ನವದೆಹಲಿ:ಸಂಶೋಧಕರೆಲ್ಲರೂ ಕರೊನಾ ಸೋಂಕನ್ನು ನಿರ್ಮೂಲನ ಮಾಡಲು ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ತೊಡಗಿದ್ದರೆ, ಅದೇ ಇನ್ನೊಂದೆಡೆ ನಕಲಿ ಲಸಿಕೆ ಮಾರಾಟಗಾರರು ಒಂದು ಹೆಜ್ಜೆ ಮುಂದಡಿ ಇಟ್ಟಿರುವುದಾಗಿ ಇಂಟರ್​ಪೋಲ್​ ಎಚ್ಚರಿಕೆ ನೀಡಿದೆ.
ಇಂಗ್ಲೆಂಡ್‌ “ಫೈಜರ್‌’ ಲಸಿಕೆಗೆ ಅನುಮತಿಸಿದ ಬೆನ್ನಲ್ಲೇ ಇಂಟರ್‌ಪೋಲ್‌ ಈ ಎಚ್ಚರಿಕೆ ನೀಡಿದೆ. ಕ್ರಿಮಿನಲ್‌ ಪ್ರಕರಣಗಳ ಅಂತಾರಾಷ್ಟ್ರೀಯ ಪೊಲೀಸ್‌ ಸಂಸ್ಥೆ ‘ಇಂಟರ್‌ಪೋಲ್‌’ ಈ ಕುರಿತು ಎಚ್ಚರಿಕೆಯ ಸಂದೇಶ ರವಾನೆ ಮಾಡಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವಂತೆ ಹೇಳಿ 194 ಸದಸ್ಯ ರಾಷ್ಟ್ರಗಳಿಗೆ ಆರೆಂಜ್​ ನೋಟಿಸ್​ ಕೂಡ ನೀಡಿದೆ.
ಅಧಿಕೃತ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ ಜಾಹೀರಾತುಗಳ ಮೂಲಕ ಅಸಲಿ ಲಸಿಕೆಯನ್ನೇ ಹೋಲುವ ಲಸಿಕೆ ತಯಾರು ಮಾಡಿ ಜನರನ್ನು ಮರಳು ಮಾಡುವ ಹುನ್ನಾರ ನಡೆದಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆ.
ನಕಲಿ ಲಸಿಕೆ ವ್ಯವಹಾರ ನಡೆಸುವ ಸಂಬಂಧ ಕೆಲವೊಂದು ಸಂಘಟಿತ ಕ್ರಿಮಿನಲ್‌ ನೆಟ್‌ವರ್ಕ್‌ಗಳು ಇದಾಗಲೇ ತಯಾರಿ ನಡೆಸಿವೆ.
ಭೌತಿಕವಾಗಿ ಅಥವಾ ಆನ್‌ಲೈನ್‌ ಮೂಲಕ ಇವು ಜನರನ್ನು ಹಾದಿತಪ್ಪಿಸುವ ಎಲ್ಲಾ ಸಾಧ್ಯತೆಗಳು ಇವೆ. ಆದ್ದರಿಂದ ಪ್ರತಿಯೊಂದು ವೆಬ್​ಸೈಟ್​ಗಳ ಮೇಲೆ ಕಣ್ಣು ಇಡುವುದು ಅತ್ಯವಶ್ಯಕವಾಗಿದೆ. ನಕಲಿ ಉತ್ಪನ್ನಗಳು ಮಾರಾಟವಾಗುತ್ತಿವೆ ಎಂದು ಕಂಡುಬಂದ ತಕ್ಷಣ ಅವುಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಿದೆ. ಇಲ್ಲದಿದ್ದರೆ ಕರೊನಾ ಲಸಿಕೆ ಎಂದು ತಿಳಿಯುವ ಜನರ ಪ್ರಾಣಕ್ಕೆ ಅಪಾಯವಾಗಲಿದೆ ಎಂದು ಇಂಟರ್​ಪೋಲ್​ ತಿಳಿಸಿದೆ.
ಆನ್‌ಲೈನ್‌ ಲಸಿಕೆ ಮಾರಾಟ ಸಂಸ್ಥೆಗಳ ಜತೆ ಕೈಜೋಡಿಸಿ, ಜಾಗತಿಕವಾಗಿ ನಕಲಿ ಲಸಿಕೆ ಮಾರುತ್ತಿರುವ 3 ಸಾವಿರ ವೆಬ್‌ಸೈಟ್‌ಗಳ ಬಗ್ಗೆಯೂ ಇಂಟರ್‌ಪೋಲ್‌ ಎಚ್ಚರಿಸಿದೆ. ನಕಲಿ ಲಸಿಕೆ, ಕಳಪೆ ಮೆಡಿಕಲ್‌ ಡಿವೈಸ್‌ ಮಾರುವ ಈ ವೆಬ್‌ಸೈಟ್‌ಗಳಿಂದ ಗ್ರಾಹಕರಿಗೆ ಎದುರಾದ 1,700ಕ್ಕೂ ಅಧಿಕ ಸೈಬರ್‌ ಬೆದರಿಕೆಗಳನ್ನೂ ಸಂಸ್ಥೆ ಗಮನಿಸಿದೆ. ಈ ಸಂಬಂಧ ಇಂಟರ್‌ಪೋಲ್‌ ಜತೆಗೂಡಿ ಕಾರ್ಯನಿರ್ವಹಿಸುವ ಭಾರತದ ಸಿಬಿಐಗೂ ನೋಟಿಸ್​ ನೀಡಲಾಗಿದ್ದು, ಇಂಥ ಜಾಲದ ಮೇಲೆ ಕಣ್ಣಿಡಲು ಸೂಚನೆ ರವಾನೆಯಾಗಿದೆ.
ಮದುವೆ ದಿಬ್ಬಣದ ಟ್ರ್ಯಾಕ್ಟರ್​ ಪಲ್ಟಿ: ಮದುಮಗ, ಅಪ್ಪ-ಅಮ್ಮ ಸೇರಿ 6 ಸಾವು

‘2023ರಲ್ಲಿ ಕುಮಾರಸ್ವಾಮಿಯೇ ಸಿಎಂ- ಇದು ನಾನು ಹೇಳ್ತೀರೋ ಭವಿಷ್ಯ’

ಕರೊನಾ ಸೋಂಕು ತಗುಲಲಿ ಎಂದು ಇಂಜೆಕ್ಷನ್​ ಚುಚ್ಚಿಕೊಂಡ ಪ್ರಸಿದ್ಧ ಡಾಕ್ಟರ್​!

ವೀರ್ಯ ಕೌಂಟ್​ ಕಡಿಮೆ ಇದ್ದು ಮಕ್ಕಳಾಗದಿದ್ದರೆ ದಿಢೀರ್​ ನಿರ್ಧಾರಕ್ಕೆ ಬರಬೇಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 7 =
Remember me
