ಮದುವೆಯದಿನ ಮದುಮಗನನ್ನು ಕುದುರೆಯ ಮೇಲೆ ಕರೆದುಕೊಂಡು ಬರುವುದು ಸಾಮಾನ್ಯವಾಗಿ ಹೆಚ್ಚಿನ ಪದ್ಧತಿಗಳಲ್ಲಿ ಇವೆ. ಅದೇ ಕೆಲವು ಪ್ರದೇಶಗಳಲ್ಲಿ ಮದುಮಗನನ್ನು ಮದುವೆಯ ಮಂಟಪದವರೆಗೆ ಆನೆಯ ಮೇಲೆ ಸವಾರಿ ಮಾಡಿಕೊಂಡು ಕರೆದುಕೊಂಡು ಬರಲಾಗುತ್ತದೆ.
ಇಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಮದುಮಗನನ್ನು ಆನೆಯ ಮೇಲೆ ಹೊತ್ತುತಂದರೆ ಅದರಲ್ಲೇನು ವಿಶೇಷ ಎಂದು ಕೇಳಬೇಡಿ. ಇಲ್ಲೇ ಇರುವುದು ವಿಶೇಷ. ಇಲ್ಲದಿದ್ದರೆ ಈ ವಿಡಿಯೋ ಇಷ್ಟೊಂದು ವೈರಲ್​ ಆಗುತ್ತಲೇ ಇರಲಿಲ್ಲ.
ಮದುಮಗನನ್ನು ಆನೆಯ ಮೇಲೆ ಕುಳ್ಳರಿಸಿಕೊಂಡು ಬಂದ ಸ್ನೇಹಿತರು, ಸಂಬಂಧಿಕರು ಭಾಜಾ ಭಜಂತ್ರಿಗಳು ನುಡಿಸುವ ಸಂಗೀತಕ್ಕೆ ಧಾಮ್​ ಧೂಮ್​ ಆಗಿ ಹೆಜ್ಜೆ ಹಾಕುತ್ತಾ ಸಾಗಿದ್ದಾರೆ. ತುಂಬಾ ಉತ್ಸಾಹದಿಂದ ಕುಣಿಯುತ್ತಿದ್ದ ಅವರಿಗೆ ಪಕ್ಕದಲ್ಲಿ ಆನೆ ಕೂಡ ಕುಣಿಯುತ್ತಿದ್ದುದು ಕಾಣಿಸಲೇ ಇಲ್ಲ.
ಅಲ್ಲಿ ನುಡಿಸುತ್ತಿದ್ದ ವಾದ್ಯಗಳು, ಸಂಗೀತದಿಂದಾಗಿ ಮದುಮಗನನ್ನು ಹೊತ್ತ ಆನೆ ಅದೆಷ್ಟು ಖುಷಿಯಾಗಿತ್ತು ಎಂದರೆ ತಾನೂ ಯಾಕೆ ಡಾನ್ಸ್​ ಮಾಡಬಾರದು ಎಂದು ನೋಡಿದೆ! ತಾನು ಡಾನ್ಸ್​ ಮಾಡಿದರೆ ಮೇಲಿರುವ ವರನಿಗೆ ಹಾನಿಯಾಗುತ್ತದೆ ಎಂದು ಪಾಪ ಅದಕ್ಕಾದರೂ ಹೇಗೆ ಗೊತ್ತಿರಲಿಕ್ಕೆ ಸಾಕು?
ಅಂತೂ ತಾನು ಸೊಂಟ ಕುಣಿಸಿ ನೃತ್ಯ ಮಾಡಿಯೇ ಬಿಟ್ಟಿದೆ. ಮುಂದೆ ಹೇಳುವುದೇ ಬೇಡ ಅಲ್ವಾ? ಆಯತಪ್ಪಿ ಮದುಮಗ ಧೊಪ್​ ಎಂದು ಬಿದ್ದಿದ್ದಾನೆ. ಆನೆ ಓಡಿದ ರಭಸಕ್ಕೆ ಎಲ್ಲರೂ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೊನೆಗೆ  ಕೆಲವರು ಓಡೋಡಿ ಬಂದು ಮದುಮಗನನ್ನು ಎಬ್ಬಿಸಿದ್ದಾರೆ. ಆನೆ ಮಾತ್ರ ಯಾವುದೇ ಚಿಂತೆ ಇಲ್ಲದೇ ಸೊಂಟ ಕುಣಿಸುತ್ತಾ ಹೋಗಿದೆ.
ಈ ವಿಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ನೀವೂ ಇಲ್ಲಿ ನೋಡಿ…
ಮದ್ವೆ ದಿನ ಮದುಮಗನ ಬದ್ಲು ಅವನನ್ನು ಹೊತ್ತ ಆನೆ ಕುಣಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ…pic.twitter.com/9QDKUAKUl9— Vijayavani (@VVani4U)December 11, 2020
ಮದ್ವೆ ದಿನ ಮದುಮಗನ ಬದ್ಲು ಅವನನ್ನು ಹೊತ್ತ ಆನೆ ಕುಣಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ…pic.twitter.com/9QDKUAKUl9

ಹೆಸರು ಗಿನ್ನೆಸ್​ ಬುಕ್​ನಲ್ಲಿ- ಕೋಟಿ ಹಣ ಅಕೌಂಟ್​ನಲ್ಲಿ: ಐ ಲವ್​ ಯೂ ನೀಲಂ ಎಂದು ಬರೆದು ಉದ್ಯಮಿ ಆತ್ಮಹತ್ಯೆ!
ಪುರುಷತ್ವ ಹೆಚ್ಚಿಸಲು ಆಯುರ್ವೇದ ಪರಿಹಾರವೇನು? ವೈದ್ಯರು ಕೊಟ್ಟ ಮಾಹಿತಿ ಇಲ್ಲಿದೆ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 + twenty =
Remember me
