ಮೆಘಾಲಯ:ಗೋಹತ್ಯೆಗೆ ಸಂಬಂಧಿಸಿದಂತೆ ಭಾರಿ ಚರ್ಚೆಯಾಗುತ್ತಿರುವ ನಡುವೆಯೇ, ಗೋವನ್ನು ಹಿಂದೂಗಳು ದೇವರು ಎಂದು ಪೂಜಿಸುವ ಹಿನ್ನೆಲೆಯಲ್ಲಿ ಅವುಗಳ ಹತ್ಯೆ ಮಹಾಪಾಪ ಎನ್ನುತ್ತಿರುವ ನಡುವೆಯೇ, ಇದೀಗ ಸಂಸದರೊಬ್ಬರು ಗೋಮಾಂಸವನ್ನು ಹೆಚ್ಚೆಚ್ಚು ತಿನ್ನಿ ಎಂದಿದ್ದಾರೆ.ಆದರೆ ಈಗ ಇದು ಇಷ್ಟು ಚರ್ಚೆಗೆ ಗ್ರಾಸವಾಗಲು ಕಾರಣವೇನೆಂದರೆ ಹೀಗೆ ಹೇಳಿದ್ದು ಬಿಜೆಪಿ ಸಂಸದ! ಆರ್​ಎಸ್​ಎಸ್​ ಹಾಗೂ ಬಿಜೆಪಿ ಗೋಹತ್ಯೆ, ಗೋಮಾಂಸ ಸೇವನೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಬಂದಿರುವ ಬೆನ್ನಲ್ಲೇ ಬಿಜೆಪಿ ಸಂಸದ ಈ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.ಮೆಘಾಲಯದ ನೂತನ ಸಚಿವ ಸ್ಯಾನ್ಬೋರ್ ಶುಲ್ಲೈ ಅವರು ಹೆಚ್ಚು ಹೆಚ್ಚು ಗೋಮಾಂಸ ತಿನ್ನಲು ಕರೆ ನೀಡಿದ್ದಾರೆ. ಕಳೆದ ವಾರವಷ್ಟೇ ಇವರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದೀಗ ಅವರು, ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರ. ಹಾಗಾಗಿ ಪ್ರತಿಯೊಬ್ಬರಿಗೂ ಅವರವರ ಆಹಾರ ಆಯ್ಕೆ ಸ್ವಾತಂತ್ರ್ಯವಿದ್ದು, ನಾನಂತೂ ಜನರಿಗೆ ಚಿಕನ್, ಮಟನ್, ಮೀನಿಗಿಂತ ಹೆಚ್ಚು ಗೋಮಾಂಸ ತಿನ್ನಿ ಎಂದು ಪ್ರೋತ್ಸಾಹಿಸುತ್ತೇನೆ ಎಂದಿದ್ದಾರೆ. ಅಸ್ಸಾಂನಲ್ಲಿ ಗೋಹತ್ಯೆ ನಿಷೇಧಕ್ಕೆ ಸಂಬಂಧಿಸಿದಂತೆ ಹೊಸ ಕಾನೂನು ಜಾರಿಯಲ್ಲಿದೆ. ಆದ್ದರಿಂದ ಕಾಯ್ದೆಯಿಂದ ಮೆಘಾಲಯಕ್ಕೆ ಜಾನುವಾರು ಸಾಗಣೆಗೆ ಯಾವುದೇ ಪರಿಣಾಮ ಬೀರದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಹಿಮವಂತ ಬಿಸ್ವ ಶರ್ಮಾಗೆ ಮನವಿ ಮಾಡುತ್ತೇನೆ ಎಂದಿದ್ದಾರೆ ಈ ಸಂಸದ!
ಯುವಕರೇ ಹುಷಾರ್​! ಫಸ್ಟ್​ ನೈಟೇ ಶಾಕ್ ಕೊಟ್ಟ ಸುಂದರಿ​- ಟೆರೇಸ್​ ಹಾರಿ ಎಸ್ಕೇಪ್​!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + nineteen =
Remember me
