ಇಸ್ಲಾಮಾಬಾದ್:ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಕೆಲವು ರಾಷ್ಟ್ರಗಳು ಕೊಂಡಾಡುತ್ತಿರುವುದು ಹೊಸ ವಿಷಯವಲ್ಲ. ಆದರೆ ಭಾರತದ ಬದ್ಧ ವೈರಿ ಎಂದೇ ಬಿಂಬಿತವಾಗಿರುವ ಪಾಕಿಸ್ತಾನದಲ್ಲಿಯೂ ಈಗ ಮೋದಿ ಸರ್ಕಾರವನ್ನು ಹೊಗಳಲಾಗುತ್ತಿದೆ.
ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮೋದಿಯವರನ್ನು ಹೊಗಳಲು ಕಾರಣ, ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಅವರು ಹಾಡಿ ಹೊಗಳಿದ್ದಾರೆ.
ರಷ್ಯಾದಿಂದ ಅಗ್ಗದ ದರದಲ್ಲಿ ತೈಲ ಖರೀದಿ ಮಾಡದಂತೆ ಅಮೆರಿಕ ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಒತ್ತಡ ಹಾಕಿತ್ತು. ಆದರೆ ತಮ್ಮ ದೇಶದ ಜನರಿಗೆ ಹೊರೆಯಾಗುವುದನ್ನು ತಪ್ಪಿಸಲು ಸಲುವಾಗಿ ಅಮೆರಿಕ ಮಿತ್ರ ರಾಷ್ಟ್ರಗಳಲ್ಲಿ ಒಂದಾದರೂ ಅದರ ಮಾತನ್ನು ಲೆಕ್ಕಿಸದೇ ಭಾರತ ದೃಢವಾಗಿ ನಿಂತಿದ್ದು, ಇಂಥದ್ದೊಂದು ದೃಢ ನಿಲುವು ತೋರುವ ತಾಕತ್ತು ಪಾಕಿಸ್ತಾನಕ್ಕೆ ಇಲ್ಲ ಎಂದು ಇಮ್ರಾನ್​ ಖಾನ್​ ಹೇಳಿದ್ದಾರೆ.ಇದೇ ವೇಳೆ ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವುದಕ್ಕೆ ಭಾರತವನ್ನು ಟೀಕಿಸುತ್ತಿರುವ ಪಾಶ್ಚಿಮಾತ್ಯ ದೇಶಗಳ ವಿರುದ್ಧ ಕಿಡಿಕಾರಿದ್ದಾರೆ. ಲಾಹೋರ್‌ನಲ್ಲಿ ಸೇರಿದ್ದ ಬೃಹತ್ ಜನಸಮೂಹವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪಾಕಿಸ್ತಾನದ ಸಂದರ್ಭದಲ್ಲಿಯೇ ಭಾರತ ಸ್ವಾತಂತ್ರ್ಯ ಪಡೆದಿದ್ದಾಗ, ಭಾರತದ ಮಾತ್ರ ದೃಢವಾಗಿ ನಿಂತು ತನ್ನ ಜನರ ಅಗತ್ಯಕ್ಕೆ ಅನುಗುಣವಾಗಿ ವಿದೇಶಾಂಗ ನೀತಿಯನ್ನು ರೂಪಿಸಲು ಸಾಧ್ಯವಾಗುವುದಾದರೆ, ದಾರಿ ತಪ್ಪುತ್ತಿರುವ ನಮ್ಮ ಪ್ರಧಾನಿಗೆ ಏಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು. ರಷ್ಯಾದಿಂದ ತೈಲ ಖರೀದಿಸುವ ವಿಚಾರದಲ್ಲಿ ಅಮೆರಿಕದ ಒತ್ತಡಕ್ಕೆ ತಲೆಬಾಗಿದ ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವನ್ನು ಇಮ್ರಾನ್ ಖಾನ್ ಟೀಕಿಸಿದರು.
