ಶ್ರೀನಗರ:ಇಂದು ನಸುಕಿನಲ್ಲಿಯೇ ಜಮ್ಮು ಕಾಶ್ಮೀರದ ಪಂಥಾ ಚೌಕ್ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿ ನಡೆದಿದ್ದು ಮೂವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ. ಆದರೆ ಈ ಚಕಮಕಿಯಲ್ಲಿ ಭಾರತದ ಒಬ್ಬ ಯೋಧ ಹುತಾತ್ಮರಾಗಿದ್ದಾರೆ.
ಕಣಿವೆಯಲ್ಲಿ ಅಡಗಿ ಕುಳಿತಿರುವ ಭಯೋತ್ಪಾದಕರನ್ನು ಅಟ್ಟಾಡಿಸಿ ಹೊಡೆಯುತ್ತಿರುವ ಭದ್ರತಾ ಪಡೆಗಳು, ಕಣಿವೆಯನ್ನು ಭಯೋತ್ಪಾದಕ ಮುಕ್ತ ಮಾಡುವ ಸಂಬಂಧ ತೆಗೆದುಕೊಂಡಿರುವ ನಿರ್ಧಾರ ಹಂತಹಂತವಾಗಿ ನೆರವೇರುತ್ತಿದೆ.
ಇದನ್ನೂ ಓದಿ:ವಿಶ್ವದ ಹಿರಿಯ ಜೀವಿತ ವಿವಾಹಿತರಿವರು- ಗುಟ್ಟಾಗಿ ಮದುವೆಯಾಗಿದ್ದ ಇವರ ಹೆಸರೀಗ ವಿಶ್ವದಾಖಲೆ
ನಿನ್ನೆ ತಡರಾತ್ರಿಯಿಂದ ಭದ್ರತಾ ಪಡೆಗಳು ಉಗ್ರರ ವಿರುದ್ಧ ಎನ್‌ಕೌಂಟರ್ ಆರಂಭಿಸಿದ್ದವು. ಇಂದು(ಭಾನುವಾರ) ಬೆಳಗಿನ ಜಾವ ಮೂವರೂ ಉಗ್ರರನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ. ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದು, ಮೂವರನ್ನು ಹೊಡೆದುರುಳಿಸಿದ್ದಾರೆ. ಸದ್ಯ ಹೆಚ್ಚುವರಿ ಪಡೆ ಸ್ಥಳಕ್ಕೆ ಆಗಮಿಸಿ ಸುತ್ತುವರಿದಿದ್ದು, ಕಾರ್ಯಾಚರಣೆ ಮುಂದುವರಿದಿದೆ.
ಶ್ರೀನಗರದ ಹೊರವಲಯದಲ್ಲಿ ಶನಿವಾರ ರಾತ್ರಿ ನಾಕಾಬಂದಿ ನಡೆಸುತ್ತಿದ್ದ ಪೊಲೀಸರು ಮತ್ತು ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರು ದಾಳಿ ಆರಂಭಿಸಿದರು. ಕೂಡಲೇ ಪ್ರದೇಶವನ್ನು ಸುತ್ತುವರಿದ ಪೊಲೀಸರು ಶೋಧ ಕಾರ್ಯ ಆರಂಭಿಸಿದರು. ಈ ವೇಳೆ ಮತ್ತೆ ಉಗ್ರರು ದಾಳಿ ಆರಂಭಿಸಿದರು. ಅದಕ್ಕೆ ದಿಟ್ಟ ಉತ್ತರ ನೀಡಿದ ಪೊಲೀಸರು ಎನ್ ಕೌಂಟರ್ ನಲ್ಲಿ ಮೂವರು ಉಗ್ರರನ್ನು ಸದೆಬಡಿದಿದ್ದಾರೆ.
ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

‌https://www.vijayavani.net/s-politics-yaduveer-tweet/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + twenty =
Remember me
