ನವದೆಹಲಿ:ಫೇಸ್‌ಬುಕ್‌ನಲ್ಲಿ 29 ವರ್ಷದ ಯುವಕನ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿದ ನಂತರ ಮಹಿಳೆಯೊಬ್ಬಳು ತನ್ನ ಗಂಡನ ಹತ್ಯೆಗೆ ಸುಪಾರಿ ಕೊಟ್ಟು, ಪತಿಯ ಕೊಲೆ ಮಾಡಿಸಿ ಸಿಕ್ಕಿಬಿದ್ದಿದ್ದಾಳೆ. 25 ವರ್ಷ ಸಂಸಾರ ಮಾಡಿ ಇಬ್ಬರು ಮದುವೆಯ ವಯಸ್ಸಿಗೆ ಬಂದಿರುವ ಮಕ್ಕಳ ತಾಯಿ ಇಂಥದ್ದೊಂದು ಕೃತ್ಯ ಎಸಗಿದ್ದು, ಈ ಘಟನೆ ದೆಹಲಿಯಲ್ಲಿ ನಡೆದಿದೆ.
ಗಂಡನನ್ನು ಕೊಲ್ಲಲು ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟಾಕೆಯ ಹೆಸರು ಜೀಬಾ ಖುರೇಷಿ. 45 ವರ್ಷದ ಈಕೆಗೆ ಶೋಯೆಬ್‌ ಎಂದು 29 ವರ್ಷದ ಯುವಕನ ಪರಿಚಯ ಫೇಸ್‌ಬುಕ್‌ನಲ್ಲಿ ಆಗಿದೆ. ಇಬ್ಬರೂ ಪ್ರೇಮಕ್ಕೆ ಸಿಲುಕಿದಾಗ ಮಹಿಳೆ ಪತಿಯನ್ನೇ ಕೊಲ್ಲಲು ಸಂಚು ರೂಪಿಸಿದಳು. ಈಕೆ ಮತ್ತು ಪ್ರಿಯಕರ ಸೇರಿ ವಿನಿತ್ ಗೋಸ್ವಾಮಿ ಎಂಬಾತನಿಗೆ ಸುಪಾರಿ ಕೊಟ್ಟಿದ್ದಾರೆ. ಈಗ ಮೂವರೂ ಪೊಲೀಸರ ಅತಿಥಿಗಳು! ಇವರ ಕುಕೃತ್ಯಕ್ಕೆ ಬಲಿಯಾದವರು ಮೊಯಿನುದ್ದೀನ್ ಖುರೇಷಿ.
ವರ್ಕ್‌ಶಾಪ್ ಮಾಲೀಕರಾಗಿದ್ದ ಮೊಯಿನುದ್ದೀನ್ ಖುರೇಷಿ ಅವರನ್ನು ಕಳೆದ ಮೇ 17 ರಂದು ಗುಂಡಿಕ್ಕಿ ಸಾಯಿಸಲಾಗಿತ್ತು. ಈ ಕೊಲೆಯ ಪ್ರಕರಣವನ್ನು ಭೇದಿಸಲು ಪೊಲೀಸರು 500ಕ್ಕೂ ಹೆಚ್ಚು ಸಿಸಿಟಿವಿ ವಿಡಿಯೋ ಪರಿಶೀಲನೆ ಮಾಡಿದ್ದರು. ಕೊನೆಗೆ ತನಿಖೆಯಿಂದ ಪತ್ನಿ ಸಿಕ್ಕಿಬಿದ್ದಿದ್ದಾಳೆ.
ತನ್ನ ಗಂಡ ಮದ್ಯ ಸೇವಿಸಿ ಕಿರುಕುಳು ಕೊಡುತ್ತಿದ್ದ. ಆದ್ದರಿಂದ ಆತನ ಕೊಲೆಗೆ ಮುಂದಾದೆ. ಎರಡು ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಶೋಯೇಬ್‌ನ ಸಹಾಯ ಪಡೆದೆ ಎಂದು ಬಾಯಿ ಬಿಟ್ಟಿದ್ದಾಳೆ.
ಲವ್​ ಜಿಹಾದ್​ಗೆ ಉಡುಪಿ ಯುವತಿ ಬಲಿ! ದೈಹಿಕ ಸಂಪರ್ಕ ಬೆಳೆಸಿ ಮತಾಂತರಕ್ಕೆ ಪ್ರಯತ್ನ- ಪತ್ನಿಯೂ ಸಾಥ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × four =
Remember me
