ನವದೆಹಲಿ:ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮುಕೇಶ್ ಅಂಬಾನಿ ಅವರಿಗೆ ಕಳೆದ ವಾರ ಮೊಮ್ಮಗು ಹುಟ್ಟಿದೆ. ಈ ಸುದ್ದಿ ಜನಪ್ರಿಯತೆ ಗಳಿಸಿರುವ ಹಿಂದೆಯೇ, ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೂ ಇದರೊಂದಿಗೆ ಥಳಕು ಹಾಕಿಕೊಂಡು ಫೋಟೋ ಒಂದು ವೈರಲ್​ ಆಗಿದೆ.
ಅದೇನೆಂದರೆ ಆಸ್ಪತ್ರೆಗೆ ಪ್ರಧಾನಿ ಮೋದಿ ಅವರು ಭೇಟಿ ಕೊಟ್ಟಿರುವ ಫೋಟೋ. ಅವರ ಸಮೀಪವೇ ಮುಕೇಶ್​ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ನಿಂತಿರುವ ಫೋಟೋ ಇದು.
ಈ ಫೋಟೋ ಇದೀಗ ವೈರಲ್​ ಆಗಿದ್ದು, ಮೋದಿಯವರು ಅಂಬಾನಿಯವರ ಮೊಮ್ಮಗುವನ್ನು ನೋಡಲು ಆಸ್ಪತ್ರೆಗೆ ಭೇಟಿ ಕೊಟ್ಟಿದ್ದರು ಎಂಬ ಕ್ಯಾಪ್ಷನ್​ ಸೇರಿಸಲಾಗಿದೆ. ಅತ್ತ ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ಎರಡು ವಾರಗಳಿಂದ ರೈತರು ಪ್ರತಿಭಟನೆ ನಿರತರಾಗಿದ್ದರೆ, ಇತ್ತ ಪ್ರಧಾನಿ ಮೋದಿಯವರು ಅಂಬಾನಿಯ ಮಗುವನ್ನು ನೋಡಲು ಆಸ್ಪತ್ರೆಗೆ ಹೋಗಿದ್ದಾರೆ ಎಂಬ ಟೀಕೆಯ ಜತೆ ಈ ಫೋಟೋ ವೈರಲ್​ ಆಗಿದೆ.
ಪ್ರಧಾನಿ ಮೋದಿಯವರಿಗೆ ರೈತರ ಸಂಕಷ್ಟಗಳು, ಅವರಿಗೆ ಪರಿಹಾರ ನೀಡುವುದು ಬೇಕಿಲ್ಲ. ಸಿರಿವಂತ ಅಂಬಾನಿ ಮೊಮ್ಮಗು ನೋಡಲು ವೇಳೆ ಇದೆ ಎಂದೆಲ್ಲಾ ಕಮೆಂಟ್​ಗಳು ಹರಿದಾಡುತ್ತಿವೆ.
ಆದರೆ ಫ್ಯಾಕ್ಟ್​ಚೆಕ್​ ಮೂಲಕ ಈಗ ಅಸಲಿಯತ್ತು ಬಯಲಾಗಿದೆ. ಅದೇನೆಂದರೆ ಮೋದಿಯವರು ಅಂಬಾನಿಯವರ ಮೊಮ್ಮಗುವನ್ನು ನೋಡಲು ಹೋಗಿರುವ ಫೋಟೋ ಇದಲ್ಲ. ಬದಲಿಗೆ ಉದ್ದೇಶಪೂರ್ವಕವಾಗಿ ಅವರ ಹೆಸರಿಗೆ ಮಸಿಬಳಿಯುವ ಹಿನ್ನೆಲೆಯಲ್ಲಿ ಈಗ ಫೋಟೋ ಹರಿಬಿಡಲಾಗಿದೆ ಎಂಬ ಸತ್ಯವು ಬಯಲಾಗಿದೆ.
ಅಸಲಿಗೆ ಇದು 2014ರ ಫೋಟೋ. ಈ ಫೋಟೋವನ್ನು ಮುಂಬೈನಲ್ಲಿ 2014ರಲ್ಲಿ ತೆಗೆಯಲಾಗಿದೆ. ಅಂದು ಉದ್ಘಾಟನೆಗೊಂಡಿದ್ದ ರಿಯಲನ್ಸ್​ ಆಸ್ಪತ್ರೆಯ ಕಾರ್ಯಕ್ರಮಕ್ಕೆ ಭೇಟಿ ಕೊಟ್ಟ ಚಿತ್ರ ಇದಾಗಿದೆ. ಅಂದು ಆಸ್ಪತ್ರೆಯ ಉದ್ಘಾಟನೆಯನ್ನು ನರೇಂದ್ರ ಮೋದಿ ಮಾಡಿದ್ದರು. ಆಗ ತೆಗೆದಿರುವ ಫೋಟೋ ಇದು.
ಅಮ್ಮ ದಾರಿತಪ್ಪಿದ್ದಾಳೆ, ನನ್ನ ಮದುವೆ ಫಿಕ್ಸ್‌ ಆಗಿದ್ದು ಗೊಂದಲದಲ್ಲಿದ್ದೇನೆ, ಏನು ಮಾಡಲಿ?

ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!

ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 11 =
Remember me
