ನವದೆಹಲಿ:ಇಷ್ಟು ವರ್ಷಗಳ ಕಾಲ ಯಾವುದೇ ಭಯವಿಲ್ಲದೇ ನಿರ್ಭೀತಿಯಿಂದ ಭಾರತದಲ್ಲಿಯೇ ತಮ್ಮ ಕಳ್ಳ ವ್ಯವಹಾರವನ್ನು ನಡೆಸಿಕೊಂಡು ಹೋಗುತ್ತಿದ್ದ 38 ಆರ್ಥಿಕ ಅಪರಾಧಿಗಳು ಕಳೆದ ಐದು ವರ್ಷಗಳಲ್ಲಿ ದೇಶಬಿಟ್ಟು ಹೋಗಿದ್ದಾರೆ!
ಈ ಕುರಿತು ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. 2015ರ ಡಿಸೆಂಬರ್ 31ರಿಂದ 2019ರ ಮಧ್ಯೆ ಐದು ವರ್ಷಗಳಲ್ಲಿ 38 ಮಂದಿ ಆರ್ಥಿಕ ಅಪರಾಧಿಗಳು ದೇಶ ಬಿಟ್ಟು ಪರಾರಿ ಆಗಿದ್ದಾರೆ. ಇವರು ಬ್ಯಾಂಕ್​ಗಳಿಂದ ಸಾಲ ಪಡೆದು, ಅದನ್ನು ಮರುಪಾವತಿಸದೆ ಪರಾರಿ ಆಗಿರುವವರು ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.
ವಂಚನೆ ಮಾಡಿ, ಬ್ಯಾಂಕ್​ಗಳ ಮೂಲಕ ಸಾಲ ಪಡೆದುಕೊಂಡು, ದೇಶ ಬಿಟ್ಟು ಪರಾರಿಯಾದವರೂ ಸೇರಿದಂತೆ ಬೇರೆ ದೇಶಗಳಿಗೆ ವಲಸೆ ಹೋದವರ ಮಾಹಿತಿ ಕೇಂದ್ರ ಸರ್ಕಾರದ ಬಳಿ ಇದೆಯೇ ಎಂದು ಕೇಳಿದ್ದ ಪ್ರಶ್ನೆಗೆ ಉತ್ತರವಾಗಿ ಅವರು ಈ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಈರುಳ್ಳಿ, ಮೆಣಸಿನಕಾಯಿ ಮಧ್ಯೆ ಗಾಂಜಾ ಬೆಳೆ: ಹುಬ್ಬಳ್ಳಿ ಪೊಲೀಸರ ಬಲೆಗೆ ಆರೋಪಿ
ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ಸೇರಿದಂತೆ 38 ಮಂದಿ ಉದ್ದೇಶಿತ ಸುಸ್ತಿದಾರರು ಭಾರತದಿಂದ ಪರಾರಿಯಾಗಿದ್ದಾರೆ ಎಂದರು. ಇವರ ವಿರುದ್ಧ ಕೇಂದ್ರೀಯ ತನಿಖಾ ದಳವು ಮೊಕದ್ದಮೆ ದಾಖಲು ಮಾಡಿತ್ತು. ಈ ಅವಧಿಗಿಂತ ಮುಂಚಿತವಾಗಿ ಸಾಲ ಪಡೆದುಕೊಂಡಿದ್ದ ಅವರು ವಾಪಸ್​ ನೀಡಿರಲಿಲ್ಲ. ಮೊಕದ್ದಮೆ ದಾಖಲಾಗುತ್ತಿದ್ದಂತೆಯೇ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಅವರು ತಿಳಿಸಿದರು.
ಇವರಲ್ಲಿ ಇದಾಗಲೇ 20 ಅಪರಾಧಿಗಳಿಗೆ ರೆಡ್​ಕಾರ್ನರ್​ ನೋಟಿಸ್​ ನೀಡುವಂತೆ ಅರ್ಜಿ ಹಾಕಲಾಗಿದೆ. 14 ಮಂದಿಯ ಹಸ್ತಾಂತರಕ್ಕೆ ಮನವಿ ಸಲ್ಲಿಸಲಾಗಿದೆ. ಹನ್ನೊಂದು ಮಂದಿ ವಿರುದ್ಧ ದೇಶಭ್ರಷ್ಟ ಆರ್ಥಿಕ ಅಪರಾಧಿ ಕಾಯ್ದೆ 2018ರ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಅವರು ಲಿಖಿತವಾಗಿ ಉತ್ತರಿಸಿದರು.
ರಾಷ್ಟ್ರೀಕೃತ ಬ್ಯಾಂಕ್​ಗಳ ಮಾಹಿತಿ ಪ್ರಕಾರ, 2014ರಿಂದ 2019ರ ಮಧ್ಯೆ ಉದ್ದೇಶಿತ ಸುಸ್ತಿದಾರರಿಂದ 7654 ಕೋಟಿ ರುಪಾಯಿ ವಸೂಲಿ ಮಾಡಲಾಗಿದೆ.
ಭಾವಿ ಪತ್ನಿಗೆ ₹6 ಕೋಟಿಯ ಉಂಗುರ ನೀಡಿದ ನಾಲ್ಕುಮಕ್ಕಳ ತಂದೆ ಈ ಆಟಗಾರ…

₹10 ಕೋಟಿ ದಂಡ ಕಟ್ಟಿದರೆ ಶಶಿಕಲಾ ಜನವರಿಯಲ್ಲಿ ಬಂಧಮುಕ್ತ…

ಮಾಲೀಕ ಸತ್ತನೆಂದು ಆಹಾರ ತ್ಯಜಿಸಿ ಪ್ರಾಣಬಿಟ್ಟ ನಾಯಿ: ಬೆಳಗಾವಿಯಲ್ಲಿ ಮನಕಲಕುವ ಘಟನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + 13 =
Remember me
