ಮುಂಬೈ:ಮಹಾರಾಷ್ಟ್ರ ಸರ್ಕಾರವನ್ನು ಅಲ್ಲೋಲ ಕಲ್ಲೋಲ ಮಾಡಿರುವ ಶಿವಸೇನಾ ಮುಖಂಡ ಏಕನಾಥ್ ಶಿಂಧೆಗೆ ಬಿಗ್​ ಶಾಕ್​ ಎದುರಾಗಿದೆ.
ಸುಮಾರು 13 ಶಾಸಕರನ್ನು ಕರೆದುಕೊಂಡು ಗುಜರಾತಿನ ಸೂರತ್ ಪಟ್ಟಣದ ಹೋಟೆಲ್​ ಒಂದರಲ್ಲಿ ಬೀಡುಬಿಟ್ಟಿರುವ ಶಿಂಧೆಯನ್ನು ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ. ಸೆವ್ರಿ ಶಾಸಕ ಅಜಯ್ ಚೌಧರಿರನ್ನು ವಿಪಕ್ಷ ನಾಯಕರನ್ನಾಗಿ ನೇಮಿಸಿ ಶಿವಸೇನಾ ಆದೇಶ ಹೊರಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಜಕೀಯ ಸಂಚಲನ ಮೂಡಿಸಿದ ಶಿಂಧೆಗೆ ಭಾರಿ ಹಿನ್ನಡೆಯಾಗಿದೆ.
ಮಹಾರಾಷ್ಟ್ರದಲ್ಲಿ ಸದ್ಯ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಉದ್ದವ್ ಠಾಕ್ರೆ ನೇತೃತ್ವದ ಶಿವಸೇನಾ ಸರ್ಕಾರಕ್ಕೆ ಎನ್ ಸಿಪಿ ಹಾಗೂ ಕಾಂಗ್ರೆಸ್ ಬೆಂಬಲ ನೀಡಿವೆ. ಮಹಾರಾಷ್ಟ್ರ ಅಘಾಡಿಯ ಬುಡವನ್ನು ಅಲ್ಲಾಡಿಸುವಂಥ ಕೃತ್ಯಕ್ಕೆ ಏಕನಾಥ್ ಕೈ ಹಾಕಿದ್ದಾರೆ ಎಂಬ ಮಾಹಿತಿಯಿದೆ.
ಶಿಂಧೆ ಓರ್ವ ಮಾಸ್​ ಲೀಡರ್​. ಬಿಜೆಪಿಯಿಂದಿಗಿನ ಮೈತ್ರಿಯನ್ನು ಮುರಿದುಕೊಂಡ ಬಳಿಕ 2014ರಲ್ಲೇ ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಶಿಂಧೆ ಹೆಸರು ಸೂಚಿಸಲಾಗಿತ್ತು. ಯಾವಾಗ ಮಹಾ ವಿಕಾಸ್​ ಅಘಾಡಿ ಸರ್ಕಾರ ರಚನೆಯಾಯಿತೋ ಆಗ ಶಿಂಧೆ ಅವರನ್ನು ನಗರಾಭಿವೃದ್ಧಿ ಮತ್ತು ಸಾರ್ವಜನಿಕ ಕಾರ್ಯಗಳ ಸಚಿವರಾಗಿ ನೇಮಕ ಮಾಡಲಾಯಿತು. ಇದಾದ ಬಳಿಕ ತನ್ನನ್ನು ತೆರೆ ಮರೆಗೆ ಸರಿಸುತ್ತಿದ್ದರೆ ಎಂಬ ಭಾವನೆ ಶಿಂಧೆ ಅವರಿಗೆ ಕಾಡತೊಡಗಿದ್ದು, ಇದರಿಂದ ಅಸಮಾಧಾನಗೊಂಡಿರುವ ಶಿಂಧೆ 10 ಶಾಸಕರೊಂದಿಗೆ ಸೂರತ್​​ಗೆ ಎಸ್ಕೇಪ್​ ಆಗಿದ್ದಾರೆ.
