ನವದೆಹಲಿ:ಹಿಂದೂ ದೇವರಿಗೆ ಅವಹೇಳನ ಮಾಡಿದ್ದರು ಎನ್ನುವ ಕಾರಣಕ್ಕೆ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿ ಕಾಂಗ್ರೆಸ್​ ಸೇರಿದಂತೆ ಭಾರತದ ಕೆಲವು ವರ್ಗಗಳ ಹಾಗೂ ಇಸ್ಲಾಮಿಕ್​ ದೇಶಗಳ ವಿರೋಧ ಕಟ್ಟಿಕೊಂಡಿರುವ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಇದೀಗ ಜಗತ್ತಿನ ಗಮನ ಸೆಳೆದಿದ್ದಾರೆ. ಕುರಾನ್​ನಲ್ಲಿ ಉಲ್ಲೇಖವಾಗಿರುವ ಅಂಶವನ್ನೇ ತಾವು ಹೇಳಿರುವುದಾಗಿ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ಜತೆಗೆ ಶಿವನ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳಿಗೆ ಉತ್ತರವಾಗಿ ನೂಪುರ್​ ಪ್ರವಾದಿ ಮೊಹಮ್ಮದ್​ ಅವರ ವಿರುದ್ಧ ಮಾತನಾಡಿರುವುದಾಗಿಯೂ ಹೇಳಲಾಗುತ್ತಿದೆ.
ಅದೇನೆ ಇದ್ದರೂ, ಅವರಿಗೆ ಈಗ ಇಸ್ಲಾಮಿಕ್​ ದೇಶಗಳಿಂದ ಬೆದರಿಕೆ ಕರೆಗಳು ಬರುತ್ತಿವೆ. ಅಲ್ ಕೈದಾ ಉಗ್ರ ಸಂಘಟನೆ ಆತ್ಮಾಹುತಿ ದಾಳಿ ಬೆದರಿಕೆ ಒಡ್ಡುತ್ತಿವೆ. ಭಾರತದಲ್ಲಿಯೂ ಈಕೆಯ ಹೇಳಿಕೆಗೆ ಹಲವೆಡೆ ಭಾರಿ ಪ್ರತಿಭಟನೆಗಳು ನಡೆದಿದ್ದು, ಬೆಳಗಾವಿಯಲ್ಲಿ ನೂಪುರ್​ ಅವರ ಪ್ರತಿಕೃತಿ ತಯಾರಿಸಿ ನೇಣಿಗೆ ಏರಿಸಲಾಗಿದೆ. ಅದೇ ಇನ್ನೊಂದೆಡೆ, ಅನೇಕ ಮಂದಿ ನೂಪುರ್​ ಅವರ ಬೆಂಬಲಕ್ಕೆ ನಿಂತಿದ್ದು, ಆಕೆ ಹೇಳಿದ್ದರಲ್ಲಿ ಯಾವುದೇ ಸುಳ್ಳು ಇಲ್ಲ, ಅವರು ಸತ್ಯವನ್ನೇ ನುಡಿದಿದ್ದಾರೆ ಎಂದು ಬೆಂಬಲಿಸಿದ್ದಾರೆ.
ಕಳೆದ ವಾರವಷ್ಟೇ ನೆದರ್‌ರ್ಲೆಂಡ್​ನ ಬಲಪಂಥೀಯ ನಾಯಕ, ಸಂಸದ ಗೀರ್ಟ್ ವಿಲ್ಡರ್ಸ್ ಅವರು ನೂಪುರ್ ಶರ್ಮಾ ಅವರಿಗೆ ಬೆಂಬಲ ನೀಡಿ ಟ್ವೀಟ್​ ಮಾಡಿದ್ದರು. ಈ ಕುರಿತು ಸರಣಿ ಟ್ವೀಟ್​ ಮಾಡಿದ್ದ ಅವರು, ನೂಪುರ್ ಶರ್ಮಾ ತಮ್ಮ ಮಾತಿನ ವೇಳೆ ಸತ್ಯವನ್ನೇ ಹೇಳಿದ್ದಾರೆ. ಅಲ್ ಖೈದಾದಂತಹ ಇಸ್ಲಾಮಿಕ್ ಉಗ್ರರು ಅನಾಗರಿಕತೆಯನ್ನು ಪ್ರತಿನಿಧಿಸುವುದರಿಂದ ಭಾರತ ಅದಕ್ಕೆ ತಲೆಬಾಗಬಾರದು. ಭಾರತದ ನನ್ನ ಸ್ನೇಹಿತರೇ, ಇಸ್ಲಾಮಿಕ್ ದೇಶಗಳಿಂದ ಹೆದರಬೇಡಿ. ಅವರದ್ದು ಎಲ್ಲಾ ಕಡೆ ಇದದ್ದೇ. ಸತ್ಯದ ಪರವಾಗಿರುವ ನೂಪುರ್ ಶರ್ಮಾ ಅವರನ್ನು ಸಮರ್ಥಿಸಿಕೊಳ್ಳಲು ಹೆಮ್ಮೆ ಪಡಿ ಮತ್ತು ಅಚಲವಾಗಿರಿ. ಸ್ವಾತಂತ್ರ್ಯಕ್ಕಾಗಿ ನಿಲ್ಲಿ ಎಂದು ಹೇಳಿದ್ದರು.
ನೂಪುರ್​ ಅವರು ಹೇಳಿರುವುದಕ್ಕೆ ಯಾರದ್ದಾದರೂ ಆಕ್ಷೇಪಗಳಿದ್ದರೆ ಅದನ್ನು ಕೋರ್ಟ್​ಗಳಲ್ಲಿ ಪ್ರಶ್ನಿಸಲಿ, ಕೋರ್ಟ್​ಗಳು, ಕಾನೂನು ಇರುವಾಗ ಬೆದರಿಕೆ ಮೂಲಕ ಹೀಗೆ ಮಾಡುವುದು ಅನಾಗರಿಕ ಲಕ್ಷಣವಾಗಿದೆ. ಇಸ್ಲಾಮಿಕ್​ ದೇಶಗಳಲ್ಲಿ ಕಾನೂನು, ನಿಯಮಕ್ಕೆ ಅವಕಾಶವೇ ಇಲ್ಲ. ಆದರೆ ಭಾರತದಲ್ಲಿ ಎಲ್ಲವೂ ಇದೆ. ಹಾಗಿರುವಾಗ ಅಂಥ ಹೇಡಿಗಳಿಗೆ ಬೆಂಬಲಿಸುವುದು ಏಕೆ? ಇಡೀ ಭಾರತ ದೇಶ ನೂಪುರ್ ಶರ್ಮಾ ಪರವಾಗಿ ನಿಲ್ಲಬೇಕು ಮತ್ತು ಅವರಿಗೆ ಬೆಂಬಲ ನೀಡಬೇಕು ಎಂದಿದ್ದರು.
So this is what I get supporting the brave#NupurSharma.
Hundreds of death threats.
It makes me even more determined and proud supporting her.
For evil may never win. Never.#IsupportNupurSharmapic.twitter.com/gsl6tnJAoF
— Geert Wilders (@geertwilderspvv)June 11, 2022

