ಲಖನೌ:ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೇನು ಕ್ಷಣಗಣನೆ ಆರಂಭವಾಗಿದ್ದು, ಬಿಜೆಪಿ ಭರ್ಜರಿ ಮುನ್ನಡೆಯತ್ತ ಸಾಗಿದೆ.
ಉತ್ತರ ಪ್ರದೇಶದ ಕೆಲವು ಕ್ಷೇತ್ರಗಳು ಭಾರಿ ಪ್ರಚಾರ ಗಳಿಸಿದ್ದು, ಅದರಲ್ಲಿ ಒಂದು ಹಸ್ತಿನಾಪುರ ಕ್ಷೇತ್ರ. ಇಲ್ಲಿ ಕಾಂಗ್ರೆಸ್​ ಉತ್ತರ ಪ್ರದೇಶದ ಸುಂದರಿ ಅರ್ಚನಾ ಗೌತಮ್​ ಅವರನ್ನು ಕಣಕ್ಕೆ ಇಳಿಸಿತ್ತು. 2014ರಲ್ಲಿ ಮಿಸ್​ ಉತ್ತರ ಪ್ರದೇಶ ಆಗಿದ್ದವರು ಅರ್ಚನಾ.
ನಟಿ, ರೂಪದರ್ಶಿಯೂ ಆಗಿರುವ ಅರ್ಚನಾ ಗೌತಮ್​ ಮಿಸ್​ ಬಿಕಿನಿ ಇಂಡಿಯಾ, ಮಿಸ್​ ಬಿಕಿನಿ ಯೂನಿವರ್ಸ್​​​ ಇಂಡಿಯಾ ಆಗಿಯೂ ಮಿಂಚಿದ್ದಾರೆ. ಮೀರತ್​​ನ ಐಐಎಂಟಿಯಿಂದ ಬಿಜೆಎಂಸಿ ಯಲ್ಲಿ ಡಿಗ್ರಿ ಪಡೆದುಕೊಂಡಿದ್ದು, 2018ರಲ್ಲಿ ‘ಮೋಸ್ಟ್​ ಟ್ಯಾಲೆಂಟ್’​​ ಶೀರ್ಷಿಕೆ ಗೆದ್ದಿದ್ದಾರೆ. ಇವರನ್ನು ‘ಬಿಕಿನಿ ಗರ್ಲ್’​ ಎಂದೇ ಕರೆಯಲಾಗುತ್ತದೆ..
2015ರಲ್ಲಿ ಬಾಲಿವುಡ್​ಗೂ ಇವರು ಪ್ರವೇಶ ಮಾಡಿದ್ದಾರೆ. ಆದ್ದರಿಂದ ಇವರು ಸ್ಟಾರ್​ ಎಂದೇ ಎನಿಸಿಕೊಂಡಿದ್ದು, ಇವರ ಮೇಲೆ ಕಾಂಗ್ರೆಸ್​ ಭಾರಿ ಭರವಸೆ ಇಟ್ಟುಕೊಂಡಿತ್ತು. ಆದರೆ ಮತದಾರರು ಇವರತ್ತ ಒಲವು ತೋರಲಿಲ್ಲ. ಇಲ್ಲಿ ಕೂಡ ಬಿಜೆಪಿಯ ದಿನೇಶ್​ ಕಾಟಿಕ್​ ಮುನ್ನಡೆ ಕಾಯ್ದುಕೊಂಡಿದ್ದು, ಅರ್ಚನಾ ಭಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ.
ಭಾರಿ ಸಂಚಲನ ಸೃಷ್ಟಿಸಿದ್ದ ಉ.ಪ್ರದೇಶದ ಹಾಥರಾಸ್​, ಲಖೀಂಪುರ ಕ್ಷೇತ್ರಗಳಲ್ಲಿ ಅಚ್ಚರಿಯ ಬೆಳವಣಿಗೆ…

ಮಾಹಿತಿ ಕೊಟ್ಟಾಗ ಯೂಕ್ರೇನ್​ನಿಂದ ಮರಳದ ವಿದ್ಯಾರ್ಥಿಗಳನ್ನು ಕರೆತರಲು ಕೇಂದ್ರಕ್ಕೆ ಖರ್ಚಾದದ್ದು ಎಷ್ಟು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + nineteen =
Remember me