ಅಷ್ಟಕ್ಕೂ ಶಿಂಧೆ ಅವರ ಕೋಪಕ್ಕೆ ಕಾರಣವಾದದ್ದು, ಅವರೇ ಹೇಳುವಂತೆ ಶಿವಸೇನೆಯಲ್ಲಿ ಯಾವುದೇ ಪ್ರಮುಖ ನೀತಿಗಳು, ಯೋಜನೆಗಳು ಮತ್ತು ಕಾರ್ಯತಂತ್ರಗಳನ್ನು ರೂಪಿಸುವಾಗ ತಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ ಎಂಬುದು. ಅಷ್ಟೇ ಅಲ್ಲದೇ, ಇತ್ತೀಚಿಗೆ ನಡೆದ ಠಾಣೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯು ಸ್ವತಂತ್ರವಾಗಿ ಸ್ಪರ್ಧೆಗೆ ಇಳಿಯಬೇಕು ಎಂದು ಶಿಂಧೆ ಪ್ರಸ್ತಾಪಿಸಿದ್ದರು. ಆದರೆ ಈ ಮಾತಿಗೆ ಮನ್ನಣೆ ಸಿಕ್ಕಿರಲಿಲ್ಲ. ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆಗೆ ಮೈತ್ರಿಯಾಗಿ ಅಖಾಡಕ್ಕೆ ಇಳಿದಿತ್ತು ಶಿವಸೇನೆ. ಇದು ಶಿಂಧೆ ಅವರ ಆಕ್ರೋಶಕ್ಕೆ ಕಾರಣವಾಗಿತ್ತು.
ಏಕನಾಥ್ ಶಿಂಧೆ ಅವರ ಪುತ್ರ ಶ್ರೀಕಾಂತ್ ಶಿಂಧೆ, ಕಲ್ಯಾಣ್ ಕ್ಷೇತ್ರದ ಸಂಸದರಾಗಿದ್ದಾರೆ. ಏಕನಾಥ್ ಶಿಂಧೆ 2004, 2009, 2014 ಹಾಗೂ 2019ರಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 2014ರಲ್ಲಿ ಬಿಜೆಪಿ ಹಾಗೂ ಶಿವಸೇನಾ ಮೈತ್ರಿ ಮುರಿದ ಬಳಿಕ ಶಿವಸೇನಾದಿಂದ ವಿಪಕ್ಷ ನಾಯಕರಾಗಿ ಏಕನಾಥ್ ಶಿಂಧೆ ಕಾರ್ಯನಿರ್ವಹಿಸಿದ್ದರು. ಕೊಲಂಬಿಯಾದಲ್ಲಿ ಮೊದಲ ಬಾರಿಗೆ ಕಮ್ಯೂನಿಸ್ಟ್ ಆಡಳಿತ; ಗುಸ್ಟಾವೊ ಪೆಟ್ರೋ- ಪರಿಚಯ ಮಹಾ ವಿಕಾಸ್ ಅಘಾಡಿ ಆರಂಭಿಸಿ, ಹೊಸ ಸರ್ಕಾರ ಉದಯವಾದ ಬಳಿಕ ಶಿಂಧೆಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ದೊರೆತ್ತಿತ್ತು.
ವಿರೋಧಪಕ್ಷಗಳ ಒಮ್ಮತದ ರಾಷ್ಟ್ರಪತಿ ಅಭ್ಯರ್ಥಿ ಯಾರು? ಕುತೂಹಲಕ್ಕೆ ಕೊನೆಗೂ ಬಿತ್ತು ತೆರೆ

ಐದನೇ ದಿನ ಇ.ಡಿಯಲ್ಲಿ ರಾಹುಲ್​: ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆದ ಸೋನಿಯಾಗೆ ಎರಡು ದಿನಗಳ ಗಡುವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − nine =
Remember me
