ಕ್ಯಾಲಿಫೋರ್ನಿಯಾ:ಯಾರ್‍ಯಾರಿಗೆ ಯಾವ್ಯಾವಾಗ ಏನೇನು ಉಪಯೋಗಕ್ಕೆ ಬರುತ್ತದೆ ಎಂದು ಹೇಳುವುದು ಕಷ್ಟ.
ಅಂಥದ್ದೇ ಒಂದು ಪ್ರಸಂಗ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕುಡುಕನೊಬ್ಬನಿಗೆ ಭಯಾನಕ ಕಾಳ್ಗಿಚ್ಚಿನಿಂದ ಬಿಯರ್‌ ಕ್ಯಾನ್‌ ಪ್ರಾಣ ಹಾಗೂ ಆಸ್ತಿ ಪಾಸ್ತಿಯನ್ನು ಉಳಿಸಿರುವ ಘಟನೆ ಇದಾಗಿದೆ.
ವಾಕಾವಿಲ್ಲೆ ಎಂಬಲ್ಲಿ ವಾಸಿಸುತ್ತಿರುವ ಚಾಡ್ ಲಿಟಲ್ ಎಂಬುವವರು ತಮ್ಮ ಮನೆಗೆ ಹಚ್ಚಿಕೊಂಡಿದ್ದ ಬೆಂಕಿಯನ್ನು ನಂದಿಸಲು ಬಿಯರ್‌ ಕ್ಯಾನ್‌ಗಳನ್ನು ಬಳಸಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ವಾಕಾವಿಲ್ಲೆಯಲ್ಲಿ ಭಯಾನಕ ಕಾಳ್ಗಿಚ್ಚು ಹೊತ್ತಿಕೊಂಡಿತು. ಬೆಂಕಿಯ ಉಂಡೆ ಚಾಡ್‌ ಮನೆಯತ್ತಲೂ ಬರಲು ಶುರು ಮಾಡಿತು.
ಚಾಡ್‌ ಕುಟುಂಬ ತನ್ನೆಲ್ಲಾ ವಸ್ತುಗಳನ್ನು ಗಂಟು ಮೂಟೆ ಕಟ್ಟಿಕೊಂಡು ಅಲ್ಲಿಂದ ಹೊರಡಲು ಸಿದ್ಧವಾಗಿತ್ತು. ಐದು ವರ್ಷಗಳ ಹಿಂದಿನ ಕಾಳ್ಗಿಚ್ಚಿನ ಕಾರಣದಿಂದ ತಮ್ಮ ಮನೆಯನ್ನು ಕಳೆದುಕೊಂಡಿದ್ದ ಚಾಡ್‌ ಈ ಬಾರಿ ಆ ರೀತಿ ಆಗದಂತೆ ಮಾಡಲು ನಿರ್ಧರಿಸಿಬಿಟ್ಟಿದ್ದರು.
ಇದನ್ನೂ ಓದಿ:ಉಗ್ರರ ದಾಳಿಗೂ ಜಗ್ಗದ ವಿಶ್ವದ ಎತ್ತರದ ಸೇತುವೆ ಕಾಶ್ಮೀರದಲ್ಲಿ… ಇಲ್ಲಿದೆ ಕೌತುಕ ಮಾಹಿತಿ
ಆದ್ದರಿಂದ ನೀರು ಹಾಯಿಸಿ ಬೆಂಕಿಯನ್ನು ನಂದಿಸಲು ಮುಂದಾದರು. ಆದರೆ ಮನೆ ಸುತ್ತಲಿನ ನೀರು ಪೂರೈಕೆ ಕೊಳಾಯಿಗಳನ್ನು ಬಂದ್ ಮಾಡಿದ್ದ ಕಾರಣ ತಕ್ಷಣಕ್ಕೆ ನೀರು ಸಿಗಲಿಲ್ಲ. ಆಗ ಅವರಿಗೆ ಯೋಚನೆ ಬಂದದ್ದು ಬಿಯರ್‌ ಕ್ರೇಟ್‌.
ತಮ್ಮಲ್ಲಿದ್ದ ಒಂದು ಕ್ರೇಟ್‌ನಷ್ಟು ಲೈಟ್‌ ಬಿಯರ್‌ನ್ನು ಕೈಗೆತ್ತಿಕೊಂಡ ಚಾಡ್‌, ಬೆಂಕಿಯ ಮೇಲೆ ಬಿಯರ್‌ ಸ್ಪ್ರೇ ಮಾಡಲು ಆರಂಭಿಸಿದರು. ಕೊನೆಗೂ ಅವರ ಪ್ರಯತ್ನ ಯಶಸ್ಸು ಕಂಡಿತು. ಅಗ್ನಿಶಾಮಕ ಸಿಬ್ಬಂದಿ ಮನೆಗೆ ಆಗಮಿಸುವ ಮುನ್ನ ಬೆಂಕಿಯನ್ನು ನಂದಿಸುವಲ್ಲಿ ಚಾಡ್‌ ಸಫಲರಾಗಿದ್ದು, ತಮ್ಮ ಪ್ರಾಣದ ಜತೆಗೆ, ಆಸ್ತಿ ಪಾಸ್ತಿಯನ್ನೂ ಉಳಿಸಿಕೊಂಡಿದ್ದಾರೆ.
ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಸರ್ಕಾರಿ ಆಸ್ಪತ್ರೆಯಲ್ಲಿ ಜಿಲ್ಲಾಧಿಕಾರಿ ಪತ್ನಿ ಡೆಲಿವರಿ: ಶ್ಲಾಘನೆಗಳ ಮಹಾಪೂರ

ಎಟಿಎಂ ಹಣ ಎಗರಿಸಿದ ಖದೀಮರು: ನಡೆದಾಡೋ ಸ್ಟೈಲ್‌ನಲ್ಲಿ ಸಿಕ್ಕಿಬಿದ್ದದ್ದೇ ರೋಚಕ…

ಉಗ್ರರ ದಾಳಿಗೂ ಜಗ್ಗದ ವಿಶ್ವದ ಎತ್ತರದ ಸೇತುವೆ ಕಾಶ್ಮೀರದಲ್ಲಿ… ಇಲ್ಲಿದೆ ಕೌತುಕ ಮಾಹಿತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