ನೂಪುರ್​ ಶರ್ಮಾ ಅವರ ಪರವಾಗಿ ನಿಂತಿರುವ ಕಾರಣಕ್ಕೆ ಗೀರ್ಟ್ ವಿಲ್ಡರ್ಸ್ ಅವರಿಗೆ ಈಗ ಬೆದರಿಕೆ ಕರೆಗಳು ಹೆಚ್ಚಾಗಿವೆಯಂತೆ. ಈ ಕುರಿತು ಮತ್ತಷ್ಟು ಟ್ವೀಟ್​ ಮಾಡಿ ಇಸ್ಲಾಮಿಕ್​ ದೇಶಗಳಂತೆ ಭಾರತದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ತುಂಬಾ ಬೇಸರ ಪಟ್ಟುಕೊಂಡಿದ್ದಾರೆ.
ತಮಗೆ ಬಂದ ಸಂದೇಶಗಳನ್ನು ಅವರು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ಬೆದರಿಕೆ ಕರೆಗಳ ಬಗ್ಗೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ನೂರಾರು ಕೊಲೆ ಬೆದರಿಕೆಗಳು ನನಗೆ ಬಂದಿವೆ. ಇವುಗಳು, ನಾನು ಮತ್ತಷ್ಟು ದೃಢವಾಗಿ ಮತ್ತು ಹೆಮ್ಮೆಯಿಂದ ಅವರನ್ನು ಬೆಂಬಲಿಸುವಂತೆ ಮಾಡಿವೆ. ಯಾಕೆಂದರೆ ಕೆಟ್ಟದ್ದು ಎಂದಿಗೂ ಗೆಲ್ಲಲಾರದು ಎಂದು ಅವರು ಹೇಳಿದ್ದಾರೆ.
I am not Indian nor a Hindu.
But I know one thing.
Secularism should not mean that demeaning Hindu Gods is justified and telling the truth about Muhammad is not.
So when#napursharmareacted to someone demeaning Hindu Gods it was totally justified.#IsupportNupurSharma
— Geert Wilders (@geertwilderspvv)June 11, 2022

‘ನಾನು ಭಾರತೀಯನೂ ಅಲ್ಲ, ಹಿಂದುವೂ ಅಲ್ಲ. ಆದರೆ ನನಗೆ ಒಂದು ವಿಷಯ ಗೊತ್ತು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವುದನ್ನು ಸಮರ್ಥಿಸುವುದು, ಪ್ರವಾದಿ ಬಗ್ಗೆ ಸತ್ಯ ಹೇಳುವುದು ಸರಿಯಲ್ಲ ಎಂಬ ವಾದವೇ ಜಾತ್ಯತೀತತೆಯ ಅರ್ಥ ಆಗಬಾರದು. ನೂಪುರ್​ ಅವರು ಸತ್ಯದ ಪರವಾಗಿ ಇದ್ದವರು. ಹಿಂದೂ ದೇವರುಗಳನ್ನು ಕೀಳಾಗಿ ಬಿಂಬಿಸುವ ಸಂದರ್ಭದಲ್ಲಿ ನೂಪುರ್ ಶರ್ಮಾ ಪ್ರತಿಕ್ರಿಯಿಸಿರುವುದು ಸಂಪೂರ್ಣ ಸಮರ್ಥನೀಯ’ ಎಂದು ಗೀರ್ಟ್‌ ವೈಲ್ಡರ್ಸ್‌ ಹೇಳಿದ್ದರು.
ಬದುಕಿದ್ದಾಗಲೇ ಭಾರತವನ್ನು ನರಕವಾಗಿಸಿಬಿಡುತ್ತಾರೆ!

‘ಭಾರತದ ಸ್ನೇಹಿತರೇ… ಸತ್ಯದ ಪರವಾಗಿ ನಿಲ್ಲಿ… ಕಾನೂನು​ ಇರುವಾಗ ಛೇ… ಇಂಥವರಿಗೆ ತಲೆಬಾಗುವಿರಾ?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
