ಹೈದರಾಬಾದ್:ಚಿಕ್ಕಂದಿನಿಂದಲೂ ಇವಳೇ ನಿನ್ನ ಹೆಂಡತಿ, ಇವಳನ್ನೇ ನಿನಗೆ ಕೊಟ್ಟು ಮದುವೆ ಮಾಡುವುದು ಎಂದು ಕುಟುಂಬಸ್ಥರು ಮಾತನಾಡಿಕೊಳ್ಳುತ್ತಿದ್ದರು, ಆ ಬಾಲಕನನ್ನು ಛೇಡಿಸುತ್ತಿದ್ದರು. ಇದನ್ನೇ ನಂಬಿದ್ದ ಬಾಲಕ ಆಕೆಯೇ ತನ್ನ ಹೆಂಡತಿ ಎಂದುಕೊಳ್ಳುತ್ತಲೇ ಬೆಳೆದ. ಆದರೆ ಬಾಲಕಿ ದೊಡ್ಡವಳಾಗಿ ಇಂಜಿನಿಯರಿಂಗ್‌ ಕಾಲೇಜು ಸೇರಿದಾಗ ಬೇರೊಬ್ಬನನ್ನು ಪ್ರೀತಿಸತೊಡಗಿದಳು.
ತನ್ನ ಹೆಂಡತಿಯಾಗಬೇಕಿದ್ದವಳು ಬೇರೊಬ್ಬನ ಜತೆಯಲ್ಲಿ ಇರುವುದನ್ನು ಸಹಿಸಲಾಗದ ಯುವಕ, ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಸಂಪ್‌ನೊಳಕ್ಕೆ ಮೃತದೇಹ ಎಸೆದಿರುವ ಭಯಾನಕ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.
19 ವರ್ಷದ ಮಂಜುಳಾ ಮೃತಪಟ್ಟ ಯುವತಿ. ಈಕೆಯನ್ನು ಕೊಲೆ ಮಾಡಿರುವ ಆರೋಪವನ್ನು ಮೂಸಾಸಪೇಟೆ ನಿವಾಸಿಯಾಗಿರುವ ಭೂಪತಿ ಎದುರಿಸುತ್ತಿದ್ದಾನೆ. ಇಬ್ಬರೂ ಸಂಬಂಧಿಕರಾಗಿದ್ದು, ಮಂಜುಳಾ ನಿನ್ನ ಪತ್ನಿ ಎಂದು ಭೂಪತಿಗೆ ಚಿಕ್ಕಂದಿಸಿನಿಂದಲೂ ಹೇಳಲಾಗಿತ್ತು. ಆದರೆ ಆಕೆ ಬೇರೆಯವರನ್ನು ಪ್ರೀತಿಸುತ್ತಿದ್ದಳು. ಇದನ್ನು ಕಂಡು ಸಿಟ್ಟಿನಿಂದ ಭೂಪತಿ ನಿನ್ನ ಜತೆ ಮಾತನಾಡಬೇಕಿದೆ ಎಂದು ಯುವತಿಯನ್ನು ಕುಕಟಪಲ್ಲಿಯ ಮನೆಗೆ ಕರೆಸಿಕೊಂಡಿದ್ದ ಹೋಗಿದ್ದ.
ಇಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿ ಸಂಪ್‌ನಲ್ಲಿ ಮೃತದೇಹ ಎಸೆದು ಪರಾರಿಯಾಗಿದ್ದ. ಇತ್ತ ಮಗಳಿಗಾಗಿ ಪಾಲಕರು ಹುಡುಕಾಟ ನಡೆಸಿದ್ದರು. ಆಕೆ ಸಿಗದಾಗ ಪೊಲೀಸರಿಗೆ ದೂರು ನೀಡಿದ್ದರು. ಪರಾರಿಯಾಗಿದ್ದ ಭೂಪತಿಗೆ ಈ ದೂರಿನ ವಿಷಯ ತಿಳಿಯಿತು. ಅತ್ತ ಪೊಲೀಸರು ಭಾರಿ ತನಿಖೆ ಕೈಗೊಂಡಾಗ ಹೆದರಿ ಕೊನೆಗೆ ತಾನೇ ಬಂದು ಶರಣಾಗಿದ್ದಾನೆ.
ನನ್ನನ್ನು ಕಡೆಗಣಿಸಿ ಬೇರೆ ಯುವಕನೊಂದಿಗೆ ಸಂಬಂಧ ಬೆಳೆಸಿದ್ದಳು. ಆತನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಳು. ಇದನ್ನು ನೋಡಿ ಕೊಲೆ ಮಾಡಿರುವುದಾಗಿ ಹೇಳಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಗಂಡ ಒಳ್ಳೆಯವರು, ಮಕ್ಕಳು ಟಾಪರ್ಸ್​, ಅತ್ತೆ-ಮಾವ ಎಂದ್ರೆ ಪ್ರೀತಿ… ಆದ್ರೂ ನಂದೇನೋ ಸಮಸ್ಯೆ ಮೇಡಂ…

VIDEO: ಮರಣಶಯ್ಯೆಯಲ್ಲಿದ್ದ ಪತ್ನಿಯನ್ನು ಪಿಟಿಲು ನುಡಿಸುತ್ತಾ ಬದುಕಿಸಿದ 77ರ ಕಲಾವಿದ…

ವಿವಿಧ ಪದವೀಧರರಿಗೆ ಆದಾಯ ತೆರಿಗೆ ಇಲಾಖೆಯಿಂದ ಆಹ್ವಾನ: ನಾಳೆಯೇ ಕೊನೆಯ ದಿನ

ಪದವಿಯ ಬೆನ್ನೇರದೇ ಸ್ಪರ್ಧಾ ಪ್ರಪಂಚದ ಒಳಹೊಕ್ಕಾಗ… ಕನ್ನಡದಿಂದ ಚಿನ್ನದವರೆಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 8 =
Remember me
