ರೇವಾ (ಮಧ್ಯಪ್ರದೇಶ):ಜಗತ್ತಿನಾದ್ಯಂತ ಕರೊನಾ ಬೇರೆ ಬೇರೆ ರೀತಿಯಲ್ಲಿ ಪ್ರತಿಯೊಬ್ಬರ ಜೀವನವನ್ನು ಹೈರಾಣ ಮಾಡಿದೆ. ಎಷ್ಟೋ ಮಂದಿ ಇದರಿಂದ ಮೃತಪಟ್ಟಿದ್ದಾರೆ. ಖಾಸಗಿ ಆಸ್ಪತ್ರೆಗಳು ದುಡ್ಡು ವಸೂಲಿ ಮಾಡುವ ಕೇಂದ್ರಗಳಾಗಿ ಮಾರ್ಪಟ್ಟಿರುವ ಬಗ್ಗೆಯೂ ಹಲವಾರು ಕಡೆಗಳಲ್ಲಿ ಆರೋಪಗಳು ಕೇಳಿಬಂದಿವೆ. ಲಕ್ಷ ಲಕ್ಷ ರೂಪಾಯಿ ವಸೂಲಿ ಮಾಡಿ, ಕೊನೆಗೆ ಉಳಿಸಿಕೊಂಡಿರುವ ಸ್ವಲ್ಪ ಹಣವನ್ನು ಪಾವತಿ ಮಾಡದ ಕಾರಣ ಶವ ಕೊಡಲು ಆಸ್ಪತ್ರೆಗಳು ನಿರಾಕರಿಸಿರುವ ಅಮಾನವೀಯ ಘಟನೆಗಳೂ ಸಾಕಷ್ಟು ಕಡೆ ನಡೆದಿವೆ.
ಇವುಗಳ ನಡುವೆಯೇ ಅತ್ಯಂತ ಭಯಾನಕ ಘಟನೆಯೊಂದು ಮಧ್ಯಪ್ರದೇಶದ ರಾಕ್ರಿ ಗ್ರಾಮದಲ್ಲಿ ನಡೆದಿದೆ. ಇಲ್ಲಿಯ ರೈತ ಧರಂಜಯ್ ಸಿಂಗ್ (50) ಎನ್ನುವವರು ಎಂಟು ತಿಂಗಳ ಕಾಲ ಕರೊನಾದಿಂದ ಬಳಲಿ ಕೊನೆಗೆ ಕೊನೆಯುಸಿರೆಳೆದಿದ್ದಾರೆ. ಆದರೆ ಈ ಅವಧಿಯಲ್ಲಿ ಅವರ ಕುಟುಂಬಸ್ಥರು ಖರ್ಚು ಮಾಡಿದ್ದು ಲಕ್ಷ ಲಕ್ಷವಲ್ಲ… ಬರೋಬ್ಬರಿ ಎಂಟು ಕೋಟಿ ರೂಪಾಯಿ!
ಧರಂಜಯ್‌ ಅವರಿಗೆ ಕರೊನಾ ಬೆನ್ನಲ್ಲೇ ವಿವಿಧ ಅನಾರೋಗ್ಯ ಸಮಸ್ಯೆಗಳು ಕಾಡಿದ್ದವು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಎಲ್ಲೆಡೆಯೂ ನೀರಿನಂತೆ ಹಣ ಖರ್ಚಾಯಿತೇ ವಿನಾ ಅವರು ಗುಣಮುಖರಾಗುವ ಯಾವ ಲಕ್ಷಣಗಳೂ ಕಾಣಿಸಲಿಲ್ಲ. ಮನೆಯಲ್ಲಿದ್ದ ಹಣ, ಚಿನ್ನಾಭರಣ ಎಲ್ಲವೂ ಆಸ್ಪತ್ರೆ ಪಾಲಾದಾಗ ಅವರನ್ನು ಉಳಿಸಿಕೊಳ್ಳಲು ತಮ್ಮಲ್ಲಿರುವ 50 ಎಕರೆ ಜಮೀನನ್ನು ಮಾರಾಟ ಮಾಡಿದರು ಕುಟುಂಬಸ್ಥರು!