ಭಾರತವು ಅಮೆರಿಕ ಕಾರ್ಯತಂತ್ರ ಮಿತ್ರ ದೇಶ. ಪಾಕಿಸ್ತಾನ ಅಲ್ಲ. ಆದರೆ ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಸೂಚಿಸಿದಾಗ ಭಾರತ ಅದಕ್ಕೆ ಕೇರೇ ಮಾಡಲಿಲ್ಲ, ಅಂಥ ರಾಷ್ಟ್ರವನ್ನು ನೋಡಿ ಉಳಿದವರು ಕಲಿಯಬೇಕಿದೆ ಎಂದು ಹೇಳಿದರು. ಅದರಲ್ಲಿಯೂ ನಮ್ಮ ಪಾಕಿಸ್ತಾನ ಮೊದಲು ಇದನ್ನು ಕಲಿಯಬೇಕಿದೆ. ಇಂಧನ ದರಗಳು ಗಗನಕ್ಕೆ ಏರುತ್ತಿವೆ. ಜನರು ಬಡತನ ರೇಖೆಗಿಂತ ಕಡಿಮೆ ಇದ್ದಾರೆ. ಭಾರತ ತನ್ನ ಪ್ರಜೆಗಳಿಗಾಗಿ ಇಂಥದ್ದೊಂದು ದಿಟ್ಟ ನಿಲುವು ತೆಗೆದುಕೊಳ್ಳುವುದಾದರೆ ನಮಗ್ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದರು.
ಮೋದಿಯವರನ್ನು ಹೊಗಳಿದ ಖ್ಯಾತ ಪತ್ರಕರ್ತ ಶಿರಾಜ್ ಹಸನ್
ಅದೇ ಇನ್ನೊಂದೆಡೆ, ಪಾಕಿಸ್ತಾನದ ಪತ್ರಕರ್ತ ಶಿರಾಜ್​ ಹಸನ್​ ಅವರು ಕೂಡ ಮೋದಿಯವರನ್ನು ತುಂಬು ಹೃದಯದಿಂದ ಶ್ಲಾಘಿಸಿದ್ದಾರೆ. ಇದಕ್ಕೆ ಕಾರಣ, ಭಾರತದ ಕುಸ್ತಿಪಟು ಪೂಜಾ ಗೆಹ್ಲೋಟ್ ಅವರನ್ನು ಮೋದಿ ಪ್ರೋತ್ಸಾಹಿಸಿದ ರೀತಿಗೆ ಶಿರಾಜ್​ ಮನಸೋತಿದ್ದಾರೆ.
ಪೂಜಾ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಪಡೆದರು. ಅವರು ಸ್ವಲ್ಪ ಪ್ರಯತ್ನ ಪಟ್ಟಿದ್ದರೆ ಚಿನ್ನದ ಪದಕ ಗೆಲ್ಲಬಹುದಿತ್ತು. ಆದರೆ ಅವರ ತಪ್ಪಿನಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಇದರಿಂದ ತೀರಾ ಹತಾಶಗೊಂಡ ಪೂಜಾ ದುಃಖಿಸುತ್ತಿದ್ದಾಗ ಅವರನ್ನು ಪ್ರಧಾನಿ ಮೋದಿ ಸಂತೈಸಿದ ಪರಿ ಭಾರತದಲ್ಲಿ ಮಾತ್ರವಲ್ಲೇ ಪಾಕ್​ನಲ್ಲಿಯೂ ಶ್ಲಾಘನೆ ವ್ಯಕ್ತವಾಗಿದೆ.
