿಡಿಯೋಗಳೆಲ್ಲಾ ಇಲ್ಲಿವೆ ನೋಡಿ:
https://twitter.com/pb3060/status/1538519310670475264
https://twitter.com/pb3060/status/1538517227397431297
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − one =
Remember me
