ಲಡಾಖ್‌:ಚಳಿ, ಮಳೆ, ಬಿಸಿಲು ಎನ್ನದೇ ಗಡಿಕಾಯುವ ಯೋಧರ ದೇಶಪ್ರೇಮವೇ ಊಹೆಗೆ ನಿಲುಕದ್ದು. ಒಂದಿನಿತು ಚಳಿ, ಬಿಸಿಲು ಸ್ವಲ್ಪ ಹೆಚ್ಚಿಗೆ ಇದ್ದರೆ ಸಾಕು, ಮನೆಯಿಂದ ಹೊರಕ್ಕೆ ಹೋಗಲೂ ಆಗದೇ, ಮನೆಯ ಒಳಗೂ ಇರಲು ಆಗದ ಸಾಮಾನ್ಯ ಜನರೆಲ್ಲಿ, ಮೈನಸ್‌ ವಾತಾವರಣ ಇದ್ದರೂ, ಬಿರುಬಿಸಲೇ ಇದ್ದರೂ ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುವ ಆ ಯೋಧರೆಲ್ಲಿ?
ಇಂದು ಕೂಡ ಮೈ ಕೊರೆಯುವ ಚಳಿಯ ನಡುವೆಯೇ ದೇಶಪ್ರೇಮವನ್ನು ಮೆರೆದಿದ್ದಾರೆ ಭಾರತೀಯ ಯೋಧರು. ಯಾವ ಕ್ಷಣವಾದರೂ ಕುತಂತ್ರ ಬುದ್ಧಿ ಉಪಯೋಗಿಸಿ ಭಾರತದ ಒಳಗೆ ನುಸುಳಲು ಕಾಯುತ್ತಿರುವ ಚೀನಾದ ಸೈನಿಕರ ಮೇಲೆ ಕಣ್ಣಿಡುತ್ತಲೇ ಲಡಾಖ್‌ ಗಡಿಯಲ್ಲಿ ಭಾರತದ ತ್ರಿವರ್ಣ ಧ್ವಜ ಹಾರಿಸಿ ಬಂದಿದ್ದಾರೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ).
ಅದೂ 16 ಸಾವಿರ ಅಡಿ ಮೇಲಕ್ಕೇರಿ ಬಾರ್ಡರ್‌ ಔಟ್‌ಪೋಸ್ಟ್‌ ಆಗಿರುವ ಲಡಾಖ್‌ ಬಳಿ ತ್ರಿವರ್ಣ ಧ್ವಜ ಹಾರಿಸಿ 72ನೇ ಗಣರಾಜ್ಯವನ್ನು ಆಚರಿಸಿದ್ದಾರೆ. ಕೆಳಭಾಗದಲ್ಲಿಯೇ ಈ ಪರಿಯಲ್ಲಿ ಚಳಿ ಇರುವಾಗ 16 ಸಾವಿರ ಅಡಿ ಮೇಲೆ ಹೇಗಿರಬಹುದು ಎಂದು ಊಹಿಸಬಲ್ಲಿರಾ? ಊಹಿಸಲೂ ಅಸಾಧ್ಯ ಎನಿಸುವ ಚಳಿ ಅಲ್ಲಿದ್ದು, ಅದನ್ನೂ ಲೆಕ್ಕಿಸದೇ ಬಾವುಟ ಹಾರಿಸಿ ದೇಶಪ್ರೇಮ ಮೆರೆದಿದ್ದಾರೆ ಈ ಯೋಧರು.
ಹಿಮದ ಮಧ್ಯೆಯೇ ಪರೇಡ್‌ಗಳನ್ನು ನಡೆಸಿ ಗಣರಾಜ್ಯವನ್ನು ಸಂಭ್ರಮಿಸಿದರು. ಭಾರತ ಮಾತಾ ಕೀ ಜೈ ಎನ್ನುವ ಘೋಷಣೆ ಕೂಗಿ ಸಂಭ್ರಮಿಸಿದರು.
ಬಿಗಿ ಬಂದೋಬಸ್ತ್‌ ನಡುವೆ ಇಂದು ಗಣರಾಜ್ಯೋತ್ಸವ- ಶುಭ ಕೋರಿದ ರಾಷ್ಟ್ರಪತಿ, ಪ್ರಧಾನಿ

ಆರನೇ ಪತ್ನಿ ಸೆಕ್ಸ್‌ಗೆ ಒಪ್ಪಲಿಲ್ಲ ಎಂದು ಏಳನೇ ವಧುವಿಗಾಗಿ ಹುಡುಕಾಡುತ್ತಿದ್ದಾನೆ ಈ ವೃದ್ಧ!

ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಭಟನಾ‌ ಪರೇಡ್‌: ಪ್ರತಿ ಹಳ್ಳಿಯಿಂದಲೂ ಟ್ರ್ಯಾಕ್ಟರ್‌

ರಾಹುಲ್‌ಗಾಂಧಿ ಬಾಯಲ್ಲಿ ‘ನಿಕ್ಕರ್‌ವಾಲಾ’… ಟ್ರಾನ್ಸ್‌ಲೇಟರ್‌ ಬಾಯಲ್ಲಿ ‘ಲಿಕ್ಕರ್‌ವಾಲಾ’ ಆದಾಗ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen + 11 =
Remember me
