ನವದೆಹಲಿ:ಪ್ರೇಮ ಕುರುಡು ಎನ್ನುವ ಗಾದೆಯಿದೆ. ಈ ಮಾತನ್ನು ಹಿರಿಯರು ಸುಖಾಸುಮ್ಮನೆ ಮಾಡಿದ್ದಲ್ಲ. ಅಂಥದ್ದೇ ಒಂದು ಕುರುಡು ಪ್ರೀತಿಯಲ್ಲಿ ಮುಳುಗಿದ ಬೆಂಗಳೂರು ಯುವಕನ ಕಥೆ ಇದು.
ಈತಿನ ಹೆಸರು ಸಲ್ಮಾನ್​. 25 ವರ್ಷದ ಆಸುಪಾಸಿನ ಈ ಯುವಕನಿಗೆ ಫೇಸ್​ಬುಕ್​ನಲ್ಲಿ 21 ವರ್ಷದ ಯುವತಿಯ ಪರಿಚಯವಾಯ್ತು. ಯುವಕ ಬೆಂಗಳೂರಿನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರೆ, ಯುವತಿ ಇರೋದು 2 ಸಾವಿರ ಕಿ.ಮೀ ದೂರ ಇರುವ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಲಖೀಂಖೇರಿಯಲ್ಲಿ.
ಮೊದಲು ಫ್ರೆಂಡ್​ ರಿಕ್ವೆಸ್ಟ್​, ನಂತರ ಮಾತುಕತೆ, ನಂತರ ಫೇಸ್​ಬುಕ್​ನಲ್ಲಿಯೇ ಸಲುಗೆ, ಸಿಹಿಸಿಹಿ ಮಾತುಗಳು, ಫೋಟೋಗಳ ಶೇರಿಂಗ್​…. ಹೀಗೆ ಇವರ ಕಥೆ ಮುಂದುವರೆಯಿತು. ಇಬ್ಬರಿಗೂ ಫೇಸ್​ಬುಕ್​ ಚಾಟ್​ ಮೂಲಕವೇ ಸಲುಗೆಯೂ ಬೆಳೆಯಿತು.
ಯುವಕ ಆ ಯುವತಿಯ ನೆನಪಿನಲ್ಲಿಯೇ ತೇಲಿಹೋದ. ಆಕೆ ಅದೇನೇನು ಮಾತುಗಳಿಂದ ಮರುಳು ಮಾಡಿದ್ದಳೋ ಗೊತ್ತಿಲ್ಲ, ಒಟ್ಟಿನಲ್ಲಿ ಆಕೆಯ ಬಣ್ಣಬಣ್ಣದ ಮಾತುಗಳಿಗೆ ಈ ಹುಡುಗ ತೇಲಿಹೋದದ್ದಂತೂ ನಿಜ. ಯುವತಿಯೂ ತನ್ನಂತೆಯೇ ತನ್ನನ್ನು ತುಂಬಾ ಇಷ್ಟಪಟ್ಟು ಬಿಟ್ಟಿದ್ದಾಳೆ ಎಂದುಕೊಂಡ ಸಲ್ಮಾನ್​. ಆಕೆಯೂ ಹಾಗೆಯೇ ಮಾತನಾಡಿರಲಿಕ್ಕೆ ಸಾಕು. ಫೇಸ್​ಬುಕ್​ನಲ್ಲಿ ತಾನೆ? ಏನು ಹೇಳಿದರೂ ಕೇಳೋರ್ಯಾರು? ದೂರದ ಬೆಂಗಳೂರಿನಲ್ಲಿ ಇರುವ ಹುಡುಗ ತನ್ನ ಬಳಿ ಅಂತೂ ಬರಲಿಕ್ಕೆ ಸಾಧ್ಯವಿಲ್ಲ ಎಂದುಕೊಂಡ ಯುವತಿ ಈತನಿಗೆ ಕನಸು ಕಾಣಿಸಿಬಿಟ್ಟಿದ್ದಾಳೆ.
