ಮುಂಬೈ:ಕೋಟ್ಯಂತರ ರೂಪಾಯಿ ಅಕ್ರಮ ಎಸಗಿ ಜರ್ಮನಿಗೆ ಎಸ್ಕೇಪ್​ ಆಗಿದ್ದ ಚರ್ಚ್​ ಆಫ್​ ನಾರ್ಥ್​ ಇಂಡಿಯಾದ ಬಿಷಪ್​ ಪಿ.ಸಿ.ಸಿಂಗ್​ ಅವರನ್ನು ಆರ್ಥಿಕ ಅಪರಾಧಗಳ ವಿಭಾಗದ ತನಿಕಾಧಿಕಾರಿಗಳು (EOW) ಬಂಧಿಸಿದ್ದಾರೆ.
ಜರ್ಮನಿಯಲ್ಲಿದ್ದ ಬಿಷಪ್​ ಭಾರತಕ್ಕೆ ಆಗಮಿಸುತ್ತಿದ್ದಾರೆ ಎಂಬ ಮಾಹಿತಿ ಅರಿತ ತಕ್ಷಣ ಕಾರ್ಯಪ್ರವೃತ್ತರಾದ ತನಿಖಾಧಿಕಾರಿಗಳು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತಕ್ಕೆ ಆಗಮಿಸುತ್ತಿರುವ ಕುರಿತು ಮಾಹಿತಿ ಸಿಗುತ್ತಲೇ ಈ ಕುರಿತು ಅಧಿಕಾರಿಗಳು ಮಹಾರಾಷ್ಟ್ರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸದ್ಯ ಅವರನ್ನು ಅರೆಸ್ಟ್​ ಮಾಡಿ ಜಬಲ್​ಪುರಕ್ಕೆ ಕರೆದೊಯ್ಯಲಾಗಿದೆ.
ಅಕ್ರಮ ಹಣ ಸಂಪಾದನೆ ಕುರಿತು ಬಿಷಪ್​ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ಇದೇ 8ರಂದು ಮಧ್ಯಪ್ರದೇಶದ ಆರ್ಥಿಕ ಅಪರಾಧ ವಿಭಾಗವು ಬಿಷಪ್​ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿತ್ತು. ಬಿಷಪ್ ಸಿಂಗ್ ಅವರು ಅಧ್ಯಕ್ಷರಾಗಿದ್ದ ಸೊಸೈಟಿಯಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿತ್ತು. ದಾಳಿಯ ಸಮಯದಲ್ಲಿ 1.65 ಕೋಟಿ ರೂ. ನಗದು ಮತ್ತು 18,000 ಡಾಲರ್​ ಹಣ ಪತ್ತೆಯಾಗಿತ್ತು. ಜತೆಗೆ, ಚರ್ಚ್​ನ ಟ್ರಸ್ಟ್​ಗಳ ಗುತ್ತಿಗೆ ನವೀಕರಣ, ತೆರಿಗೆ ಪಾವತಿ ಮಾಡದಿರುವುದು, 17 ಆಸ್ತಿ ದಾಖಲೆಗಳು, 48 ಬ್ಯಾಂಕ್ ಖಾತೆಗಳು ಮತ್ತು 8 ಕಾರುಗಳು ಪತ್ತೆಯಾಗಿದ್ದವು.
ತಮ್ಮ ವಿರುದ್ಧ ಕೇಸ್​ ದಾಖಲಾಗಿದೆ ಎಂದು ತಿಳಿಯುತ್ತಲೇ ಅವರು ಜರ್ಮನಿಗೆ ಎಸ್ಕೇಪ್​ ಆಗಿದ್ದರು. ಇದೀಗ ಸಿಕ್ಕಿಬಿದ್ದಿದ್ದಾರೆ. 2004-05 ಮತ್ತು 2011-12 ರ ನಡುವೆ ವಿದ್ಯಾರ್ಥಿಗಳ ಶುಲ್ಕವಾಗಿ ಸಂಗ್ರಹಿಸಲಾದ 2.70 ಕೋಟಿ ರೂಪಾಯಿಗಳನ್ನು ಧಾರ್ಮಿಕ ಸಂಸ್ಥೆಗಳಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಮಧ್ಯಪ್ರದೇಶ ಪೊಲೀಸರು ಪತ್ತೆ ಮಾಡಿದ್ದರು. ಈ ಹಣವನ್ನು ಬಿಷಪ್ ವೈಯಕ್ತಿಕ ಅಗತ್ಯಗಳಿಗಾಗಿ ಬಳಸಿಕೊಂಡಿದ್ದರು ಎಂಬ ಆರೋಪವಿದೆ. (ಏಜೆನ್ಸೀಸ್​)
ಲವ್ವಲ್ಲಿ ಏನಿದೆ? ಸಖತ್ ಆಗಿರೋ 24 ವರ್ಷದ ಹುಡುಗನನ್ನ ಕಳಿಸಿಕೊಡಪ್ಪಾ ದೇವ್ರೆ ಎಂದ ಸೋನು ಗೌಡ!
ಒಂದು ಕುಂಬಳಕಾಯಿಗೆ 47 ಸಾವಿರ ರೂಪಾಯಿ! ಇದ್ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿಶೇಷತೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × five =
Remember me
