ಹೈದರಾಬಾದ್​:ಖ್ಯಾತ ನಟ, ಜನಸೇನಾ ಪಕ್ಷದ ಮುಖ್ಯಸ್ಥ ಪವನ್​ ಕಲ್ಯಾಣ್​ ಇತ್ತೀಚಿಗೆ ರಾಜಕೀಯದಲ್ಲಿ ಬಹಳ ಬಿಜಿಯಾಗಿದ್ದಾರೆ. ಬಹುಬೇಡಿಕೆಯ ನಟನಾಗಿರುವ ಇವರೀಗ ರಾಜಕೀಯವಾಗಿಯೂ ಬಹಳ ಗುರುತಿಸಿಕೊಂಡು ಸದಾ ಸುದ್ದಿಯಲ್ಲಿ ಇರುತ್ತಿದ್ದಾರೆ.
ಇಂಥ ನಟನೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ, ಎಂಟು ಐಷಾರಾಮಿ ಸ್ಕಾರ್ಪಿಯೋ ಕಾರುಗಳನ್ನು ಅವರು ಖರೀದಿ ಮಾಡಿರುವುದು! ಶೀಘ್ರದಲ್ಲೇ ಚಲನಚಿತ್ರಗಳಿಂದ ದೀರ್ಘ ವಿರಾಮವನ್ನು ಪಡೆದು ಸಂಪೂರ್ಣವಾಗಿ ರಾಜಕೀಯದ ಮೇಲೆ ಕೇಂದ್ರೀಕರಿಸಲು ಸಿದ್ಧರಾಗಿರುವ ಈ ನಟ, ತಲಾ 19 ಲಕ್ಷ ರೂಪಾಯಿ ಮೌಲ್ಯದ ಎಂಟು ಕಾರುಗಳನ್ನು ಪವನ್​ ಖರೀದಿ ಮಾಡಿದ್ದಾರೆ. ಇದಕ್ಕೆ ಕಾರಣ, ಆಂಧ್ರಪ್ರದೇಶದ ಪ್ರವಾಸವಂತೆ.
ಬರುವ ದಸರಾ ಹಬ್ಬದಿಂದ ಜನಸಂಪರ್ಕ ಸಭೆಗಳನ್ನು ನಡೆಸಲು ಉದ್ದೇಶಿಸಿರುವ ಪವನ್​ ಅವರು, ಅದಕ್ಕಾಗಿ ಕಾರುಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಬೆಂಗಾವಲು ಪಡೆಗಾಗಿ ಇಷ್ಟು ಕಾರುಗಳ ಖರೀದಿಯಾಗಿದೆ. ಆಂಧ್ರಪ್ರದೇಶದಾದ್ಯಂತ ಪ್ರವಾಸ ಕೈಗೊಳ್ಳಲಿರುವ ಇವರು, ಸಭೆ- ಸಮಾರಂಭಗಳನ್ನು ಮಾಡುವ ಮೂಲಕ ಜನರಿಗೆ ಇನ್ನಷ್ಟು ರಾಜಕೀಯವಾಗಿ ಹತ್ತಿರವಾಗುವ ಯೋಜನೆ ರೂಪಿಸಿದ್ದಾರೆ.
ಮೊದಲಿಗೆ ತಿರುಪತಿಯಿಂದ ಇವರು ಪ್ರವಾಸ ಆರಂಭಿಸಲಿರುವುದಾಗಿ ತಿಳಿದುಬಂದಿದೆ. ಏಕೆಂದರೆ ಈ ಬಾರಿ ಅದೇ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಅಕ್ಟೋಬರ್ 5ರಂದು ಇದಕ್ಕೆ ಮುಹೂರ್ತ ಫಿಕ್ಸ್​ ಮಾಡಿದ್ದಾರೆ. ಈ ಹಿಂದೆ ಪ್ರಜಾರಾಜ್ಯಂ ಪಕ್ಷದ (ಚಿರಂಜೀವಿ) ಪರವಾಗಿ ತಿರುಪತಿಯಿಂದ ಸ್ಪರ್ಧಿಸಿ ಗೆದ್ದಿದ್ದರು. ಇಷ್ಟೆಲ್ಲಾ ಲೆಕ್ಕಾಚಾರದ ನಂತರ ತಿರುಪತಿಯಿಂದ ಕಾರ್ಯಕ್ರಮ ಆರಂಭಿಸುತ್ತಿದ್ದಾರೆ ಎನ್ನಲಾಗಿದೆ. ಪವನ್ ಕಲ್ಯಾಣ್ ಅವರೇ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಅವರ ಅಭಿಮಾನಿಗಳದ್ದು.
ದೇವ್ರೆ… ಪ್ಲೀಸ್​ ನನ್​ ಹೆಂಡ್ತಿಯನ್ನು ವಾಪಸ್​ ಕರೆಸಿಕೊಂಡು ಬಿಡು: ಅರಳಿಮರಕ್ಕೆ ಪೂಜೆ ಸಲ್ಲಿಸಿದ ಪತಿಯಂದಿರು!

VIDEO: ಕಾಳಿಯಮ್ಮ ಉತ್ಸವದಲ್ಲಿ ಭಕ್ತರ ಮೇಲೆ ಉರುಳಿದ ರಥ: ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಬೆಂಗಳೂರಿನ ಹೋಟೆಲ್​ನಲ್ಲಿ ಡ್ರಗ್ಸ್​ ನಶೆಯಲ್ಲಿ ಸಿಕ್ಕಿಬಿದ್ದು ಅರೆಸ್ಟ್​ ಆದ ಖ್ಯಾತ ನಟ ಇವರೇ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + eighteen =
Remember me
