ತಿರುವನಂತಪುರ:ಕೇರಳದ ಕಾಲೇಜೊಂದರಲ್ಲಿ ಜೀನ್ಸ್‌ಪ್ಯಾಂಟ್​ ಹಾಕುವುದನ್ನು ಬ್ಯಾನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನಾರ್ಥವಾಗಿ ಯುವತಿಯರು ಲುಂಗಿ ತೊಟ್ಟುಕೊಂಡು ಬಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಫೋಟೋ ಒಂದು ಕೆಲವು ದಿನಗಳಿಂದ ಭಾರಿ ಸದ್ದು ಮಾಡುತ್ತಿದೆ.
ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದ್ದ ಶಾಹಿದ್ ಸಿದ್ದಿಕಿ ಎನ್ನುವವರು, ಯುವತಿಯರ ಈ ಪ್ರತಿಭಟನೆಯಿಂದ ಯಾವ ಕ್ರಮ ಕೈಗೊಳ್ಳಬೇಕೆಂದು ಕಾಲೇಜು ಗೊಂದಲದಲ್ಲಿದೆ ಎಂದಿದ್ದರು. ಈ ಪೋಸ್ಟ್​ಗೆ ಹಲವಾರು ರೀತಿಯ ಕಮೆಂಟ್​ಗಳು ಬಂದಿದ್ದವು. ಜತೆಗೆ ಕಾಲೇಜಿನ ವಿರೋಧವಾಗಿ ಕೂಗು ಕೂಡ ಕೇಳಿಬಂದಿದ್ದವು. ಈಗಲೂ ಈ ಪೋಸ್ಟ್​ ಜಾಲತಾಣದಲ್ಲಿ ಹರಿದಾಡುತ್ತಲೇ ಇದೆ.
ಕಾಲೇಜಿನ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಲೇ ಇದೀಗ ಈ ಫೋಟೋದ ಅಸಲಿಯತ್ತನ್ನು ಬಹಿರಂಗಪಡಿಸಲಾಗಿದೆ. ಗೂಗಲ್​ನ ರಿವರ್ಸ್​ ಇಮೇಜ್​ ಬಳಸುವ ಮೂಲಕ ಫೋಟೋದ ನಕಲಿ ಹಾಗೂ ಅಸಲಿಯತ್ತನ್ನು ಪರೀಕ್ಷಿಸಬಹುದಾಗಿದೆ.
ಇದನ್ನೂ ಓದಿ:ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!
ಹೀಗೆ ಮಾಡಿದಾಗ ಕಂಡುಬಂದದ್ದು ಏನೆಂದರೆ, ಈ ಫೋಟೋ ಅಸಲಿಯೇ. ಫೋಟೋದಲ್ಲಿ ಕೆಲ ಯುವತಿಯರು ಲುಂಗಿ ತೊಟ್ಟು ನಿಂತಿರುವುದೂ ಅಸಲಿಯೇ. ಆದರೆ ನಕಲಿ ಯಾವುದು ಎಂದರೆ ಟ್ವಿಟರ್​ನಲ್ಲಿ ಮಾಹಿತಿ ನೀಡಿರುವಂತೆ ಇದು ಕೇರಳವೂ ಅಲ್ಲ, ಇವರು ಕೇರಳ ಕಾಲೇಜಿನ ಯುವತಿಯರೂ ಅಲ್ಲ, ಬ್ಯಾನ್​ ಆಗಿದೆ ಎನ್ನಲಾದ ಜೀನ್ಸ್​ ವಿರುದ್ಧವಾಗಿ ಇವರು ಪ್ರತಿಭಟನೆಯನ್ನೂ ಮಾಡುತ್ತಿಲ್ಲ!
ಹೌದು! ಫೋಟೋ ಹಂಚಿಕೊಂಡು ನೀಡಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಅಸಲಿಯತ್ತು ಏನೆಂದರೆ, ಈ ಫೋಟೋ ಸುಮಾರು 5 ವರ್ಷ ಹಳೆಯದು. ಇದನ್ನು ತೆಗೆದಿದ್ದು ಅಮೆರಿಕದಲ್ಲಿ! ಚಿತ್ರದಲ್ಲಿ ಇರುವವರು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಯುವತಿಯರು.
ಇವರೆಲ್ಲರೂ ತೆಲುಗು ಚಿತ್ರನಟ ಮಹೇಶ್ ಬಾಬು ಅವರ ಅಭಿಮಾನಿಗಳು. ಅಮೆರಿಕದಲ್ಲಿ ನೆಲೆಸಿದ್ದರೂ ತಾವು ಇನ್ನೂ ಅವರ ಅಭಿಮಾನಿಗಳು ಎಂದು ತೋರಿಸುವ ಸಲುವಾಗಿ ಎಲ್ಲರೂ ಲುಂಗಿ ಉಟ್ಟಿಕೊಂಡು ಪೋಸ್​ ಕೊಟ್ಟಿದ್ದಾರೆ ಅಷ್ಟೇ. ಈ ಫೋಟೋ ಅನ್ನು ಓರ್ವ ಯುವತಿ ಮೊದಲು ಜಾಲತಾಣದಲ್ಲಿ ಶೇರ್​ ಮಾಡಿದ್ದು 2015ರ ಆಗಸ್ಟ್‌ 11ರಂದು.
ಯುವತಿಯರ ಮೇಲೆ ಸೂಪರ್ ಸ್ಟಾರ್‌ ಲುಂಗಿ ಎಫೆಕ್ಟ್‌ ಎಂಬ ಶೀರ್ಷಿಕೆಯನ್ನು ಕೊಟ್ಟು ಇದನ್ನು ಶೇರ್​ ಮಾಡಲಾಗಿದೆ. ಜತೆಗೆ ಮಹೇಶ್‌ ಬಾಬುಗೆ ಬೆಂಬಲ ಸೂಚಿಸಲು ತಾವೂ ಲುಂಗಿ ಧರಿಸಿರುವುದಾಗಿಯೂ ಯುವತಿಯರು ಹೇಳಿಕೊಂಡಿದ್ದಾರೆ.
ಬಾರ್​ನಿಂದ ನಗರಸಭೆ ಕಾಂಗ್ರೆಸ್​ ಸದಸ್ಯ ಕಿಡ್ನಾಪ್​: ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − four =
Remember me
