ಗಾಂಧಿನಗರ (ಗುಜರಾತ್​):ಕೇಂದ್ರದ ಮಾಜಿ ಸಚಿವ, ಗುಜರಾತ್​ನ ಕಾಂಗ್ರೆಸ್​ ಹಿರಿಯ ನಾಯಕ ಯುವತಿಯೊಬ್ಬಳ ಜತೆ ಏಕಾಂತದಲ್ಲಿ ಇರುವಾಗ ಪತ್ನಿಯ ಕೈಯಲ್ಲಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದು, ಇದರ ವಿಡಿಯೋ ಭಾರಿ ವೈರಲ್​ ಆಗಿದೆ.
ಹೀಗೆ ಪತ್ನಿಯ ಕೈಯಲ್ಲಿ ಸಿಕ್ಕಿಬಿದ್ದವರು ಕಾಂಗ್ರೆಸ್ ಹಿರಿಯ ನಾಯಕ ಭರತ್ ಸಿಂಗ್ ಸೋಲಂಕಿ. ಪತಿಯ ಬಗ್ಗೆ ಸಂದೇಹವಿದ್ದ ಕಾರಣ, ಸಮಯಕ್ಕಾಗಿ ಕಾದು ಪತಿಯನ್ನು ಹಿಡಿದುಹಾಕಿದ್ದಾರೆ ಪತ್ನಿ ರೇಷ್ಮಾ. ತಮ್ಮ ಪತ್ನಿಗೆ ತಿಳಿಯದಂತೆ ಬಂಗಲೆಯೊಂದರಲ್ಲಿ ಯುವತಿಯ ಜತೆ ಇರುವಾಗ ಪತ್ನಿ ಪ್ರವೇಶಿಸಿ ಜೋರಾಗಿ ಗಲಾಟೆ ಮಾಡಿರುವ ವಿಡಿಯೋ ವೈರಲ್​ ಆಗಿದೆ.
ಭರತ್​ಸಿಂಗ್​ ಮತ್ತು ಪತ್ನಿಯ ನಡುವೆ ವೈಮಸ್ಸು ಇತ್ತು. ಇದರ ಕುರಿತು ಕೋರ್ಟ್​ನಲ್ಲಿ ಕೂಡ ಕೇಸ್​ ನಡೆಯುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಪತಿಗೆ ಡಿವೋರ್ಸ್​ ಕೊಡುವುದಿಲ್ಲ ಎನ್ನುತ್ತಿದ್ದಾರೆ ಪತ್ನಿ. ಇದೀಗ ಇನ್ನೋರ್ವ ಯುವತಿ ಜತೆ ಸಂಬಂಧ ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ. ಪತ್ನಿ ರೆಡ್​ಹ್ಯಾಂಡ್​ ಆಗಿ ಹಿಡಿದಾಗ, ಪತ್ನಿಗೆ ಮಾಜಿ ಸಚಿವರು, ‘ನೀನೇನು ಮಾಡೋಕೆ ಆಗಲ್ಲ. ನಾನು ಗಂಡಸು, ಬೇಕಾದಷ್ಟು ಮಂದಿಯನ್ನು ಇಟ್ಟುಕೊಳ್ಳುತ್ತೇನೆ. ನೀನೆನು ಮಾಡುತ್ತಿಯೋ ನೋಡೋಣ. ಬಾಯಿ ಮುಚ್ಚಿಕೊಂಡು ಮೂಲೆಯಲ್ಲಿ ಇರೋದಷ್ಟೇ ನಿನ್ನ ಕೆಲಸ. ನಾನು ಎಷ್ಟು ಬೇಕಾದರೂ ಮೋಜು ಮಾಡುತ್ತೇನೆ’ ಎಂದಿದ್ದಾರೆ. ಇದರ ವಿಡಿಯೋ ಮಾಡಲು ಹೋದಾಗ ಯುವತಿ ಮುಖ ಮುಚ್ಚಿಕೊಂಡಿದ್ದಾರೆ.
ಘಟನೆಯ ಸಂಪೂರ್ಣ ವಿಡಿಯೋ ರೆಕಾರ್ಡ್ ಆಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ಕಾಂಗ್ರೆಸ್ ಮಹಿಳಾ ನಾಯಕಿ ವಂದನಾ ಪಟೇಲ್ ಅವರು ಭರತಸಿಂಹ ಸೋಲಂಕಿ ಅವರನ್ನು ಕಾಮಪ್ರಚೋದಕ ಎಂದು ಆರೋಪಿಸಿದ್ದರು. ಈ ಬಗ್ಗೆ ಪಕ್ಷದ ಕೇಂದ್ರ ಸಂಸ್ಥೆಗೆ ಪತ್ರವನ್ನೂ ಬರೆದಿದ್ದರು. ಆದರೆ, ವಂದನಾ ಪಟೇಲ್ ಅವರ ಪತ್ರದ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪತಿ ತಮಗೆ ಹಿಂಸೆ ಕೊಡುತ್ತಿದ್ದಾರೆ ಎಂದು ಈ ಹಿಂದೆ ಅವರ ಪತ್ನಿ ರೇಷ್ಮಾ ದೂರು ಕೂಡ ದಾಖಲಿಸಿದ್ದು ಇಲ್ಲಿ ಉಲ್ಲೇಖಾರ್ಹ(ಏಜೆನ್ಸೀಸ್​)
ವಿಡಿಯೋ ಇಲ್ಲಿದೆ ನೋಡಿ: (ಕೃಪೆ ಆಪಣಿ ನ್ಯೂಸ್​)

ಪ್ರೇಮಿಗಾಗಿ ಜೀವದ ಹಂಗುತೊರೆದು ಗಂಟೆಗಟ್ಟಲೆ ನದಿಯಲ್ಲಿ ಈಜಿದಳು: ಆತನನ್ನೇ ಮದ್ವೆಯಾಗಿ ಅರೆಸ್ಟ್​ ಆದಳು!

ಸುಂದರಿ ಸಿಕ್ಕಳೆಂದು ಐದು ಲಕ್ಷ ರೂ. ವಧುದಕ್ಷಿಣೆ ಕೊಟ್ಟರು… ಮದ್ವೆಯಾದ ಮೇಲೆ ತಿಳಿಯಿತು ಅವಳು ಇವಳಲ್ಲವೆಂದು!

ಲವರ್​ ಬೇರೊಬ್ಬಳ ಜತೆ ಸಲುಗೆಯಿಂದ ಇದ್ದುದಕ್ಕೆ ಆಕೆಯ ಮೇಲೆ ಗ್ಯಾಂಗ್​ರೇಪ್​ ಮಾಡಿಸಿದ ಯುವತಿ!

Sign in to your account
Please enter an answer in digits:five × one =
Remember me
