ಬೆಂಗಳೂರು: ಮಲೇಷ್ಯಾದ ಮಹಿಳೆಯೊಬ್ಬರ ಜತೆ ಐದು ವರ್ಷ ಲಿವ್‌ ಇನ್‌ನಲ್ಲಿ ಇದ್ದು, ಮೂರು ಬಾರಿ ಗರ್ಭಪಾತ ಮಾಡಿದ ಎಸ್ಕೇಪ್‌ ಆಗಿದ್ದ ಎಐಎಡಿಎಂಕೆ ಮಾಜಿ ಸಚಿವ ಎಂ ಮಣಿಕಂದನ್ ಕೊನೆಗೂ ಅರೆಸ್ಟ್‌ ಆಗಿದ್ದಾರೆ.
ಚೆನ್ನೈ ಪೊಲೀಸರು ಬೆಂಗಳೂರಿನಲ್ಲಿ ಅವರು ಬಂಧಿಸಿರುವುದಾಗಿ ಮೂಲಗಳು ಹೇಳಿವೆ. ಕಳೆದ ಐದು ವರ್ಷಗಳಿಂದ ನಾನು ಲಿವ್ ಇನ್ ಸಂಬಂಧದಲ್ಲಿದ್ದೆ, ನನ್ನನ್ನು ಮದುವೆಯಾಗುವುದಾಗಿ ನಂಬಿಸಿ, ನಿರಂತರ ಅತ್ಯಾಚಾರ ಮಾಡಿದ್ದಾರೆ. ಇದರ ಫಲವಾಗಿ ಮೂರು ಬಾರಿ ಗರ್ಭಧರಿಸಿದ್ದೆ, ಬಲವಂತವಾಗಿ ಗರ್ಭಪಾತ ಮಾಡಿಸಿ ಈಗ ಮೋಸ ಮಾಡಿದ್ದಅರೆ ಎಂದು ಮಲೇಷ್ಯಾ ಮೂಲದ ಮಹಿಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು.
ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ತಮ್ಮನ್ನು ಪೊಲೀಸರು ಬಂಧಿಸದಂತೆ ಕೋರಿ ಮಣಿಕಂದನ್‌ ನಿರೀಕ್ಷಣಾ ಜಾಮೀನು ಕೋರಿದ್ದರು. ಆದರೆ ಮದ್ರಾಸ್‌ ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮನ್ನು ಪೊಲೀಸರು ಬಂಧಿಸಬಹುದು ಎಂದು ಮಣಿಕಂಠನ್ ಎಸ್ಕೇಪ್‌ ಆಗಿದ್ದರು. ಇದೀಗ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ಎಐಎಡಿಎಂಕೆ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಖಾತೆ ಸಚಿವರಾಗಿದ್ದ ಮಣಿಕಂದನ್ ಅವರಿಗೆ ದಕ್ಷಿಣ ಏಷ್ಯಾದ ಪ್ರವಾಸಿ ರಾಯಭಾರಿಯಾಗಿದ್ದ ಯುವತಿಯ ಪರಿಚಯ 2017ರಲ್ಲಿ ಆಗಿತ್ತು. ಅವರಿಗೆ ಮಲೇಷ್ಯಾದಲ್ಲಿ ಹೂಡಿಕೆ ಸಂಬಂಧ ಮಾತುಕತೆ ಮಾಡಲು ಮಣಿಕಂಠನ್ ಕರೆಸಿಕೊಂಡಿದ್ದರು. ಇದಾಗಲೇ ವಿವಾಹವಾಗಿದ್ದರೂ, ಯುವತಿ ಜತೆ ಲಿವ್ ಇನ್ ಸಂಬಂಧದಲ್ಲಿದ್ದರು. ಮದುವೆಯಾಗುವಂತೆ ಹೇಳಿದರೆ ಬೆದರಿಕೆ ಹಾಕುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಇವರು ಬೆಂಗಳೂರಿನಲ್ಲಿ ಜೆ.ಡಿ.ಎಸ್ ಮುಖಂಡ ತಮ್ಮನಾಯಕನಳ್ಳಿ ಶ್ರೀನಿವಾಸ್ ಅವರಿಗೆ ಸೇರಿದ ವಿಲ್ಲಾದಲ್ಲಿ ಅಡಗಿ ಕುಳಿತಿರುವುದು ತಿಳಿದ ಚೆನ್ನೈದ ಸಿಐಡಿ ಪೊಲೀಸರು, ನಿನ್ನೆ ರಾತ್ರಿಯೇ ಬೆಂಗಳೂರಿಗೆ ಬಂದಿದ್ದು, ಅರೆಸ್ಟ್‌ ಮಾಡಿದ್ದಾರೆ.
ಆ ಹುಡುಗ ತುಂಬಾ ಕಾಡ್ತಿದ್ದಾನೆ, ಲವ್‌ ಮಾಡ್ತಾನೋ ಇಲ್ವೋ ತಿಳ್ಕೋಳೋದು ಹೇಗೆ ಮೇಡಂ?

ಕ್ಯಾಲೆಂಡರ್‌ಗೋಸ್ಕರ ಪುನಃ ಟಾಪ್‌ಲೆಸ್‌ ಆದ ನಟಿ- ಹಾಟ್‌ ಫೋಟೋಗಳು ವೈರಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 3 =
Remember me
