ಶ್ರೀನಗರ: ಕೇಬಲ್ ಮಾದರಿಯ ರೈಲ್ವೆ ಸೇತುವೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ಅಂಜಿ ನದಿಗೆ ಅಡ್ಡಲಾಗಿ ನಿರ್ಮಾಣವಾಗುತ್ತಿದ್ದು, ಈ ಮಾದರಿಯ ದೇಶದ ಮೊದಲ ಸೇತುವೆ ಇದಾಗಿದೆ. ಇದು ಫ್ರಾನ್ಸ್‍ನ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿರುವುದು ವಿಶೇಷವಾಗಿದೆ.
ಅಂಜಿ ನದಿಗೆ ಅಡ್ಡಲಾಗಿ ಚೇನಾಬ್ ಮಾದರಿಯ ಕಮಾನು ಸೇತುವೆ ನಿರ್ಮಾಣ ಮಾಡಲು ಕೇಂದ್ರ ಸರ್ಕಾರ ಈ ಮೊದಲು ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆಯ ಪ್ರಕಾರ ಕಮಾನು ನಿರ್ಮಾಣಕ್ಕೆ ಅಡೆತಡೆಗಳಿದ್ದರಿಂದಾಗಿ 2016ರ ಅಕ್ಟೋಬರ್‌ನಲ್ಲಿ ಅದನ್ನು ಕೈಬಿಟ್ಟು ಕೇಬಲ್ ಮಾದರಿಯ ಸೇತುವೆ ನಿರ್ಮಾಣದ ಯೋಜನೆ ರೂಪಿಸಲಾಗಿತ್ತು. ಇದೀಗ ಸೇತುವೆ ನಿರ್ಮಾಣದ ಕಾಮಗಾರಿ ಭರದಿಂದ ಸಾಗಿದೆ.
ಉಂಧಾಪುರ-ಶ್ರೀನಗರ-ಬಾರಾಮುಲ್ಲಾ ರೈಲು ಯೋಜನೆಯ ಭಾಗವಾಗಿ ಈ ಸೇತುವೆ ನಿರ್ಮಾಣವಾಗುತ್ತಿದೆ. 473.25 ಮೀಟರ್ ಉದ್ದವಿರುವ ಈ ಸೇತುವೆ. ನದಿಯ ಮೇಲ್ಮೈ ಪ್ರದೇಶದಿಂದ 331 ಮೀಟರ್ ಎತ್ತರ ಇರಲಿದೆ. ಒಟ್ಟು 96 ಕೇಬಲ್‍ಗಳು ಸೇತುವೆಗೆ ಆಧಾರವಾಗಿರುವಂತೆ 21.653 ಕೋಟಿ ರೂ. ವೆಚ್ಚದಲ್ಲಿ ಕೇಬಲ್‍ಗಳನ್ನು ಜೋಡಿಸಿ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
ಈ ಕುರಿತು ಕೇಂದ್ರ ರೈಲ್ವೇ ಇಲಾಖೆ ಜಾಲತಾಣದಲ್ಲಿ ಫೋಟೋ ಪೋಸ್ಟ್‌ ಮಾಡಿದ್ದು, ಇದು ದೇಶದ ಎಂಜಿನಿಯರಿಂಗ್ ಕ್ಷೇತ್ರದ ಹೆಮ್ಮೆ ಎಂದು ಬರೆದುಕೊಂಡಿದೆ.
ತಾಜ್‌ ಮಹಲ್‌ ಪ್ರವೇಶಿಸಿದ ಹಿಜಾಬ್‌! ಅಲ್ಲಾಹು ಅಕ್ಬರ್‌ಗೆ ಪ್ರತಿಯಾಗಿ ಹನುಮಾನ್‌ ಚಾಲೀಸಾ ಪಠಣೆ…

ಕರಿಕಲ್ಲಿನ ಮೇಲೆ ಬಿಳಿರೇಖೆಯಲ್ಲಿ ಮೂಡಿತ್ತು ‘ಹಿಜಾಬ್‌’ ಭವಿಷ್ಯ: ನಿಜವಾಯ್ತಾ ಕಾಲಜ್ಞಾನಿಯ ಮಾತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − three =
Remember me
