ಚೆನ್ನೈ:ಸೇನೆಗಳ ಮುಖಂಡ ಬಿಪಿನ್‌ ರಾವತ್‌ ಅವರು ಸೇರಿದಂತೆ 13 ಮಂದಿ ಹೆಲಿಕಾಪ್ಟರ್‌ ಅಪಘಾತದಿಂದ ದಾರುಣವಾಗಿ ಮೃತಪಟ್ಟ ಬಳಿಕ, ಘಟನೆಗೆ ಸಂಬಂಧಿಸಿದಂತೆ ಒಂದೊಂದೇ ವಿಷಯಗಳು ಹೊರಬರುತ್ತಿವೆ.ಈ ವೇಳೆ ಅಪಘಾತ ನಡೆದ ಸ್ಥಳದಲ್ಲಿಯೇ ಆ ಸಮಯದಲ್ಲಿ ತಾವು ಇದ್ದಿರುವುದಾಗಿ ಹೇಳಿಕೊಂಡಿರುವ ಪ್ರತ್ಯಕ್ಷರ್ಶಿಯೊಬ್ಬರು ಘಟನೆಯ ವಿವರವನ್ನು ತಿಳಿಸುತ್ತಾ ಕಣ್ಣೀರಾಗಿದ್ದಾರೆ.
ಪ್ರತ್ಯಕ್ಷದರ್ಶಿ ಶಿವಕುಮಾರ್‌ ಹೇಳಿದ್ದು ಹೀಗೆ:
‘ತಮಿಳುನಾಡು ನೀಲಗಿರಿ ಅರಣ್ಯ ಪ್ರದೇಶದ ಬಳಿ ಹೆಲಿಕಾಪ್ಟರ್‌ ಧರೆಗೆ ಉರುಳಿದ್ದ ಸಮಯದಲ್ಲಿ ಸಮೀಪ ಇರುವ ಚಹದ ಎಸ್ಟೇಟ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಹೆಲಿಕಾಪ್ಟರ್‌ ಭಯಂಕರ ಶಬ್ದ ಮಾಡುತ್ತಾ ಬೆಂಕಿಯುಂಡೆಯಂತೆ ಭೂಮಿಗೆ ಅಪ್ಪಳಿಸಿದ್ದ ಸಮಯದಲ್ಲಿ ನಾವೆಲ್ಲಾ ಕೆಲಸಗಾರರು ಅಲ್ಲಿಯೇ ಇದ್ದೆವು. ಕೂಡಲೇ ಸ್ಥಳಕ್ಕೆ ಧಾವಿಸಿದೆವು. ಆ ಸಮಯದಲ್ಲಿ ಬಿಪಿನ್‌ ರಾವತ್‌ ಅವರ ಸ್ಥಿತಿ ಚಿಂತಾಜನಕವಾಗಿತ್ತು. ಆದರೆ ಅವರು ಯಾರು, ಎಷ್ಟು ದೊಡ್ಡ ವ್ಯಕ್ತಿ ಎಂಬುದು ತಿಳಿದಿರಲಿಲ್ಲ. ಆದರೆ ಅವರು ಜೀವಂತ ಆಗಿರುವುದನ್ನು ನಾನು ನೋಡಿದ್ದೆ.
ಅವರ ಪಕ್ಕದಲ್ಲಿಯೇ ಮೂವರ ಮೃತದೇಹವನ್ನು ಕಂಡೆ. ಜೀವಂತ ಇರುವ ವ್ಯಕ್ತಿ (ಅವರು ರಾವತ್‌ ಎಂದು ತಿಳಿದದ್ದು ನಂತರದಲ್ಲಿ) ನೀರು ಬೇಕು ಎಂದು ಇಂಗ್ಲಿಷ್‌ನಲ್ಲಿ ಕೇಳುತ್ತಿದ್ದರು. ಬೆಡ್‌ಶೀಟ್‌ವೊಂದರಲ್ಲಿ ಅವರು ಸಿಲುಕಿದ್ದರು. ಆ ಸಮಯದಲ್ಲಿ ನೀರನ್ನು ತರಲು ಹೋಗುವುದಕ್ಕಿಂತ ಮುಖ್ಯವಾಗಿ ಅವರನ್ನು ಅಲ್ಲಿಂದ ತಪ್ಪಿಸಬೇಕಿತ್ತು. ನಾವೆಲ್ಲಾ ಸೇರಿ ಸಾಹಸಪಟ್ಟು ಅವರ ರಕ್ಷಣೆ ಮಾಡಿದೆವು. ಆದರೆ ಅಷ್ಟರಲ್ಲಿ ಸೇನಾ ಸಿಬ್ಬಂದಿ ಬಂದು ಕರೆದುಕೊಂಡು ಹೋದರು. ಕೆಲವರು ಪ್ರಪಾತದಲ್ಲಿ ಬಿದ್ದಿದ್ದರು. ಅವರನ್ನು ಮೇಲಕ್ಕೆ ಎತ್ತಲು ನಮಗೆ ಸಾಧ್ಯವಾಗಲಿಲ್ಲ.
ಮೂರ್ನಾಲ್ಕು ಗಂಟೆ ಬಳಿಕ ಸೇನೆಯವರೊಬ್ಬರು ನನ್ನ ಬಳಿಗೆ ಬಂದು, ನೀನು ಮಾತನಾಡಿದ್ದು ರಕ್ಷಣಾ ಪಡೆಗಳ ಮುಖ್ಯಸ್ಥ ಬಿಪಿನ್‌ ರಾವತ್‌ ಅವರೊಂದಿಗೆ ಎಂದು ಫೋಟೋ ತೋರಿಸಿದಾಗಲೇ ನನಗೆ ತಿಳಿದದ್ದು. ಅವರು ನೀರು ಕೇಳಿದಾಗ ಕೊಡಲು ಆಗಲಿಲ್ಲವಲ್ಲ ಎಂದು ಇನ್ನೂ ನೋವಾಗುತ್ತಿದೆ, ಸಂಕಟಪಡುತ್ತಿದ್ದೇನೆ. ರಾತ್ರಿಪೂರ್ತಿ ನಿದ್ದೆ ಮಾಡಲಿಲ್ಲ. ಆದರೆ ಆ ಸಮಯದಲ್ಲಿ ನೀರಿಗಿಂತ ಮುಖ್ಯ ಅವರನ್ನು ಅಲ್ಲಿಂದ ಪಾರು ಮಾಡುವುದಾಗಿತ್ತು’ ಎಂದು ಶಿವಕುಮಾರ್‌ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬದುಕುಳಿದ ಏಕೈಕ ಯೋಧ ಬೆಂಗಳೂರಿಗೆ ಶಿಫ್ಟ್‌: ಸಾವಿನ ದವಡೆಯಿಂದ ಆಗಲೂ ಪಾರಾಗಿದ್ದ, ಈಗಲೂ ಗೆದ್ದು ಬರುತ್ತಾನೆ ಎಂದ ತಂದೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − two =
Remember me
