ಕೊಲಂಬಿಯಾ:ನೇರಪ್ರಸಾರದ ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಟೀವಿ ಸ್ಟುಡಿಯೋದ ಸೆಟ್​ ಕಳಚಿಬಿದ್ದು ಕೆಲ ಕಾಲ ಆತಂಕದ ಸ್ಥಿತಿ ನಿರ್ಮಾಣವಾದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.
ನೇರಪ್ರಸಾರದಲ್ಲಿ ಈ ದುರ್ಘಟನೆ ಸಂಭವಿಸಿರುವ ಕಾರಣ, ಇದು ವೈರಲ್​ ಆಗಿದೆ. ಇಎಸ್​ಪಿಎನ್​ ಚಾನೆಲ್​ನಲ್ಲಿ ನೇರಪ್ರಸಾರ ನಡೆಯುತ್ತಿತ್ತು, ಈ ಸಂದರ್ಭದಲ್ಲಿ ಟಿವಿ ನಿರೂಪಕನ ಮೇಲೆ ಸ್ಟುಡಿಯೋದ ಒಂದು ಭಾಗ ಕಳಚಿ ಬಿದ್ದಿದೆ.
ಕ್ರಿಕೆಟ್​ಗೆ ಸಂಬಂಧಿಸಿದ ನೇರ ಪ್ರಸಾರ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ನಿರೂಪಕ ಕ್ರೀಡಾ ವಿಶ್ಲೇಷಣೆಯನ್ನು ಮಾಡುತ್ತಿದ್ದ,. ಜತೆಗೆ ಕ್ರೀಡಾ ಕ್ಷೇತ್ರದ ಕೆಲವು ದಿಗ್ಗಜರು ಅಲ್ಲಿ ಇದ್ದರು. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಕ್ರೀಡಾ ವಿಶ್ಲೇಷಕನ ಮುಖದ ಹತ್ತಿರದಲ್ಲಿಯೇ ಇದ್ದ ಬೆಂಚ್ ಒಂದಕ್ಕೆ ಈ ಗೋಡೆ ಬಿದ್ದಿದೆ.
Shocking video. ESPN anchor crushed live on the air by falling set piece. Thankfully he was uninjured.pic.twitter.com/CeFxy8AksY
— Mike Sington (@MikeSington)March 10, 2021

ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ. ನೇರಪ್ರಸಾರ ಆಗಿದ್ದ ಕಾರಣ, ಯಾರೂ ಆ ಕ್ಷಣದಲ್ಲಿ ಅಲ್ಲಿಗೆ ಧಾವಿಸಲು ಸಾಧ್ಯವಾಗಲಿಲ್ಲ. ನಂತರ ತಕ್ಷಣವೇ ನಿರೂಪಕರು ಬ್ರೇಕ್ ತೆಗೆದುಕೊಳ್ಳುವ ಮೂಲಕ ಕಾರ್ಯಕ್ರಮವನ್ನು ಮೊಟಕುಗೊಳಿಸಿದ್ದಾರೆ. ನಂತರ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಅವರ ಮೂಗಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಹೆಚ್ಚಿನ ಅನಾಹುತ ಸಂಭವಿಸಿಲ್ಲ ಎನ್ನಲಾಗಿದೆ.
ನೇರಪ್ರಸಾರ ಕಾರ್ಯಕ್ರಮ ನಡೆಯುತ್ತಿರುವುದನ್ನು ನೋಡುತ್ತಿದ್ದ ಅಪಾರ ವೀಕ್ಷಕರು ಆರೋಗ್ಯದ ಬಗ್ಗೆ ವಿಚಾರಿಸಿದುದಕ್ಕೆ ಕ್ರೀಡಾ ವಿಶ್ಲೇಷಕ ಟ್ವೀಟ್​ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ಆಸ್ಪತ್ರೆಯಲ್ಲಿರೋ ದೀದಿ ಹತ್ರ ಇರೋದು ಒಂಬತ್ತೇ ಗ್ರಾಂ ಚಿನ್ನ, ಒಂದೇ ಒಂದು ಸ್ವಂತ ವಾಹನನೂ ಇಲ್ವಂತೆ!

ಇಂಜಿನಿಯರಿಂಗ್​ ಪದವಿ ಮುಗಿಸಿರುವಿರಾ? ಕೇಂದ್ರ ಸರ್ಕಾರದಲ್ಲಿ ನಿಮಗಾಗಿ ಕಾದಿವೆ 200 ಹುದ್ದೆಗಳು

VIDEO: ನಿಮ್​ ದೇಹ,​ ಪ್ರಾಣ ಪ್ರೀತಿ ಆಗಿದ್ದೇ ಹೌದಾದ್ರೆ ಹೀಗೆ ಮಾಡ್ಬೇಡಿ… ಎಲ್ಲರೂ ಅದೃಷ್ಟವಂತರಾಗಿರಲ್ಲ…

10 ವರ್ಷ ಚೆನ್ನಾಗಿದ್ದ ನನ್​ ಗಂಡ ಪಕ್ಕದ್ಮನೆ ಮಹಿಳೆಯಿಂದಾಗಿ ಹಾದಿ ತಪ್ತಿದ್ದಾರೆ… ಪ್ಲೀಸ್​ ದಾರಿ ತೋರಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 3 =
Remember me
