ಬೀಜಿಂಗ್‌:ಸುಂದರವಾದ ರೆಪ್ಪೆ ಯಾವ ಹೆಣ್ಣಿಗೆ ತಾನೇ ಇಷ್ಟವಿಲ್ಲ? ಅದಕ್ಕಾಗಿಯೇ ರೆಪ್ಪೆಗೂ ಬಗೆಬಗೆಯ ಅಲಂಕಾರಗಳು ಬಂದಿವೆ. ರೆಪ್ಪೆ ಸುಂದರವಾಗಿ ಕಾಣಿಸಬೇಕು ಎಂದು ಅದು ಮಾಮೂಲು ಸೈಜ್‌ಗಿಂತ ತುಸು ದೊಡ್ಡದಿರಬೇಕು ಎಂದು ಬಯಸುವವರೇ ಹೆಚ್ಚು.
ಸಾಮಾನ್ಯವಾಗಿ ಎಲ್ಲರ ರೆಪ್ಪೆ ಕಾಲು ಇಂಚಿನಷ್ಟು ಇರುತ್ತದೆ. ಇದನ್ನು ಒಂದುಚೂರು ಉದ್ದ ಹೆಚ್ಚಿಸಿಕೊಳ್ಳಲು ಕೃತಕ ರೆಪ್ಪೆ ಅಳವಡಿಸಿಕೊಳ್ಳುವವರು ಇದ್ದಾರೆ. ನೈಸರ್ಗಿಕವಾಗಿಯೇ ರೆಪ್ಪೆ ಉದ್ದವಿದ್ದು, ಸುಂದರ ಆಕೃತಿ ಹೊಂದುವವರೂ ಇದ್ದಾರೆ. ಹಾಗೆಂದು ಒಂದು ಇಂಚಿನ ಬದಲು ಎಂಟು ಇಂಚು ರೆಪ್ಪೆ ಇದ್ದರೆ?
ಚೀನಾದ ಮಹಿಳೆಯೊಬ್ಬಳಿಗೆ ಎಂಟು ಇಂಚು ರೆಪ್ಪೆ ಇದ್ದು, ಅದೀಗ ಗಿನ್ನೆಸ್‌ ದಾಖಲೆಯಲ್ಲಿ ಸೇರ್ಪಡೆಯಾಗಿದೆ. ಯು ಜಿಯೋಂಕ್ಸಿಯಾ ಎಂಬ ಮಹಿಳೆಯ ಈ ರೆಪ್ಪೆ ವಿಶ್ವದಲ್ಲೇ ಅತ್ಯಂತ ಉದ್ದ ರೆಪ್ಪೆ ಎಂದು ಹೆಗ್ಗಳಿಕೆಗೆ ಪಾತ್ರವಾಗಿದ್ದು, ವಿಶ್ವ ದಾಖಲೆಯ ವಿಡಿಯೋವನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಶೇರ್​ ಮಾಡಲಾಗಿದೆ.
ಅಷ್ಟಕ್ಕೂ ಹೀಗೆ ರೆಪ್ಪೆ ದಿನೇ ದಿನೇ ಬೆಳೆಯುತ್ತಿರುವುದಕ್ಕೆ ಕಾರಣವೇನು ಎಂದು ಬಹಳ ಯೋಚನೆ ಮಾಡಿದ್ದಳಂತೆ ಜಿಯೋಂಕ್ಸಿಯಾ. ನಂತರ ತಿಳಿದದ್ದು, ಚೀನಾದ ಪರ್ವತ ಶ್ರೇಣಿಯಲ್ಲಿ 480 ದಿನಗಳನ್ನು ಈಕೆ ಕಳೆದಿದ್ದು, ನನಗೆ ಪರ್ವತದ ಮೇಲಿರುವ ಬುದ್ಧನೇ ಈ ಉಡುಗೊರೆ ನೀಡಿರಲಿಕ್ಕೆ ಸಾಧ್ಯ. ಇಲ್ಲದೇ ಹೋದರೆ ಇಂಥದ್ದೊಂದು ಅದ್ಭುತ ಆಗಲು ಸಾಧ್ಯವಾಗುತ್ತಿರಲಿಲ್ಲ ಎಂದಿದ್ದಾಳೆ. ಪರ್ವತದಲ್ಲಿನ ಹವಾಮಾನದ ಕಾರಣದಿಂದಾಗಿ ಈ ರೀತಿ ಆಗಿರಲಿಕ್ಕೆ ಸಾಧ್ಯ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಜಿಯೋಂಕ್ಸಿಯಾ ಮಾತ್ರ ಎಲ್ಲರೂ ಬುದ್ಧನ ಕರುಣೆ ಎಂದಿದ್ದಾಳೆ.
ಇಲ್ಲಿದೆ ನೋಡಿ ವಿಡಿಯೋ


A post shared by Guinness World Records (@guinnessworldrecords)

VIDEO: ಪಾಕ್‌ನಲ್ಲಿ ಕತ್ತೆಗಳ ಸಂಖ್ಯೆ ದಿಢೀರ್‌ ಹೆಚ್ಚಳ: ಪ್ರಧಾನಿ ಇಮ್ರಾನ್‌ಗೆ ಪ್ರತಿಪಕ್ಷಗಳಿಂದ ಭಾರಿ ಮುಜುಗರ

ಐಟಿಐ, ಡಿಪ್ಲೋಮಾ ಪದವೀಧರರಿಗೆ ಮೈಸೂರಲ್ಲಿ ಅವಕಾಶ: 45 ಹುದ್ದೆಗಳಿಗೆ ಆಹ್ವಾನ- ಎರಡೇ ದಿನ ಬಾಕಿ

ಶಾಸಕನಿಗೆ ಹಾಕಿದ್ರು ಸೇಬಿನ ಹಾರ: ಕರೊನಾ ಲೆಕ್ಕಿಸದೇ ಹಣ್ಣು ತಿನ್ನಲು ಮುಗಿಬಿದ್ರು ಜನ- ವಿಡಿಯೋ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