ಈ ಪ್ರೇಮಿ ಮಾತ್ರ ಆಕೆಗೆ ಸೋತುಹೋದ. ಅದೊಂದು ದಿನ ಆಕೆಯ ಹುಟ್ಟುಹಬ್ಬ ಬಂದಿದೆ. ತನ್ನ ಪ್ರೀತಿಯ ನಿವೇದನೆಗೆ ಹುಟ್ಟುಹಬ್ಬವೇ ಸೂಕ್ತ ಎಂದುಕೊಂಡ ಯುವಕ, ಆಕೆಯ ಮನೆಗೆ ಹೋಗುವ ನಿರ್ಧಾರಕ್ಕೆ ಬಂದ. ಆಕೆಗೆ ಇಷ್ಟವಾಗಿರುವ ಚಾಕಲೇಟ್​, ಡ್ರೆಸ್​, ಗಿಫ್ಟ್​ ಎಲ್ಲವನ್ನೂ ತೆಗೆದುಕೊಂಡು ಹಿಂದೆ ಮುಂದೆ ನೋಡದೇ ಲಖನೌಗೆ ವಿಮಾನದ ಮೂಲಕ ಪ್ರಯಾಣ ಬೆಳೆಸಿ ಅಲ್ಲಿಂದ ಆಕೆಯ ಮನೆಗೂ ಹೋಗಿದ್ದಾನೆ (ಇದರ ಅರ್ಥ ತನ್ನ ಮನೆಯ ವಿಳಾಸವನ್ನೂ ಆಕೆ ನೀಡಿದ್ದಾಳೆ ಎಂದಾಯ್ತು!)
ಹುಡುಗಿಯ ಮನೆಗೆ ಹೋಗಿ ತನ್ನನ್ನು ಪರಿಚಯ ಮಾಡಿಕೊಂಡಿದ್ದಾನೆ. ಯಾರೋ ಒಬ್ಬ ಅಪರಿಚಿತ ವ್ಯಕ್ತಿಯನ್ನು ನೋಡಿದ ಯುವತಿಯ ಕುಟುಂಬದವರು ಈತನನ್ನು ಹೋಗುವಂತೆ ಹೇಳಿದ್ದಾರೆ. ಆದರೆ ಸಲ್ಮಾನ್​ ಮಾತ್ರ ಕುಟುಂಬದವರ ಎದುರು ತನ್ನ ಪ್ರೇಮದ ಕುರಿತು ಹೇಳಿದ್ದಾನೆ…. ಅಷ್ಟೇ… ಯುವತಿಯ ಪಾಲಕರು ಆತನಿಗೆ ಕಪಾಳಮೋಕ್ಷ ಮಾಡಿ, ಪೊಲೀಸರನ್ನು ಕರೆಸಿದ್ದಾರೆ!
ಪೊಲೀಸರು ಸ್ಥಳಕ್ಕೆ ಧಾವಿಸಿ ಯುವಕನನ್ನು ಬಂಧಿಸಿಕೊಂಡು ಹೋದರು. ಯುವತಿ ಮಾತ್ರ ಎಲ್ಲಿಯೂ ಪ್ರತ್ಯಕ್ಷ ಆಗಲೇ ಇಲ್ಲ. ಯುವಕ ತನ್ನ ಪ್ರೇಮ ಕಥನವನ್ನು ಎಷ್ಟು ಹೇಳಲು ಪ್ರಯತ್ನಿಸಿದರೂ ಆಕೆಯ ಪಾಲಕರಾಗಲೀ, ಪೊಲೀಸರಾಗಲೀ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ. ಯುವಕನನ್ನು ದರದರ ಎಳೆದುಕೊಂಡು ಹೋಗಿ ಎರಡು ರಾತ್ರಿ ಪೊಲೀಸ್​ ಠಾಣೆಯಲ್ಲಿ ಇರಿಸಿಕೊಂಡರು.
ನಂತರ ಆತನನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಇನ್ನುಮುಂದೆ ಇತ್ತ ಹೆಜ್ಜೆ ಇಡದಂತೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಹುಡುಗಿಯ ಜತೆ ಕಳೆಯಲು ಬಯಸಿದ ಈ ಪ್ರೇಮಿ ಅಂತೂ ಎರಡು ರಾತ್ರಿ ಪೊಲೀಸ್​ ಠಾಣೆಯಲ್ಲಿ ಕಳೆಯುವಂತಾಯಿತು.
ಜಿಮ್​ನಲ್ಲಿ ಗಂಟೆಗಟ್ಟಲೆ ಕಳೆದರೂ ಸಣ್ಣ ಆಗುತ್ತಿಲ್ಲವಾ.. ? ನೀವು ಮಾಡುತ್ತಿರೋ ತಪ್ಪೇನು ಗೊತ್ತಾ…

ತವರಿಗೆ ಹೋದ ವಧುವಿಗಾಗಿ ಇತ್ತ ವರ ಕಾಯುತ್ತಿದ್ದರೆ, ಅತ್ತ ಆಕೆ ಲವರ್​ ಜತೆ ಎಸ್ಕೇಪ್​!

ಹಕ್ಕಿಜ್ವರದ ಭೀತಿಯಲ್ಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ: ಶುರುವಾಗಿದೆ ಟೆನ್ಷನ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen + 12 =
Remember me