ಇಷ್ಟೆಲ್ಲಾ ಮಾಡಿದರೂ ವೈದ್ಯರ ಭರವಸೆಯ ಮಾತುಗಳು ಸಿಕ್ಕವೇ ವಿನಾ ಫಲಿತಾಂಶ ಮಾತ್ರ ಶೂನ್ಯವಾಯಿತು. ಪ್ರತಿಷ್ಠಿತ ಸೂಪರ್‌ಸ್ಪೆಷ್ಯಾಲಿಟಿ ಆಸ್ಪತ್ರೆಯೊಂದರಲ್ಲಿ ಅವರನ್ನು ದಾಖಲು ಮಾಡಲಾಗಿತ್ತು. ಅಲ್ಲಿ ಪ್ರತಿ ದಿನದ ಶುಲ್ಕವೇ 3 ಲಕ್ಷ ರೂಪಾಯಿ. ಇದಕ್ಕಾಗಿ ಕುಟುಂಬಸ್ಥರು ತಮ್ಮ 50 ಎಕರೆ ಜಮೀನನ್ನೂ ಮಾರಿದರು. ಕೊನೆಗೆ ಎಂಟು ಕೋಟಿ ರೂಪಾಯಿ ಖರ್ಚಾದ ಮೇಲೆ ಇನ್ನೇನೂ ಕೊಡಲು ಅವರ ಬಳಿ ಇರಲಿಲ್ಲ. ಇವೆಲ್ಲಾ ಆದ ಮೇಲೆ ಆಸ್ಪತ್ರೆಯಿಂದ ಅವರಿಗೆ ಸಿಕ್ಕಿದ್ದ ಧರಂಜಯ್‌ ಅವರ ಶವ ಮಾತ್ರ.
ಕಳೆದ ಏಪ್ರಿಲ್​​​ 30ರಂದು ಕೋವಿಡ್​ ಟೆಸ್ಟ್ ಮಾಡಿಸಿದಾಗ ಪಾಸಿಟಿವ್​ ವರದಿ ಬಂದಿತ್ತು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಮುಂದುವರೆದಂತೆಯೇ ಮೆದುಳಿನ ಸಮಸ್ಯೆ ಕಾಣಿಸಿಕೊಂಡಿತು. ನಂತರ ಏರ್ ಆ್ಯಂಬುಲೆನ್ಸ್ ಮೂಲಕ ಚೆನ್ನೈ ಆಸ್ಪತ್ರೆಗೆ ಸಾಗಿಸಲಾಯಿತು. ಇಷ್ಟೊತ್ತಿಗಾಗಲೇ ಅವರಿಗೆ ಶ್ವಾಸಕೋಸದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್‌ ಬಂದಿತು. ಆದರೂ ವಿದೇಶದ ವೈದ್ಯರಿಂದಲೂ ಚಿಕಿತ್ಸೆ ಮುಂದುವರೆದಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.
ಸ್ಟ್ರಾಬೆರಿ ಮತ್ತು ಗುಲಾಬಿ ಕೃಷಿಯಿಂದ ರೈತ ಧರಂಜಯ್ ಸಿಂಗ್ ಹೆಸರು ಮಾಡಿದ್ದರು. ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಕೂಡ ಧರಂಜಯ್ ಅವರನ್ನು ಸನ್ಮಾನಿಸಿದ್ದರು. ಕರೊನಾ ಅವಧಿಯಲ್ಲಿ ಜನರ ಸೇವೆ ಮಾಡುವಾಗ ಸೋಂಕು ತಗುಲಿತ್ತು. ನಂತರ ಸರ್ಕಾರದಿಂದ 4 ಲಕ್ಷ ರೂ.ಗಳ ಧನ ಸಹಾಯ ದೊರೆತಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಪೊಲೀಸರಿಗೆ ಬೇಕಾಗಿದ್ದ ‘ಮೋಸ್ಟ್‌ ವಾಂಟೆಡ್‌’ ಸಿದ್ದು ಪಕ್ಕ! ತಲೆಮರೆಸಿಕೊಂಡವ ಪಾದಯಾತ್ರೆಯಲ್ಲಿ ಪ್ರತ್ಯಕ್ಷ…

VIDEO: ಈ ಜನ್ಮದಲ್ಲಿ ಈತ ಯಾರ ಮೇಲೂ ಬೈಕ್‌ನಿಂದ ಕೆಸರು ಹಾರಿಸಲ್ಲ… ಅಷ್ಟಕ್ಕೂ ಆಗಿದ್ದೇನು? ವೈರಲ್‌ ವಿಡಿಯೋ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:four − three =
Remember me
