ಸ್ಯಾನ್ ಫ್ರಾನ್ಸಿಸ್ಕೋ :ಖಾಸಗಿ ಜೆಟ್‌ ಒಂದರಲ್ಲಿ ಪ್ರಯಾಣಿಸುವಾಗ ವಿಮಾನದ ಸಹಾಯಕಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪವನ್ನು ಸ್ಪೇಸ್​​​ ಎಕ್ಸ್​ ಸಿಇಒ, ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್ ಮೇಲೆ ಬಂದಿದೆ.
ಆರೋಪ ಮಾಡಿರುವ ಮಹಿಳೆಯೂ ಸ್ಪೇಸ್​ ಎಕ್ಸ್​ ಕಾರ್ಪೊರೇಟ್ ಫ್ಲೈಟ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ವರದಿಯ ಪ್ರಕಾರ, ಮಸ್ಕ್​​ ಆಕೆಯ ಜೊತೆ ಅನುಚಿತವಾಗಿ ವರ್ತಿಸಿದ್ದು, ಕಾಮ ಪ್ರಚೋದಕ ಮಸಾಜ್ ಮಾಡುವಂತೆ ಹೇಳಿದ್ದಾರೆ ಎಂಬ ಆರೋಪವಿದೆ. ಈ ಮಹಿಳೆಗೆ ಎರಡೂವರೆ ಲಕ್ಷ ಡಾಲರ್​ (ಸುಮಾರು 1.95 ಕೋಟಿ ರೂಪಾಯಿ) ನೀಡುವ ಆಮಿಷ ಒಡ್ಡಿ ಬಾಯಿ ಮುಚ್ಚುವಂತೆ ಹೇಳಿರುವುದಾಗಿ ಯುವತಿ ಆರೋಪಿಸಿದ್ದಾರೆ.
ಈ ಕುರಿತು ಆ ಯುವತಿ ತನ್ನ ಸ್ನೇಹಿತೆಯ ಬಳಿ ದುಃಖ ತೋಡಿಕೊಂಡಿದ್ದಾಳೆ ಎನ್ನಲಾಗಿದ್ದು, ಆ ಸ್ನೇಹಿತೆ ಇದೀಗ ಇದನ್ನು ಬಹಿರಂಗ ಮಾಡಿದ್ದಾಳೆ. ‘ತಮ್ಮ ಬಟ್ಟೆ ಕಳಚಿದ ಬಳಿಕ ಮಸ್ಕ್ ಅವರು ವಿಮಾನದ ಸಹಾಯಕಿಯ ತೊಡೆಯನ್ನು ಸವರಿದ್ದರು ಮತ್ತು ವಿಮಾನದ ಒಳಗಿನ ಮಸಾಜ್ ವೇಳೆ ಆಕೆ ಮತ್ತಷ್ಟು ಸಹಕಾರ ನೀಡಿದರೆ ಆಕೆಗೆ ಕುದುರೆ ಖರೀದಿ ಮಾಡುವುದಾಗಿ ಆಫರ್ ನೀಡಿದ್ದರು’ ಎಂದು ಸಂತ್ರಸ್ತೆ ತನ್ನ ಬಳಿ ಹೇಳಿಕೊಂಡಿರುವುದಾಗಿ ಯುವತಿ ಆರೋಪಿಸಿದ್ದಾರೆ.
ಈ ಆರೋಪವನ್ನು ಎಲಾನ್ ಮಸ್ಕ್ ತಳ್ಳಿಹಾಕಿದ್ದು, ಇದೆಲ್ಲಾ ಸುಳ್ಳು. ಟ್ವಿಟರ್ ಸ್ವಾಧೀನಕ್ಕೆ ಅಡ್ಡಿಪಡಿಸುವುದು ಇವರ ಏಕೈಕ ಗುರಿಯಾಗಿದೆ ಎಂದಿದ್ದಾರೆ. ಏಕೆಂದರೆ ಎಲಾನ್ ಮಸ್ಕ್ ಅವರು ಟ್ವಿಟರ್ ಕಂಪನಿಯನ್ನು ಸುಮಾರು 3 ಲಕ್ಷ ಕೋಟಿ ರೂ.ಗೆ ಖರೀದಿ ಮಾಡಿದ್ದು, ಒಪ್ಪಂದ ಅಂತಿಮಗೊಂಡಿದೆ ಎಂದು ಹೇಳಲಾಗಿತ್ತು. ಇದರ ಬೆನ್ನಲ್ಲೇ ಯುವತಿ ವಿನಾಕಾರಣ ತಮ್ಮ ಮೇಲೆ ಆರೋಪ ಮಾಡಿದ್ದರು ಎಂದಿದ್ದಾರೆ ಮಸ್ಕ್​.
ಇನ್ನು ಟ್ವಿಟರ್​ ಮೂಲಕ ಓಪನ್​ ಚಾಲೆಂಜ್​ ಹಾಕಿರುವ ಎಲಾನ್​ ಮಸ್ಕ್​, ಸಂತ್ರಸ್ತೆ ಎಂದು ಹೇಳಿಕೊಂಡಾಕೆಗೆ ನಾನೊಂದು ಚಾಲೆಂಜ್ ಮಾಡುತ್ತೇನೆ. ಅವಳು ನನ್ನನ್ನು ಬೆತ್ತಲೆಯಾಗಿ ನೋಡಿರುವುದಾಗಿ ಹೇಳಿಕೊಂಡಿದ್ದಾಳೆ. ಹಾಗಿದ್ದರೆ ನನ್ನ ದೇಹದ ಮೇಲೆ ಇರುವ, ಸಾರ್ವಜನಿಕರಿಗೆ ತಿಳಿಯದೇ ಇರುವ ಯಾವುದಾದರೊಂದು ಗುರು (ಕಲೆ, ಟ್ಯಾಟೂ) ಬಗ್ಗೆ ಹೇಳಲಿ ನೋಡುವ ಎಂದಿದ್ದಾರೆ. ಇದನ್ನು ಆಕೆ ಹೇಳಲು ಸಾಧ್ಯವೇ ಇಲ್ಲ, ಏಕೆಂದರೆ ಅವಳು ಹೇಳುತ್ತಿರುವ ಘಟನೆ ನಡೆದೇ ಇಲ್ಲ ಎಂದು ಸವಾಲು ಹಾಕಿದ್ದಾರೆ.
But I have a challenge to this liar who claims their friend saw me “exposed” – describe just one thing, anything at all (scars, tattoos, …) that isn’t known by the public. She won’t be able to do so, because it never happened.— Elon Musk (@elonmusk)May 20, 2022
But I have a challenge to this liar who claims their friend saw me “exposed” – describe just one thing, anything at all (scars, tattoos, …) that isn’t known by the public. She won’t be able to do so, because it never happened.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 16 =
Remember me