#WATCH| India's Pooja Gehlot gets emotional post winning a Bronze medal in the Women's 50kg Freestyle Wrestling
"I apologise to my compatriots. I wished that the National Anthem be played here… But I will learn from my mistakes, and work on them," says Wrestler Pooja Gehlotpic.twitter.com/LOHIMeMRHI
— ANI (@ANI)August 6, 2022

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ಪೂಜಾ, “ನಾನು ನನ್ನ ದೇಶಬಾಂಧವರ ಬಳಿ ಕ್ಷಮೆಯಾಚಿಸುತ್ತೇನೆ. ನನ್ನ ಕೆಲವು ತಪ್ಪುಗಳಿಂದ ಚಿನ್ನ ತಪ್ಪಿತು ಎಂದು ಭಾವುಕರಾಗಿದ್ದರು. ಇದನ್ನು ಅವರು ಟ್ವೀಟ್​ ಮೂಲಕವೂ ಹಂಚಿಕೊಂಡಿದ್ದರು. ಅದಕ್ಕೆ ಮರುಟ್ವೀಟ್​ ಮಾಡಿದ್ದ ಪ್ರಧಾನಿ ಮೋದಿ, ಪೂಜಾ ಅವರನ್ನು ಸಂತೈಸಿ ಮತ್ತು ಒಳ್ಳೆಯ ಮಾತುಗಳೊಂದಿಗೆ ಅವರನ್ನು ಪ್ರೋತ್ಸಾಹಿಸಿದ್ದರು, “ಪೂಜಾರವರೇ, ನಿಮ್ಮ ಪದಕವು ದೇಶಕ್ಕೆ ಸಂಭ್ರಮ ತಂದಿದೆ. ನಿಮ್ಮ ಜೀವನ ಪ್ರಯಾಣವು ನಮ್ಮನ್ನು ಪ್ರೇರೇಪಿಸುತ್ತದೆ, ನಿಮ್ಮ ಯಶಸ್ಸು ನಮ್ಮನ್ನು ಸಂತೋಷಪಡಿಸಿದೆ. ನೀವು ಮುಂದೆ ಇನ್ನೂ ದೊಡ್ಡ ದೊಡ್ಡ ಗುರಿಗಳನ್ನು ಸಾಧಿಸಿ ಎಂದು ಹಾರೈಸುವೆ, ಚಿನ್ನ ತರಲಿಲ್ಲ ಎಂಬ ಬೇಸರ ಬೇಡ, ಇನ್ನೂ ಉಜ್ವಲ ಭವಿಷ್ಯವಿದೆ” ಎಂದಿದ್ದರು.
ಈ ಮರುಟ್ವೀಟ್​ ಕುರಿತು ಮಾತನಾಡಿದ ಪಾಕಿಸ್ತಾನದ ಪತ್ರಕರ್ತ ಶಿರಾಜ್​ ಹಸನ್​, ನಮ್ಮ ಪಾಕಿಸ್ತಾನಕ್ಕೆ ನಾಚಿಕೆಯಾಗಬೇಕು. ನಮ್ಮ ದೇಶದಲ್ಲಿ ಕ್ರೀಡಾಪಟುಗಳು ಇದ್ದಾರೆ, ಅವರೂ ಪದಕ ತರುತ್ತಿದ್ದಾರೆ ಎನ್ನುವ ಕಲ್ಪನೆಯಾದರೂ ನಮ್ಮ ಪ್ರಧಾನಿ ಅಥವಾ ನಾಯಕರಿಗೆ ಇದೆಯಾ? ಪದಕ ಗೆಲ್ಲದಿದ್ದರೆ ದೂರದ ಮಾತು, ಪದಕ ಗೆದ್ದ ಮೇಲಾದರೂ ನಾಲ್ಕು ಒಳ್ಳೆಯ ಮಾತುಗಳನ್ನು ಆಡಿದ ಉದಾಹರಣೆಗಳು ಇವೆಯಾ ಎಂದು ಪ್ರಶ್ನಿಸಿರುವ ಅವರು, ಭಾರತದ ಪ್ರಧಾನಿಯನ್ನು ನೋಡಿ ಇನ್ನಾದರೂ ಕಲಿಯಿರಿ ಎಂದಿದ್ದಾರೆ.(ಏಜೆನ್ಸೀಸ್​)
ಇಲ್ಲಿದೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಮಾತು:(ಕೃಪೆ ದಿ ಪ್ರಿಂಟ್​)

ನಿಷೇಧಾಜ್ಞೆ ನಡುವೆಯೂ ಶಿವಮೊಗ್ಗದಲ್ಲಿ ನಿಲ್ಲದ ಹಿಂಸಾಚಾರ: ಮತ್ತೋರ್ವ ಹಿಂದೂ ಯುವಕನಿಗೆ ಚಾಕು ಇರಿತ

ಪತಿಗಾಗಿ ಸುಂದರ ಯುವತಿಯನ್ನು ಹುಡುಕ್ತಿರೋ ಪತ್ನಿ! ಜಾಹೀರಾತು ನೋಡಿ ಹೊಟ್ಟೆ ಉರಿದುಕೊಂಡ ಪುರುಷರು!

VIDEO: ತ್ರಿವರ್ಣ ಧ್ವಜ ಹಾರಿಸಿದರೆ ಸಾಯಿಸುವುದಾಗಿ ಘೋಷಿಸಿದ್ದ ಶ್ರೀನಗರದ ಲಾಲ್ ಚೌಕ್‌ನಲ್ಲಿ ಮೊಳಗಿತು ವಂದೇ ಮಾತರಂ…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:4 × four =
Remember me
