ಕಾಬುಲ್‌:ಅಘ್ಘಾನಿಸ್ತಾನದಲ್ಲೀಗ ತಾಲಿಬಾನಿಗಳದ್ದೇ ರಾಜ್ಯಭಾರ. ಇಲ್ಲಿಯವರೆಗೆ ಅವರು ಅಫ್ಘನ್‌ ಪ್ರಜೆಗಳ ಮೇಲೆ ನಡೆಸಿರುವ ಹಿಂಸೆ ಅಷ್ಟಿಷ್ಟಲ್ಲ, ಅದರಲ್ಲಿಯೂ ಹೆಣ್ಣುಮಕ್ಕಳು, ಮಹಿಳೆಯರ ಮೇಲೆ ನಡೆಸಿದ ಅತ್ಯಾಚಾರ, ಕ್ರೌರ್ಯ ಎಂಥ ಕಟುಕರ ಮೈನಡುಗಿಸುವಂಥದ್ದೇ. ಇಷ್ಟೆಲ್ಲಾ ಕ್ರೂರತನ ಮೆರೆದು ಕೊನೆಗೂ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದುಕೊಳ್ಳುವಲ್ಲಿ ಅವರು ಯಶಸ್ವಿಯಾಗಿದ್ದಾರೆ.
ಇದಾಗಲೇ ತಾಲಿಬಾನಿಗಳ ಕ್ರೌರ್ಯಕ್ಕೆ ಸಾಕ್ಷಿಯಾಗಿ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ರಕ್ಕಸರಿಗೆ ಅಫ್ಘನ್‌ ಪ್ರಜೆಗಳು ಅದೆಷ್ಟು ಭಯಭೀತರಾಗಿದ್ದಾರೆ ಎಂದರೆ ಪ್ರಾಣ ಉಳಿಸಿಕೊಳ್ಳಲು ಅಪಾಯಕಾರಿ ಕಾರ್ಯಕ್ಕೂ ಕೈಹಾಕಿರುವ ವಿಡಿಯೋಗಳು ಕೂಡ ಇದಾಗಲೇ ವೈರಲ್ ಆಗಿವೆ.
ಆದರೆ ಅಂಥದ್ದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದೇನೆಂದರೆ ಮುಸ್ಲಿಂ 13 ರಿಂದ 18 ವರ್ಷದ ಹೆಣ್ಣುಮಕ್ಕಳನ್ನು ಸೆಕ್ಸ್‌ ದಂಧೆಗಾಗಿ ತಾಲಿಬಾನಿಗಳು ಅವರನ್ನು ಹರಾಜು ಮಾಡುತ್ತಿರುವ ವಿಡಿಯೋ ಇದಾಗಿದೆ. ಮಹಿಳೆಯರಿಗೆ ಹಗ್ಗ ಕಟ್ಟಿ ಹರಾಜಿನ ಮೊತ್ತವನ್ನು ಕೂಗಲಾಗುತ್ತಿದೆ. ನಂತರ ಹೆಚ್ಚು ಹಣ ಹೇಳಿದವರಿಗೆ ಆ ಮಹಿಳೆಯನ್ನು ನೀಡುವ ವಿಡಿಯೋ ಇದಾಗಿದೆ.
ಈ ವಿಡಿಯೋ ಇಲ್ಲಿದೆ ನೋಡಿ…
https://twitter.com/Sourabh3507/status/1427199131244654602
ತಾಲಿಬಾನಿಗಳು ಇಂಥದ್ದೊಂದು ಕೃತ್ಯ ಎಸಗಿದರೂ ಅದೇನೂ ಅಚ್ಚರಿಯೂ ಅಲ್ಲ. ಆದರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ಈ ವಿಡಿಯೋ ಮಾತ್ರ ಅಫ್ಘಾನಿಸ್ತಾನದ್ದೂ ಅಲ್ಲ, ಅಲ್ಲಿರುವವರು ತಾಲಿಬಾನಿಗಳೂ ಅಲ್ಲ, ಅಷ್ಟೇ ಅಲ್ಲದೇ ಅಲ್ಲಿ ಇರುವ ಮಹಿಳೆಯರು ಹರಾಜಾಗುತ್ತಿರುವುದೂ ಅಲ್ಲ.
ಅಸಲಿಗೆ ಇದು ನಡೆದಿರುವುದು ಲಂಡನ್‌ನಲ್ಲಿ. 2014ರಲ್ಲಿ ಬೀದಿ ನಾಟಕ ಒಂದರಲ್ಲಿ ನಡೆದ ಅಣುಕು ಪ್ರದರ್ಶನದಲ್ಲಿ ಐಸಿಎಸ್‌ ಉಗ್ರರು ಹೇಗೆ ಮುಸ್ಲಿಂ ಹೆಣ್ಣುಮಕ್ಕಳನ್ನು ಹೇಗೆ ನಡೆಸಿಕೊಳ್ಳುತ್ತಿದ್ದಾರೆ, ಮುಸ್ಲಿಂ ಹೆಣ್ಣುಮಕ್ಕಳ ಪಾಡು ಯಾವ ಸ್ಥಿತಿಯಲ್ಲಿ ಇದೆ ಎಂಬ ಬಗ್ಗೆ ವಿವರಣೆ ನೀಡಿರುವ ದೃಶ್ಯವಿದು. ಬಿಬಿಸಿ ಈ ಸತ್ಯವನ್ನು ಬಹಿರಂಗಗೊಳಿಸಿದೆ. ಆದ್ದರಿಂದ ಸದ್ಯ ಅಫ್ಘಾನಿಸ್ತಾನದಲ್ಲಿ ಇಂಥ ಸ್ಥಿತಿ ಇಲ್ಲ ಎನ್ನಲಾಗಿದೆ.
ಅವರು ಕೊಂದರೆ ದೇವಿಯ ಮಡಿಲಲ್ಲಿ ಖುಷಿಯಿಂದ ಪ್ರಾಣ ಬಿಡುವೆ, ಅನ್ನ ಕೊಟ್ಟ ಅಫ್ಘಾನ್‌ ಬಿಟ್ಟು ಬರಲ್ಲ ಎಂದ ಅರ್ಚಕ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + five =
Remember me
